Monday, December 23, 2024

ನಾನು ಪಕ್ಷದ ಶಿಸ್ತಿನ ಶಿಪಾಯಿ : ಲಕ್ಷ್ಮಣ್ ಸವದಿ

ಚಿಕ್ಕೋಡಿ : ನಾನೊಬ್ಬ ಪಕ್ಷದ ಶಿಸ್ತಿನ ಶಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದು ಅಥಣಿ ಪಟ್ಟಣದಲ್ಲಿ ಬಿಜೆಪಿ ಮಾಜಿ ಸಚಿವ ಲಕ್ಷ್ಮಣ್ ಸವದಿ ಸ್ವಪಕ್ಷದ ಕುರಿತು ಹೇಳಿದ್ದಾರೆ.

ಚುನಾವಣೆ ಮುಂದೂಡಿಕೆ ಕುರಿತು ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಮಾತು ಸರಿ ಇದೆ. ವಿಜಯಪೂರದಲ್ಲಿ ಕಾಂಗ್ರೆಸ್ ಮಾಡಲ್ ಬ್ಯಾಲೆಟ್ ಪೇಪರ್​​ ಸಿಕ್ಕಿದೆ. ಗುರುತಿನ ಚೀಟಿ ಮತ್ತು ಹಣ ಸಿಕ್ಕಿದೆ. ಆದರೆ ಈಗಾಗಲೇ ಚುನಾವಣೆ ಆರಂಭವಾಗಿದೆ. ಪದವೀಧರರು ಮತ್ತು ಶಿಕ್ಷಕರು ನಮ್ಮ ಪರ ಇದ್ದಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಇನ್ನು ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಾನು ಎಂದು ಯಾವುದನ್ನ ಕೇಳಿ ಪಡೆದಿಲ್ಲ. ನಾನು ಯಾವ ಡಿಮಾಂಡ್ ಕೂಡ ಇಟ್ಟಿಲ್ಲ. ನಾನೊಬ್ಬ ಪಕ್ಷದ ಶಿಸ್ತಿನ ಶಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

ಸಂಪುಟ ವಿಸ್ತರಣೆ ಮುಖ್ಯ ಮಂತ್ರಿ ಮತ್ತು ವರಿಷ್ಟರಿಗೆ ಬಿಟ್ಟ ವಿಚಾರವಾಗಿದೆ. ವರಿಷ್ಠರು ನನಗೆ ಎಂದೂ ಚರ್ಚಿಸಿ ಸ್ಥಾನ ಮಾನ ಕೊಟ್ಟವರಲ್ಲ.
ಅವರು ಕೊಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES