Monday, December 23, 2024

ಡ್ರಗ್ ಜಾಲದಲ್ಲಿ ಶ್ರದ್ಧಾ ಕಪೂರ್ ಸಹೋದರ.. ಬಿಟೌನ್​ಗೆ ಬೆಂಗಳೂರೇ ಅಟ್ರ್ಯಾಕ್ಷನ್

ಚಿತ್ರರಂಗಕ್ಕೂ, ಡ್ರಗ್ಸ್​ಗೂ ಅಂಟಿದ ಜಿಡ್ಡು ಸದ್ಯದ ಮಟ್ಟಿಗೆ ಮಾಸುವ ಹಾಗೆ ಕಾಣ್ತಿಲ್ಲ.  ಒಬ್ಬರ ಹಿಂದೆ ಒಬ್ಬರಂತೆ ಸಾಲು ಸಾಲಾಗಿ ಡ್ರಗ್ಸ್ ​​ ಕೇಸ್​​ಗಳಲ್ಲಿ ಆರೋಪಿಗಳಾಗ್ತಿದ್ದಾರೆ. ಸ್ಯಾಂಡಲ್​ವುಡ್​​ನಿಂದ ಬಾಲಿವುಡ್​​ಗೂ ವ್ಯಾಪಿಸಿರುವ ಡ್ರಗ್ಸ್​ಜಾಲಕ್ಕೆ ಬೆಂಗಳೂರೇ ಹಾಟ್​ ಸ್ಪಾಟ್​​ ಆಗಿದೆ. ಯೆಸ್​​.. ಬಿಟೌನ್​​ ಈಗ ಡ್ರಗ್ಸ್​​ನಿಂದಾಗಿ ಬ್ಯಾಡ್​ ಟೌನ್​ ಆಗಿದೆ. ಸದ್ಯ, ಡ್ರಗ್ಸ್​ ಸುಳಿಯಲ್ಲಿರೋ ಆ ಸ್ಟಾರ್​ ಯಾರ್​ ಗೊತ್ತಾ..?

ಡ್ರಗ್ ಜಾಲದಲ್ಲಿ ಶ್ರದ್ಧಾ ಕಪೂರ್ ಸಹೋದರ.. ಬಿಟೌನ್​ಗೆ ಬೆಂಗಳೂರೇ ಅಟ್ರ್ಯಾಕ್ಷನ್

ಬಿಟ್ಟೆನೆಂದರೂ ಬಿಡದೀ ಮಾಯೆ..ಡ್ರಗ್ಸ್​ ಮಹಾಮಾರಿ..!

ಮೆಡಿಕಲ್​ ಟೆಸ್ಟ್​​ನಲ್ಲಿ ಸಾಬೀತಾಯ್ತು ಡ್ರಗ್ಸ್​​ ಸೇವನೆ..!

ಟೆಕ್ಕಿ ಪಾರ್ಟಿಯಲ್ಲಿ ಸಿದ್ಧಾಂತ್​ ಕಪೂರ್​​ ಮಾದಕ ವ್ಯಸನ

ಗೋವಾ, ಮಂಗಳೂರು, ಬೆಂಗಳೂರಿನ ದೊಡ್ಡ ದೊಡ್ಡ ರೇವ್​ ಪಾರ್ಟಿಗಳ ಮೇಲೆ ದಾಳಿ​ ಆದಾಗ ಸುಲಭವಾಗಿ ಸ್ಟಾರ್​ ಸೆಲೆಬ್ರಿಟಿಗಳೇ ಸಿಕ್ಕು ಬೀಳ್ತಾರೆ. ಸಮಾಜದಲ್ಲಿ ದೊಡ್ಡ ಫ್ಯಾಮಿಲಿಯೆಂದು ಗುರುತಿಸಿಕೊಂಡ ಸೆಲೆಬ್ರಿಟಿ ಮಕ್ಕಳೆ ಈ ಮಾಯಾಜಾಲದಲ್ಲಿ ಸಿಲುಕಿರುತ್ತಾರೆ. ನೆನ್ನೆ ಮೊನ್ನೆ ಸ್ಯಾಂಡಲ್​ವುಡ್​​ನಲ್ಲಿ  ವ್ಯಾಪಕವಾಗಿ ಸೌಂಡ್​​ ಮಾಡಿದ್ದ ಡ್ರಗ್ಸ್​​ ಜಾಲ, ಬಾಲಿವುಡ್​​ಗೂ ವ್ಯಾಪಿಸಿತ್ತು. ಇದೀಗ ಬಾಲಿವುಡ್​​ನ ಮತ್ತೊಬ್ಬ ಸ್ಟಾರ್​ ನಟನ ಮಗ ಸಿಕ್ಕಿಬಿದ್ದು ಸುದ್ದಿಯಲ್ಲಿದ್ದಾರೆ.

