Sunday, May 19, 2024

ಪ್ರವಾದಿ ವಿರುದ್ಧದ ಹೇಳಿಕೆಗೆ ಪ್ರತಿಭಟಿಸಿದ್ದ ವಲಸಿಗರು ಕುವೈತ್​​ನಿಂದ ಗಡಿಪಾರು

ಕುವೈತ್‌ : ಪ್ರವಾದಿ ಮಹಮ್ಮದ್‌ ಅವರ ಅವಹೇಳನವನ್ನು ಖಂಡಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಫಹಾಹೀಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಲಸಿಗರನ್ನು ಕುವೈತ್‌ನಿಂದ ಗಡಿಪಾರು ಮಾಡಲಾಗುವುದು. ದೇಶದ ಕಾನೂನನ್ನು ಉಲ್ಲಂಘಿಸಿ ಧರಣಿ ನಡೆಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.

ವಲಸಿಗರು ಪ್ರತಿಭಟನೆಗಳನ್ನು ನಡೆಸಬಾರದು ಎಂಬ ಷರತ್ತು ಹೊಂದಿರುವ ದೇಶದ ಕಾನೂನನ್ನು ಉಲ್ಲಂಘಿಸಿದ ಕಾರಣ, ಅವರನ್ನು ಕುವೈತ್‌ನಿಂತ ಗಡಿಪಾರು ಮಾಡಲಾಗುವುದು ಎಂದು ಮೂಲಗಳು ತಿಳಿಸಿದೆ. ಸರ್ಕಾರದ ಸೂಚನೆಯನ್ನು ಧಿಕ್ಕರಿಸಿ ಪ್ರತಿಭಟನೆ ಆಯೋಜಿಸಿದ ಫಹಹೀಲ್‌ ಪ್ರದೇಶದಲ್ಲಿನ ವಲಸಿಗರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಕುವೈತ್‌ನಲ್ಲಿರುವ ಎಲ್ಲ ವಲಸಿಗರು ದೇಶದ ಕಾನೂನುಗಳನ್ನು ಗೌರವಿಸಬೇಕು. ಯಾವುದೇ ರೀತಿಯ ಪ್ರತಿಭಟನೆಗಳನ್ನು ನಡೆಸುವಂತಿಲ್ಲ ಎಂಬ ಸೂಚನೆಗಳಿವೆ. ಅಲ್ಲದೇ ಪ್ರವಾದಿ ಮಹಮ್ಮದ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಾಗಿ ಭಾರತ ಈಗಾಗಲೇ ಕುವೈತ್‌ಗೆ ತಿಳಿಸಿದೆ.

ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ಬಿಜೆಪಿ ವಜಾ ಮಾಡಿದೆ. ಹೇಳಿಕೆ ಸಂಬಂಧ ಗುಜರಾತ್‌ ಹಾಗೂ ಮಹಾರಾಷ್ಟ್ರದ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 298, 294, 153ಎ ಮತ್ತು 505ಬಿ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಇತರ ಅಪರಾಧಗಳ ಆರೋಪದಡಿಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES