Thursday, December 19, 2024

ಹಿಂದೂಪರ ಸಂಘಟನೆಗಳಿಂದ ಬಿಬಿಎಂಪಿಗೆ ಡೆಡ್‌ಲೈನ್​..!

ಚಾಮರಾಜನಗರ : ಈದ್ಗಾ ಮೈದಾನದ ಸುತ್ತಲೂ ಬಿಬಿಎಂಪಿ 12 ಕಂಬಗಳನ್ನು ನೆಟ್ಟಿದ್ದು, ಸಿಸಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ಅಂತಿಮಗೊಳಿಸಿದೆ. ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದೆ. ಪೊಲೀಸ್ ಇಲಾಖೆ ಮನವಿ ಮೇರೆಗೆ ಬಿಬಿಎಂಪಿ ಈ ವ್ಯವಸ್ಥೆ ರೂಪಿಸಿದೆ. ಮೊನ್ನೆ ನೆಟ್ಟಿದ್ದ 3 ಕಂಬಗಳ ಪೈಕಿ ರಾತ್ರೋರಾತ್ರಿಯೇ 2 ಕಂಬಗಳನ್ನು ಪುಂಡರು ಉರುಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜೆಯೊಳಗೆ ಮೈದಾನಕ್ಕೆ ಲೈಟಿಂಗ್ ವ್ಯವಸ್ಥೆ, ಇನ್ನೆರಡು ದಿನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಬಿಬಿಎಂಪಿ ಸಿದ್ಧತೆ ಮಾಡಿದೆ.

ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ನೀಡುವ ಬಗ್ಗೆ ಮಂಗಳವಾರ ಮಧ್ಯಾಹ್ನ 3 ಗಂಟೆಯ ಒಳಗೆ ನಿಲುವು ತಿಳಿಸಬೇಕೆಂದು ಕೋರಿ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಡೆಡ್​ಲೈನ್​ ಕೊಟ್ಟಿವೆ. ಆಗಸ್ಟ್​ 14 ಮತ್ತು 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋಡಬೇಕು ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಜೂನ್ 7ರಂದು ಮನವಿ ಸಲ್ಲಿಸಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಅನುಮತಿ ಕೊಡುವುದು ಅಥವಾ ಇಲ್ಲ ಎನ್ನುವ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು. ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೊಡದಿದ್ದರೆ, ನ್ಯಾಯಾಲಯದ​ ಮೊರೆ ಹೋಗುವುದಾಗಿ ವಿಶ್ವ ಸನಾತನ ಪರಿಷತ್​​ ಅಧ್ಯಕ್ಷ ಎಸ್.ಭಾಸ್ಕರ್ ಎಚ್ಚರಿಸಿದ್ದಾರೆ.

ಇನ್ನು, ಹಿಂದೂಪರ ಸಂಘಟನೆಗಳ ಮನವಿಗೆ ಅನುಮತಿ ಸಿಗೋ ಲಕ್ಷಣಗಳು ಕಾಣಿಸ್ತಿಲ್ಲ. ಬಿಬಿಎಂಪಿಗೆ ಡೆಡ್ ಲೈನ್ ನೀಡಿದ್ರೂ ಅನುಮತಿ ಸಿಗೋದು ಕಷ್ಟ ಎನ್ನಲಾಗುತ್ತಿದೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್, ನಮ್ಮ ದಾಖಲೆಗಳಲ್ಲಿ ಬಿಬಿಎಂಪಿ ಆಟದ ಮೈದಾನ ಅಂತಿದೆ. ಆಟ ಆಡೋಕೆ ಯಾವುದೇ ಅಭ್ಯಂತರ ಇಲ್ಲ. ಆದ್ರೆ ಹಿಂದೂಪರ ಸಂಘಟನೆಗಳು ಸ್ವಾತಂತ್ರ್ಯ, ಯೋಗಾ ದಿನಾಚರಣೆಗೆ ಕೇಳಿದ್ದಾರೆ‌. ಮತ್ತೊಂದು ಕಡೆ ವಕ್ಫ್ ಬೋರ್ಡ್ ನಿಂದ ನಮಗೆ ಪತ್ರ ಬರೆದಿದ್ದು, ಚಾಮರಾಜಪೇಟೆ ಮೈದಾನ ನಮ್ಮ ವ್ಯಾಪ್ತಿಗೆ ಬರುತ್ತೆ ಅಂತಿದ್ದಾರೆ. ಇದನ್ನ ಪರಿಶೀಲನೆ ನಡೆಸಲು ಮುಖ್ಯ ಕಚೇರಿಗೆ ಕಳುಹಿಸಿದ್ದೇನೆ. ನಂತರ ಏನು ತೀರ್ಮಾನ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುತ್ತೆ ಅಂತ ಸ್ಪಷ್ಟನೆ ನೀಡಿದ್ದಾರೆ‌.

ಸದ್ಯ ಚಾಮರಾಜಪೇಟೆ ಮೈದಾನ ಯುದ್ಧಭೂಮಿಯ ರೀತಿ ಮಾರ್ಪಾಡಾಗುತ್ತಿದೆ. ಅತ್ತ ವಕ್ಫ್ ಬೋರ್ಡ್ ನಮಗೆ ಸೇರುತ್ತೆ ಅಂತಿದ್ರೆ, ಇತ್ತ ಪಾಲಿಕೆ ಆಟದ ಮೈದಾನ ಎನ್ನುತ್ತಿದೆ. ಇದೆಲ್ಲದರ ನಡುವೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮಂಗಳವಾರವರೆಗೆ ಡೆಡ್ ಲೈನ್ ಕೊಟ್ಟಿದ್ದು, ಅನುಮತಿ ಸಿಗದಿದ್ರೆ ಕೋರ್ಟ್ ಮೊರೆ ಹೋಗುವ ಲೆಕ್ಕಾಚಾರಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈದಾನದ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತೊ ಕಾದು ನೋಡ್ಬೇಕಿದೆ.

RELATED ARTICLES

Related Articles

TRENDING ARTICLES