ಬಾಲಿವುಡ್​​ ಕಿಂಗ್​ ಖಾನ್​ ಶಾರುಖ್​​ ಪುತ್ರ ಆರ್ಯನ್​​ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಜೈಲು ಪಾಲಾಗಿ ಇದೀಗ ಕ್ಲೀನ್​ ಚಿಟ್​ ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಯಾಂಡಲ್​ವುಡ್​​ನ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್​ರಾಣಿ ಕೂಡ ಡ್ರಗ್ಸ್​ ಸೇವನೆಯಿಂದಾಗಿ ಜೈಲುವಾಸ ಅನುಭವಿಸಿದ್ದರು. ಸದ್ಯ ಈ ಇಬ್ಬರು ನಟಿಯರು ಜಾಮೀನಿನ ಮೇಲೆ ವಾಪಾಸ್​ ಚಿತ್ರರಂಗಕ್ಕೆ ಮರಳಿದ್ದಾರೆ. ಈ ನಡುವೆ, ಮತ್ತೊಮ್ಮೆ ಬಾಲಿವುಡ್​​ನ ಖ್ಯಾತ ನಟ ಶಕ್ತಿ ಕಪೂರ್​ ಪುತ್ರ ಹಾಗೂ  ಶ್ರದ್ಧಾ ಕಪೂರ್​ ಸಹೋದರ ಸಿದ್ಧಾಂತ್​ ಕಪೂರ್​​ ಡ್ರಗ್ಸ್​ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದಾರೆ.

ಬೆಂಗಳೂರಿನ ಎಮ್​ ಜಿ ರಸ್ತೆಯ ಟ್ರಿನಿಟಿ ಸರ್ಕಲ್​ನಲ್ಲಿ ಪ್ರತಿಷ್ಠಿತ 5 ಸ್ಟಾರ್​ ಹೋಟೆಲ್​ ಒಂದಿದೆ.  ಈ ಹೋಟೆಲ್​  ಮೇಲೆ ಹಲಸೂರಿನ ಪೋಲಿಸರು ದಾಳಿ ನಡೆಸಿ 35ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳಲ್ಲಿ ಖ್ಯಾತ ನಟ ಶಕ್ತಿ ಕಪೂರ್​ ಪುತ್ರ ಸಿದ್ಧಾಂತ್​ ಕಪೂರ್​ ಕೂಡ ಇದ್ದು, ಮೆಡಿಕಲ್​ ಟೆಸ್ಟ್​​ ವರದಿಯಲ್ಲಿ ಡ್ರಗ್ಸ್​ ಸೇವನೆ ಮಾಡಿರುವುದು ಖಚಿತವಾಗಿದೆ.

ರೇವ್​ ಪಾರ್ಟಿಯಲ್ಲಿದ್ದವರೆಲ್ಲಾ ಟೆಕ್ಕಿಗಳಾಗಿದ್ದು, ಡ್ರಗ್ಸ್​ ಸೇವನೆ ಮಾಡಿರುವುದು ಸಾಬೀತಾಗಿದೆ. ಸಿದ್ಧಾಂತ್​ ಕಪೂರ್​ ತಂದೆಯ ಹೆಸರು ಬಳಸಿ ಸಿನಿಮಾ ರಂಗದಲ್ಲಿ ಬಹು ಬೇಗ ಗುರುತಿಸಿಕೊಂಡರು. ಭಾಗಂ ಭಾಗ್​, ಚುಪ್​ ಚುಪ್​ ಕೇ, ಭೂಲ್​ ಭೂಲಯ್ಯ, ಡೋಲ್​ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ನಟನೆಗಿಂತಲೂ ನಿರ್ದೇಶನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರೋ ಸಿದ್ಧಾಂತ್​​ ವೆಬ್​ ಸೀರೀಸ್​​, ಮ್ಯೂಸಿಕ್​​ ವಿಡಿಯೋದಲ್ಲೂ ಕಾಣಿಸಿಕೊಂಡಿದ್ದಾರೆ.

ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತ್ರ ಬಾಲಿವುಡ್​ನಲ್ಲಿ ಡ್ರಗ್ಸ್​ ಕೇಸ್​​ಗಳು ಒಂದೊಂದಾಗಿ ಹೊರ ಬರ್ತಿವೆ. ಸೂಪರ್​ ಸ್ಟಾರ್ಸ್​ ಮಕ್ಕಳೆಲ್ಲಾ ಈ ಜಾಲದಲ್ಲಿ ಸಿಲುಕಿಕೊಳ್ತಾ ಇರೋದು ದುರದೃಷ್ಠಕರ. ಡ್ರಗ್ಸ್​ ವಿಚಾರ ಬಂದಾಗ ಕಿಗ್​ಪಿನ್​ಗಳ ಹೆಸರು ಬೆಂಗಳೂರಿಗೆ ಥಳುಕು ಹಾಕಿಕೊಳ್ಳುತ್ತೆ. ಕರುನಾಡಿನ ರಾಜಧಾನಿಗೆ ಈ ಕಪ್ಪು ಚುಕ್ಕೆ ಅಂಟಿಕೊಂಡಿದ್ದು ವಿಷಾಧನೀಯ. ಏನೇ ಆಗಲಿ. ಈ ಕೇಸ್​ ನಿಂದ ಶಕ್ತಿ ಕಪೂರ್​ ಮಗ ಸಿದ್ಧಾಂತ್​ ಕಪೂರ್​ಗೆ ಕ್ಲೀನ್​ ಚಿಟ್​ ಸಿಗುತ್ತಾ ಕಾದು ನೋಡ್ಬೇಕು.

ರಾಕೇಶ್​​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES