Thursday, January 9, 2025

ಕಾಂಗ್ರೆಸ್​​ ದಿವಾಳಿತನಕ್ಕೆ ಈ ಪ್ರತಿಭಟನೆ ಸಾಕ್ಷಿ : ನಳಿನ್​ ಕುಮಾರ್​ ಕಟೀಲ್​

ಬೆಂಗಳೂರು: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾನೂನಿಗೆ ಅತೀತರಾದವರಲ್ಲ. ಅವರು ಇಡಿ ವಿಚಾರಣೆ ಎದುರಿಸಿದರೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಪಟಾಲಂ ಕಟ್ಟಿ ಯಾಕೆ ಇಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಟ್ವೀಟ್​​ ಮಾಡುವ ಕಿಡಿಕಾರಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್​​ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ED ನೋಟಿಸ್ ಜಾರಿ ಹಿನ್ನೆಲೆ ದೇಶದ್ಯಾಂತ ಕಾಂಗ್ರೆಸ್​​ ಪ್ರತಿಭಟನೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಟ್ಚೀಟ್​​ ಮಾಡಿರುವ ಅವರು, ಇದರಿಂದ ಕಳ್ಳನ ಮನಸ್ಸು ಹುಳ್ಳಗೆ ಎಂದು ಸಾಬೀತಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಗೌರವ ಇಲ್ವೇ? ಕೆಪಿಸಿಸಿ ಅಧ್ಯಕ್ಷರೇ ಇ.ಡಿ ತನಿಖೆಯನ್ನು ತಪ್ಪಿಸಲು ಒದ್ದಾಡುತ್ತಿರುವಾಗ, ಪಕ್ಷದ ಅಧ್ಯಕ್ಷೆ & ಅವರ ಮಗನನ್ನು ಇ.ಡಿ.ಯಿಂದ ರಕ್ಷಿಸೋಕೆ ನಿಂತಿರುವುದು ಕಾಂಗ್ರೆಸ್ಸಿನ ದಿವಾಳಿತನಕ್ಕೆ ಸಾಕ್ಷಿ. ಎಂದು ಕಾಂಗ್ರೆಸ್​ ವಿರುದ್ಧ ನಳೀನ್​ ಕುಮಾರ್​ ಕಟೀಲ್​ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES