Monday, December 23, 2024

ಭಾರತದಿಂದ ರವಾನೆಯಾದ ಬುದ್ಧನ ಕುರುಹುಗಳು ಮಂಗೋಲಿಯಾದಲ್ಲಿ ಪ್ರದರ್ಶನ

ಮಂಗೋಲಿಯಾ: ಮಂಗೋಲಿಯನ್‌ ಬುದ್ಧ ದಿನದ ಸಂದರ್ಭದಲ್ಲಿ ಭಾರತ ಮತ್ತು ಮಂಗೋಲಿಯಾದಿಂದ ಭಗವಾನ್‌ ಬುದ್ಧನ ಕುರುಹುಗಳನ್ನು ಇಲ್ಲಿನ ಗಂಧನ್ ವಿಹಾರದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ನೇತೃತ್ವದ ನಿಯೋಗವು ಭಾರತದಿಂದ ತಂದ ನಾಲ್ಕು ಪವಿತ್ರ ಕಪಿಲವಸ್ತು ಮತ್ತು ಮಂಗೋಲಿಯಾದ ಇತರೆ ಕುರುಹುಗಳು ಇದೇ 24ರ ವರೆಗೆ ಪ್ರದರ್ಶನಗೊಳ್ಳಲಿವೆ. ಈ ವೇಳೆ ಕೇಂದ್ರ ಸಚಿವ ರಿಜಿಜು, ಮಂಗೋಲಿಯಾ ಸಂಸತ್ತಿನ ಸ್ಪೀಕರ್, ಗಂಧನ್ ವಿಹಾರದ ಖಂಬಾ ನೋಮುನ್ ಖಾನ್, ವಿದೇಶಿ ಗಣ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಬೌದ್ಧ ಬಿಕ್ಕುಗಳು ಹಾಜರಿದ್ದರು.

‘ಮಂಗೋಲಿಯನ್ ಬುದ್ಧ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರ ಪರವಾಗಿ ಮಂಗೋಲಿಯಾ ಜನರಿಗೆ ಬುದ್ಧ ದಿನದ ಶುಭಾಶಯ ತಿಳಿಸಿದ್ದೇನೆ. ಕಪಿಲವಸ್ತು ಕುರುಹುಗಳ ಆಗಮನದಿಂದ ಭಾರತ ಮತ್ತು ಮಂಗೋಲಿಯಾ ನಡುವಿನ ಐತಿಹಾಸಿಕ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ರಿಜಿಜು ಹೇಳಿದರು.

ಭಾರತವು ಬುದ್ಧನ ಶಾಂತಿಯ ಸಂದೇಶವನ್ನು ಜಗತ್ತಿಗೆ ಒಯ್ಯುತ್ತಿದೆ ಎಂದು ಸಚಿವರು ಹೇಳಿದರು.

RELATED ARTICLES

Related Articles

TRENDING ARTICLES