ಬೆಂಗಳೂರು: ಬಿಡಿಎ ಕೇಂದ್ರ ಕಚೇರಿ ಮೇಲೆ ಎಸಿಬಿ ರೇಡ್ ಆಗಿ 8 ತಿಂಗಳು ಆಯ್ತು ಆದರೂ ಒಬ್ಬ ಕ್ಲರ್ಕ್ ವಿರುದ್ದವೂ ತನಿಖೆ ಆಗಿಲ್ಲ.
ಬಡವರ ಕಾಸು ನುಂಗಿದ ಭ್ರಷ್ಟ ಅಧಿಕಾರಿಗಳ ಮೇಲೆ ತನಿಖೆ ಏನಾಯಿತು..!? ಹಳ್ಳ ಹಿಡಿತ್ತಾ ಬಿಡಿಎ ಭ್ರಷ್ಟರ ಮೇಲಿನ ಎಸಿಬಿ ತನಿಖೆ..? ಇದುವರಿಗೆ ಬಿಡಿಎ ನಲ್ಲಿ ಒಬ್ಬ ಕ್ಲರ್ಕ್ ವಿರುದ್ದವೂ ತನಿಖೆ ಆಗಿಲ್ಲ. ಬರೀ ಬಿಲ್ಡಪ್ ಮಾತ್ರ ದಾಳಿ ಮಾಡಿ ಸುಮ್ಮನೆ ಆದ್ರಾ ಎಸಿಬಿ ಆಫೀಸರ್ಸ್ ಬಿಡಿಎ ಭ್ರಷ್ಟರನ್ನ ರಕ್ಷಣೆ ಮಾಡುತ್ತಿದ್ಯಾ ರಾಜ್ಯ ಸರ್ಕಾರ..? ಭ್ರಷ್ಟರ ವಿರುದ್ಧ ತನಿಖೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಅದಲ್ಲದೆ, ಕೋಟಿ ಕೋಟಿ ನುಂಗಿದವರಿಗೆ ಶಿಕ್ಷೆ ಯಾವಾಗ..? ಹೆಸರಿಗೆ ಮಾತ್ರ ಬಿಡಿಎ ಅಧಿಕಾರಿಗಳ ಮೇಲೆ ರೇಡ್ ಮಾಡಿ ಸುಮ್ಮನೆ ಆಯ್ತಾ ಎಸಿಬಿ..? ನಗರಾಭಿವೃದ್ಧಿ ಇಲಾಖೆಯಿಂದ ತನಿಖೆಗೆ ಅನುಮತಿ ಸಿಕ್ಕಿಲ್ಲ. ರೇಡ್ ಬಳಿಕ 150 ಮಂದಿಯ ತನಿಖೆಗೆ ಪಟ್ಟಿ ರೆಡಿ ಮಾಡಿದ್ದ ಎಸಿಬಿ. 10 ವರ್ಷಗಳ ಅವ್ಯವಹಾರದ ದಾಖಲೆ ರೆಡಿ ಮಾಡಿ ಎಸಿಬಿ ತನಿಖೆಗೆ ಕಾಯ್ತಿದ್ದಾರೆ.
ಇನ್ನು, ದಾಖಲೆಗಳನ್ನ ಪರಿಶೀಲಿಸಿ ಅನುಮತಿ ಕೊಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದ್ದ ಸಿಎಂ ಆದರೆ ನಗರಾಭಿವೃದ್ಧಿ ಇಲಾಖೆ ತನಿಖೆ ಜಾಣಮೌನ ಆಗಿದ್ದು, ಬಿಡಿಎ ಲೇಔಟ್ ಗಳಲ್ಲಿ ಕೋಟಿ ಕೋಟಿ ಅಕ್ರಮ ಮಾಡಿದ್ರೂ ಕ್ರಮ ಕೈಗೊಳ್ಳದ ಸರ್ಕಾರ. ಎಸಿಬಿ ದಾಳಿ ಮಾಡಿ ತಿಂಗಳುಗಟ್ಟಲೆ ಆಗಿದ್ರೂ ಭ್ರಷ್ಟರಿಗೆ ಇನ್ನೂ ಶಿಕ್ಷೆ ಆಗಿಲ್ಲ.