ಜೆಡಿಎಸ್ ನಾಯಕರು ಬಿಜೆಪಿ ಕಾಂಗ್ರೆಸ್ ಜೊತೆ ಸಮಾನ ಅಂತರವನ್ನು ಕಾಪಾಡಲು ಮುಂದಾಗಿದ್ದಾರೆ. ರಾಜ್ಯಸಭೆಯಲ್ಲಿನಡೆದ ಅಡ್ಡ ಮತದಾನದ ಮಾಡಿದ ಶಾಸಕರ ವಿರುದ್ದ ಅನರ್ಹತೆ ಅಸ್ತ್ರ ಪ್ರಯೋಗಿಸಲು ದಳಪತಿ ಮುಂದಾಗಿದ್ದಾರೆ. ಹಾಗೇ ಕಾಂಗ್ರೆಸ್ ಮಣಿಸಲು ಮತ್ತೊಂದು ಪ್ಲ್ಯಾನ್ ಹಾಕಿಕೊಂಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಾಚಾರ ಬುಡಮೇಲಾಗಿತ್ತು. ಕಾಂಗ್ರೆಸ್ ಕಡೆಯದಾಗಾದ್ರೂ ಬೆಂಬಲಿಸೋದಾಗಿ ಭಾವಿಸಿದ್ರೂ ಕೈಪಡೆ ಕೊನೆಯವರೆಗೂ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಹಾಗೇ ಇತ್ತ, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಆಗದೇ, ತಮ್ಮ ಮತವನ್ನು ಸಂಪೂರ್ಣ ಹಿಡಿದಿಟ್ಟು ಹಾಕಿಸಲು ಆಗದೆ ಜೆಡಿಎಸ್ ಪೇಚಿಗೆ ಸಿಲುಕಿತ್ತು. ಹೀಗಾಗಿ ಅಡ್ಡಮತದಾನ ಮಾಡಿದ ಎರಡು ಕ್ಷೇತ್ರವನ್ನು ಗೆಲ್ಲಲೇಬೇಕಂತೆ ಪಣ ತೊಟ್ಟಿದೆ.ಇದ್ರ ಮೊದಲನೇ ಭಾಗವಾಗಿ ಪಕ್ಷದಿಂದ ಉಚ್ಛಾಟನೆ ಮಾಡೋದಾಗಿ ಸಿಎಂ ಇಬ್ರಾಹಿಂ ಘೋಷಿಸಿದ್ದಾರೆ.ಹಾಗೇ ಶಾಸಕರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಸ್ಪೀಕರ್‌ಗೆ ಬುಧವಾರ ಶಾಸಕತ್ವದಿಂದ ಅನರ್ಹ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ದೂರು ನೀಡಲಿದೆ.
ಒಂದು ವೇಳೆ ಪಕ್ಷದ ವಿಪ್ ಉಲ್ಲಂಘಿಸಿದ್ದಕ್ಕೆ ಅನರ್ಹತೆ ಘೋಷಿಸಿದ್ರೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕಷ್ಟವಾಗುತ್ತದೆ. ಈ ಸ್ಟ್ರಾಟಜಿಯನ್ನು ಮಾಡಿ, ನಮಗೆ ಸ್ಪೀಕರ್ ತಿಳಿದವರಿದ್ದಾರೆ. ಅವರು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.ಹಾಗೆ ಮೊದಲು ಬಿಜೆಪಿಯ ತಮ್ಮ ಮೊದಲ ಶತ್ರು ಅಂತ ಜೆಡಿಎಸ್ ಭಾವಿಸಿತ್ತು.ಆದ್ರೆ, ಇದೀಗ ಕಾಂಗ್ರೆಸ್ ಬಿಜೆಪಿಗಳೆರಡೂ ಸಮಾನ ಶತ್ರುವೆಂದು ಚುನಾವಣೆಗೆ ಹೋಗಲು ನಿರ್ಧರಿಸಿದೆ.ಕಳೆದ ಬಾರಿ ಕಾಂಗ್ರೆಸ್ ಚುನಾವಣೆಯಲ್ಲಿ ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಮ್ ಎಂದು ಪ್ರಚಾರ ಮಾಡಿತ್ತು.ಇದೀಗ ಜೆಡಿಎಸ್‌ಗೆ ಬಹುದೊಡ್ಡ ಪೆಟ್ಟನ್ನೇ ಕೊಟ್ಟಿತ್ತು.ಆದ್ರೆ, ಇದೀಗ ಇದೇ ಅಸ್ತ್ರವನ್ನು ಕಾಂಗ್ರೆಸ್ ವಿರುದ್ಧ ಬಳಸಲು ಹೊರಟಿದೆ. ಕಾಂಗ್ರೆಸ್ ನಾಯಕರೇ ಗುಬ್ಬಿ ಶ್ರೀನಿವಾಸ್‌ಗೆ ಬಿಜೆಪಿಗೆ ಮೊದಲ ಮತ ಹಾಕಲು ಹೇಳಿದ್ದಾರೆ ಅಂತ JDS ಆರೋಪಿಸುತ್ತಿದೆ.
ಒಟ್ಟಿನಲ್ಲಿ ಅಡ್ಡಮತದಾನದ ಬಳಿಕ ಬಿಜೆಪಿಗಿಂತಲೂ ಕಾಂಗ್ರೆಸ್‌ನ ಮೇಲೆ ಜೆಡಿಎಸ್‌ಗೆ ಮುನಿಸು ಹೆಚ್ಚಾಗಿದೆ. ಚುನಾವಣೆಯಲ್ಲೂ ಕಾಂಗ್ರೆಸ್ಸನ್ನು ಬಿಜೆಪಿಯ ಬಿ.ಟೀಂ ಎಂದ ಬಿಂಬಿಸಲು ದಳಪತಿಗಳು ಹೊರಟಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಕ್ಯಾಮರಾಮನ್ ರಮೇಶ್ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