Wednesday, December 25, 2024

ಜೆಸ್ಕಾಂಗೆ ವಂಚನೆ : 38 ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ

ಬಳ್ಳಾರಿ : ಗ್ರಾಮಗಳ ಅಭಿವೃದ್ಧಿ ಮೂಲಕ ಗ್ರಾಮಪಂಚಾಯತಿಗಳು ಎಲ್ಲರಿಗೂ ಮಾದರಿಯಾಗಬೇಕು. ಆದ್ರೆ ನಾವು ತೋರಿಸೋ ಗ್ರಾಮಪಂಚಾಯತಿಗಳು ಅಭಿವೃದ್ಧಿ ಮಾಡೋದಿರಲಿ ವಿದ್ಯುತ್ ಬಿಲ್ ಪಾವತಿಸದೇ ಜೆಸ್ಕಾಂ ಸಿಬ್ಬಂದಿಗಳು ಗ್ರಾಮ ಪಂಚಾಯತಿಗಳಿಗೆ ಅಲೆದು ಅಲೆದು ಸಾಕಾಗುವಂತೆ ಮಾಡಿವೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಹಾಗೂ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಜೆಸ್ಕಾಂ ವ್ಯಾಪ್ತಿಯ 22 ಗ್ರಾಮ ಪಂಚಾಯತ್​​ಗಳ ಕಥೆ. ಕಂಪ್ಲಿ ಮತ್ತು ಹೊಸಪೇಟೆ ತಾಲೂಕಿನ ಈ ಗ್ರಾಮ ಪಂಚಾಯತ್​ಗಳು ಕಳೆದ ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿವೆ. ಬಿಲ್ ಕಟ್ಟಿ ಎಂದು ಹೇಳುತ್ತಾ ಜೆಸ್ಕಾಂ ಸಿಬ್ಬಂದಿಗಳು ಗ್ರಾಮ ಪಂಚಾಯತಿಗಳಿಗೆ ಅಲೆದು ಅಲೆದು ಸಾಕಾಗಿದ್ದಾರೆ.

ಬಡವರು ವಿದ್ಯುತ್ ಬಿಲ್ ಕಟ್ಟದೇ ಇದ್ರೆ, ಮರುಕ್ಷಣ ಪವರ್ ಕಟ್ ಮಾಡೋ ಜೆಸ್ಕಾಂ ಗ್ರಾಮಪಂಚಾಯತಿಗಳು ಕೋಟಿಗಟ್ಟಲೇ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಹೊಸಪೇಟೆ ತಾಲೂಕಿನ ಡಣಾಪುರ ಪಂಚಾಯತಿ, 6 ಲಕ್ಷ 41ಸಾವಿರ, ಡಣಾಯಕನಕೆರೆ ಪಂಚಾಯತ್ 2 ಲಕ್ಷ 74 ಸಾವಿರ, ಚಿಲಕನಹಟ್ಟಿ ಪಂಚಾಯತ್ 3 ಲಕ್ಷ 24 ಸಾವಿರ, ನಾಗಲಾಪುರ 3 ಲಕ್ಷ 18 ಸಾವಿರ, ಬೈಲುವದ್ದಿಗೇರಿ 2 ಲಕ್ಷ 21 ಸಾವಿರ ಬಾಕಿ ಉಳಿಸಿಕೊಂಡಿವೆ. ಈ ಗ್ರಾ.ಪಂ.ಗಳು ಉಳಿಸಿಕೊಂಡಂತೆ ಉಳಿದ ಪಂಚಾಯತ್​ಗಳು ಸಹ ಬಾಕಿ ಉಳಿಸಿಕೊಂಡಿದ್ದು, ಬಾಕಿ ವಸೂಲಾತಿಗೆ ಜೆಸ್ಕಾಂ ಸಿಬ್ಬಂದಿಗಳು ಪರದಾಡುವಂತಾಗಿದೆ.

ಬಾಕಿ ಬಿಲ್ ಕಟ್ಟಿ ಅಂತ ಪತ್ರ ವ್ಯವಹಾರವನ್ನೂ ಸಹ ಮಾಡಲಾಗಿದ್ದು, ಕಟ್ಟಬೇಕಾದ ಬಾಕಿ ಕಟ್ಟದೇ ಇದ್ರೆ, ಸ್ಥಾವರಗಳನ್ನು ಬಂದ್ ಮಾಡಲಾಗುತ್ತದೆ ಅನ್ನೋ ಎಚ್ಚರಿಕೆಯನ್ನೂ ಸಹ ಜೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ.

ಶಿವಕುಮಾರ್ ಪವರ್ ಟಿವಿ ಬಳ್ಳಾರಿ

RELATED ARTICLES

Related Articles

TRENDING ARTICLES