Monday, December 23, 2024

‘ವಿಕ್ರಮ್’ ಸಕ್ಸಸ್ ಪಾರ್ಟಿಯಲ್ಲಿ ಸಲ್ಲು, ಚಿರು ಕಮಾಲ್..!

ಸಿನಿಮಾದಲ್ಲಿ ಗೆದ್ದಿದ್ದು ಬೇರೆ ಯಾರೋ, ಆದ್ರೇ ಪಾರ್ಟಿ ಕೊಟ್ಟವರು ಬೇರೆ ಇನ್ನಾರೋ. ಒಂದಕ್ಕೊಂದು ಸಿಂಕ್ ಆಗ್ತಿಲ್ಲ. ಆದ್ರೂ ಕೂಡ ಇಂತಹ ಅಚ್ಚರಿಗೆ ಸಾಕ್ಷಿಯಾಗಿದೆ ಮೆಗಾಸ್ಟಾರ್​ ಚಿರಂಜೀವಿ ನಿವಾಸ. ಸೌತ್​ ಸೂಪರ್​ ಸ್ಟಾರ್ಸ್​​ ಜೊತೆ ಸಲ್ಲು ಕೂಡ ಮಿಂಗಲ್​ ಆಗಿ ಸಕ್ಸಸ್​ ಪಾರ್ಟಿ ಮಾಡಿದ್ದಾರೆ. ಒಂದಕ್ಕೊಂದು ತಾಳ ಮೇಳ ಇಲ್ಲಾ ಅಂತಾ ಕನ್ಫ್ಯೂಸ್​ ಆಗ್ತಿದ್ದೀರಾ..?

‘ವಿಕ್ರಮ್’ ಸಕ್ಸಸ್ ಪಾರ್ಟಿಯಲ್ಲಿ ಸಲ್ಲು, ಚಿರು ಕಮಾಲ್..!

ಪಾರ್ಟಿ ಮುಗಿಸಿ ಕಮಲ್​​ ಹಾಸನ್​ಗೆ, ಮೆಗಾಸ್ಟಾರ್​​ ಸನ್ಮಾನ

ಗೆಳೆಯನ ಜೊತೆ ಮೆಗಾಸ್ಟಾರ್​ ಪಾರ್ಟಿಗೆ ಕಾರಣವೇನು..?

ಪಾರ್ಟಿಗೆ ಕಳೆ ತಂದ ಬಾಲಿವುಡ್​ ಭಾಯಿಜಾನ್​ ಸಲ್ಲು..!

ಕಮಲ್​ ಹಾಸನ್​ ಅಭಿನಯದ ಅದ್ಧೂರಿ ಸಿನಿಮಾ ವಿಕ್ರಮ್​​ ಕೋಟಿ ಕೋಟಿ ಲೂಟಿ ಮಾಡಿ ಚಿತ್ರರಂಗದಲ್ಲೆ ಹೊಸ ದಾಖಲೆ ಬರೆದಿದೆ. ವಿಕ್ರಮ್​ ಚಿತ್ರದ ಸಕ್ಸಸ್​​ ಕಮಲ್​ ಹಾಸನ್​ಗೆ ಬಿಗ್​ ಬ್ರೇಕ್​ ತಂದುಕೊಟ್ಟಿದೆ. ಈ ಖುಷಿಯಲ್ಲಿ ಕಮಲ್​ ಹಾಸನ್​​ ರೊಲೆಕ್ಸ್​​ ರೋಲ್​ ಮಾಡಿದ್ದ ನಟ ಸೂರ್ಯ ಅವರಿಗೆ ರೊಲೆಕ್ಸ್​ ವಾಚ್​ ಗಿಫ್ಟ್​ ಮಾಡಿ ಸುದ್ದಿ ಮಾಡಿದ್ರು. ಜೊತೆಗೆ ನಿರ್ದೇಶಕ ಲೋಕೇಶ್​ ಅವರಿಗೆ ಕಾರ್​ ಗಿಫ್ಟ್​ ನೀಡಿದ್ರು. ಒಟ್ಟಾರೆ ಕಮಲ್​ ಹಾಸನ್​​ ಈಗ ಜಾಲಿ ಮೂಡ್​ನಲ್ಲಿದ್ದಾರೆ.ಸಕಲಕಲಾವಲ್ಲಭ, ನಟ ಭಯಂಕರ ಕಮಲ್​ ಹಾಸನ್​​ ನಟಿಸಿರುವ ವಿಕ್ರಮ್​ ಸಿನಿಮಾ ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಅಬ್ಬರಿಸ್ತಾ ಇದೆ. ತೆರೆಕಂಡ ಎಲ್ಲಾ ಥಿಯೇಟರ್​​ನಲ್ಲೂ ಫುಲ್​ ಹೌಸ್​ ಪ್ರದರ್ಶನ ಕಾಣ್ತಿದೆ. ಬಾಕ್ಸ್​ ಆಫೀಸ್​ ಲೆಕ್ಕಾಚಾರಗಳೆಲ್ಲಾ ಧೂಳಿಪಟವಾಗಿವೆ. ಇದೀಗ ಗೆಳೆಯನ ಯಶಸ್ಸಿನ ಸಂಭ್ರಮವನ್ನು ಮೆಗಾಸ್ಟಾರ್​ ಚಿರಂಜೀವಿ ತಮ್ಮ ನಿವಾಸದಲ್ಲಿ ಸೆಲೆಬ್ರೇಟ್​ ಮಾಡಿದ್ದಾರೆ.

ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ ಹಾಗೂ ಕಮಲ್​​ ಹಾಸನ್​ ಪ್ರಾಣ ಸ್ನೇಹಿತರು. ಗೆಳೆಯನ ಸಿನಿಮಾ ಸಕ್ಸಸ್​​​ನ್ನು ಎಂಜಾಯ್​ ಮಾಡ್ಬೇಕು ಅಂತಾ ಚಿರಂಜೀವಿ ತಮ್ಮ ನಿವಾಸದಲ್ಲಿ ಗ್ರ್ಯಾಂಡ್​ ಪಾರ್ಟಿ ಆಯೋಜನೆ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ಬಾದ್​ಷಾ ಸಲ್ಮಾನ್​ ಖಾನ್​ ಕೂಡ ಸಾಥ್​ ನೀಡಿ ಶಾಕ್ ಕೊಟ್ಟಿದ್ದಾರೆ. ಗ್ರ್ಯಾಂಡ್​ ಪಾರ್ಟಿ ಮುಗಿದ ನಂತ್ರ ಕಮಲ್​ ಹಾಸನ್​ಗೆ ಶಾಲು ಹೊದಿಸಿ ಸನ್ಮಾನ  ಕೂಡ ಮಾಡಿದ್ದಾರೆ ಚಿರಂಜೀವಿ.

ಈ ಸಂತಸದ ಕ್ಷಣಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಮೆಗಾಸ್ಟಾರ್​​, ನನ್ನ ಪ್ರೀತಿಯ ಗೆಳೆಯನ ಯಶಸ್ಸನ್ನು ಸೆಲೆಬ್ರೇಟ್​ ಮಾಡೋಕೆ ಖುಷಿಯಾಗ್ತಿದೆ. ಅದ್ಭುತ ಸಿನಿಮಾ ವಿಕ್ರಮ್​ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ  ಲೋಕೇಶ್​ ಕನಗರಾಜ್​​, ಸಲ್ಲೂ ಭಾಯ್​​ ಹಾಗೂ ಕಮಲ್​​ಗೆ ಪುಷ್ಫಗುಚ್ಛ ನೀಡಿ ಅಭಿನಂದಿಸಿರುವ ಫೋಟೋಗಳು ಸಕತ್​​ ವೈರಲ್​ ಆಗಿವೆ.

ಏಳೇ ದಿನದಲ್ಲಿ 70ಕೋಟಿಗೂ ಅಧಿಕ ಕಲೆಕ್ಷನ್​ ದೋಚಿರುವ ವಿಕ್ರಮ್​ ಸಿನಿಮಾ ಚಿತ್ರರಸಿಕರ ದಿಲ್​ ಗೆದ್ದಿದೆ. ಎಲ್ಲಕ್ಕಿಂತ ಮಿಗಿಲಾಗಿ ಬಾಲಿವುಡ್​​ನ ಸಲ್ಮಾನ್​ ಖಾನ್​ ಕೂಡ ಭಾಗಿಯಾಗಿ ಖುಷಿಯನ್ನು ಇಮ್ಮಡಿಗೊಳಿಸಿರುವುದು ವಿಶೇಷವಾಗಿದೆ. ಇದಕ್ಕೂ ಮುನ್ನ ಸ್ವಾತಿಮುತ್ಯಂ ಚಿತ್ರ ಸಕ್ಸಸ್​ ಆದಾಗಲೂ ಚಿರಂಜೀವಿ ಸನ್ಮಾನ ಮಾಡಿ ವಿಶ್​ ತಿಳಿಸಿದ್ರು. ಇವರಿಬ್ರ ಸ್ನೇಹಕ್ಕೆ ಸಾಕ್ಷಿಯಾಗಿ ಮತ್ತದೇ ಸನ್ನಿವೇಶ ವಿಕ್ರಮ್​ ಸಿನಿಮಾ ಸಕ್ಸಸ್​​ ನಂತ್ರ ಎದುರಾಗಿದೆ.

ವಿಕ್ರಮ್​ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿರುವ ಸೂರ್ಯ ಅವ್ರ ಅಭಿನಯಕ್ಕೆ ಎಲ್ಲರೂ ಮನಸೋತಿದ್ದಾರೆ. ವಿಜಯ್​ ಸೇತುಪತಿ, ಫಹದ್ ಫಾಸಿಲ್​​ ಪಾತ್ರಗಳು ಇಂಪ್ರೆಸ್ಸಿಂಗ್​ ಆಗಿದೆ. ಒಟ್ಟಾರೆ ಲೋಕೇಶ್​ ಕನಗರಾಜ್​ ಆ್ಯಕ್ಷನ್​ ಕಟ್​ಗೆ  ಪ್ರೇಕ್ಷಕರು ಫಿದಾ ಆಗಿದ್ದಾರೆ.  ಗೆಳೆಯನ ಗೆಲುವನ್ನು ಸಂಭ್ರಮಿಸೋ ಚಿರು ಅವ್ರ ಸ್ನೇಹದ ಪರಿಗೆ ಸೋಶಿಯಲ್​​ ಮೀಡಿಯಾದಲ್ಲಿ ಕಲರ್​ಫುಲ್​ ಕಮೆಂಟ್ಸ್​ ಹರಿದು ಬರ್ತಿವೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES