Monday, December 23, 2024

ಹೆಚ್ಡಿಕೆ ಬೆಂಬಲಿಗರಿಗೆ ಏಟಿಗೆ ತೀರುಗೇಟು ಕೊಟ್ಟ ಗುಬ್ಬಿ ಶ್ರಿನಿವಾಸ್ ಬೆಂಬಲಿಗರು 

ತುಮಕೂರು : ಯು.ಟರ್ನ್ ಕುಮಾರ ಕಾಣೆಯಾಗಿದ್ದಾರೆ ಎಂದು ಹೆಚ್ಡಿಕೆ ಪೋಟೊ ಹಾಕಿ S R ಶ್ರಿನಿವಾಸ್ ಗುಬ್ಬಿ ಎಂಎಲ್ಎ ಪ್ಯಾನ್ಸ್ ಕ್ಲಬ್ ಫೇಸ್ ಬುಕ್ ಪೇಜ್​​ನಲ್ಲಿ ಪೋಸ್ಟ್ ಹಾಕಲಾಗಿದ್ದು, ದಿನಕೊಂದು ಪೋಸ್ಟ್​​ಗಳನ್ನು ಹಾಕುವುದರ ಮೂಲಕ ಶ್ರಿನಿವಾಸ್ ಬೆಂಬಲಿಗರು  ಮಾಜಿ.ಸಿ.ಎಂ.ಹೆಚ್ಡಿಕೆ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದರೆಂಬ ಕಾರಣಕ್ಕೆ ಕೋಲಾರ ಶಾಸಕ ಕೆ.ಎಚ್ ಶ್ರೀನಿವಾಸ ಗೌಡ ಮತ್ತು ಗುಬ್ಬಿ ಶಾಸಕ S.R.ಶ್ರೀನಿವಾಸ್​ ​ಅವರ ತಿಥಿ ಕಾರ್ಡನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಶ್ರೀನಿವಾಸ ಬೆಂಬಲಿಗರು ಮಾಜಿ ಸಿಎಂ H.D.ಕುಮಾರಸ್ವಾಮಿ ಅವರ ವೈಕುಂಠ ಸಮಾರಾಧನೆಯ ಪೋಸ್ಟ್ ಹರಿಬಿಟ್ಟರು. ಇದೀಗ ಮತ್ತೊಮ್ಮೆ ಕುಮರಸ್ವಾಮಿ ಕಾಣೆಯಾಗಿದ್ದಾರೆ. ಅಂತ ಒಂದು ಪೋಸ್ಟ್ ಹಾಕಿದ್ದಾರೆ. ಇದು ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.

ಇದೀಗ ಈ ಪೋಸ್ಟ್​ JDSಗ್ರೂಪ್ ಹಾಗೂ ವಾಸು ಅಭಿಮಾನಿಗಳ ಬಳಗ ಎಂಬ ವಾಟ್ಸಾಪ್ ಗ್ರೂಪ್​​ಗಳಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

RELATED ARTICLES

Related Articles

TRENDING ARTICLES