Wednesday, January 22, 2025

ಕಾಳಿ ಉತ್ಸವ: ಭಕ್ತರ ಮೇಲೆ ಬಿದ್ದ ತೇರು ಸ್ಥಳದಲ್ಲೇ 2 ಸಾವು

ಆನೇಕಲ್ ( ಬೆಂಗಳೂರು ಗ್ರಾಮಾಂತರ ): ಕಾಳಿಯಮ್ಮ ಉತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದ ಇಬ್ಬರು ಸಾವನಪ್ಪಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ.

ಮನೋಹರಂ‌ ಹಾಗು ಶರವಣನ್ ಮೃತ ಪಟ್ಟ ದುರ್ದೈವಿಗಳು. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಸಹ ಅದ್ದೂರಿಯಾಗಿ ನಡೆದ ಕಾಳಿಯಮ್ಮ ದೇವಿ ಜಾತ್ರೆಯಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಸಹ ನೂರಾರು ಭಕ್ತರು ರಥವನ್ನು ಎಳೆಯಲಾಗುತ್ತಿತ್ತು. ಈ ವೇಳೆ ರಥದ ಚಕ್ರ ತುಂಡಾಗಿ ತೇರು ಭಕ್ತರ ಮೇಲೆ ಉರುಳಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಈ ಜಾತ್ರೆಯಲ್ಲಿ ಸುಮಾರು 18ಹಳ್ಳಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಘಟನೆಗೆ ಸಂಭಂದಿಸಿದಂತೆ ಪಾಪರ ಪಟ್ಟಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES