Wednesday, January 22, 2025

ಡಾರ್ಲಿಂಗ್ ಕೃಷ್ಣನ ದಿಲ್ ಪಸಂದ್ ಸಖತ್ ಟೇಸ್ಟ್ ಗುರು

ಸ್ಯಾಂಡಲ್​ವುಡ್​ ಡಾರ್ಲಿಂಗ್​​​​,  ಲವ್​  ಮಾಕ್ಟೇಲ್​​ ಮೂಲಕ ವಿಭಿನ್ನ ರುಚಿಯ ಸಿನಿಮಾ ನೀಡಿದ ಕ್ರಿಯೇಟಿವ್​ ಹೀರೋ ಕಮ್​ ಡೈರೆಕ್ಟರ್​ ಡಾರ್ಲಿಂಗ್​ ಕೃಷ್ಣ. ​ ಸದ್ಯ, 37ನೇ ವರ್ಷದ ಬರ್ತ್​ ಡೇ ಸಂಭ್ರಮದಲ್ಲಿರೋ ಡಾರ್ಲಿಂಗ್​ಗೆ ದಿಲ್​​ ಪಸಂದ್​​ ಸಿಹಿ ಸಿಕ್ಕಿದೆ. ಚಿತ್ರತಂಡದಿಂದ ಕೃಷ್ಣ ಅವರಿಗೆ ಸ್ಪೆಷಲ್​ ಉಡುಗೊರೆ ಸಿಕ್ಕಿದೆ. ಈ ಗಿಫ್ಟ್​​ ನೋಡಿ ಚಿತ್ರರಸಿಕರೂ ಸಖತ್​​ ಥ್ರಿಲ್ ಆಗಿದ್ದಾರೆ. ಏನ್​​ ಆ ಗಿಫ್ಟ್​ ಅಂತೀರಾ..? ​​

ಡಾರ್ಲಿಂಗ್ ಕೃಷ್ಣನ ದಿಲ್ ಪಸಂದ್ ಸಖತ್ ಟೇಸ್ಟ್ ಗುರು

ಚಿತ್ರದ ಫಸ್ಟ್​ ಗ್ಲಿಂಪ್ಸ್​​ ನೋಡಿ ಸಖತ್​ ಥ್ರಿಲ್​ ಆದ ಪ್ರೇಕ್ಷಕರು

ಕ್ಯೂಟ್​ ನಿಶ್ವಿಕಾ ನಾಯ್ಡು ಜೊತೆ ಡಾರ್ಲಿಂಗ್​ ತುಂಟಾಟ

ಕೃಷ್ಣನ ಲೀಲೆಯ ಜೊತೆಯಲಿ ಮೇಘಾ ಶೆಟ್ಟಿ ಸಾಥ್..!

ಕನ್ನಡದ ಮೋಸ್ಟ್​ ಟ್ಯಾಲೆಂಟೆಡ್ ಆ್ಯಕ್ಟರ್​​ ಕಮ್​ ಡೈರೆಕ್ಟರ್​ ಡಾರ್ಲಿಂಗ್​ ಕೃಷ್ಣ ಎಲ್ಲರ ದಿಲ್​ ದೋಚಿದ್ದಾರೆ. ಲವ್​ ಮಾಕ್ಟೇಲ್​​ ಸೀಕ್ವೇಲ್​ ಸಿನಿಮಾ ಮಾಡಿ ಎಲ್ಲರ ಹೃದಯ ಗೆದ್ದಿರುವ ಪ್ರತಿಭಾನ್ವಿತ ಕಲಾವಿದ. ತನ್ನದೇ ಮೇಕಿಂಗ್​ ಸ್ಟೈಲ್​ ಮೂಲಕ ಕಾಮಿಡಿಯ ಕಚಗುಳಿಯ ಹದ ಬೆರಸಿ ಪ್ರೇಕ್ಷಕರಿಗೆ ರುಚಿಗೆ ತಕ್ಕಂತೆ ಉಣಬಡಿಸೋ ಕ್ರಿಯೇಟಿವ್​ ಹೆಡ್​​​. ಇದೀಗ ಕೃಷ್ಣ ಅವ್ರಿಗೆ 37ನೇ ಬರ್ತ್​ ಡೇ ಸಂಭ್ರಮ.

ಬರ್ತ್​ ಡೇ ಎಂಜಾಯ್​ ಮಾಡೋಕೆ ಸ್ವೀಟ್​ ಕಪಲ್​ ಜೋಡಿ ಮಾಲ್ಡೀವ್ಸ್​ಗೆ ಹಾರಿತ್ತು. ಈ ಸುಸಮಯದಲ್ಲೇ ದಿಲ್​ ಪಸಂದ್​​ ಚಿತ್ರತಂಡ ಕೃಷ್ಣ ಅವರಿಗೆ ಸರ್ಪ್ರೈಸ್​ ಗಿಫ್ಟ್​​ ನೀಡಿದೆ. ಈ ಸ್ಪೆಷಲ್​ ಉಡುಗೊರೆ ನೋಡಿದ ಚಿತ್ರಪ್ರೇಮಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಯೆಸ್​​.. ಡಾರ್ಲಿಂಗ್​ ಕೃಷ್ಣ ಅಭಿನಯದ ಹೊಸ ಚಿತ್ರ ದಿಲ್​ ಪಸಂದ್​ ಫಸ್ಟ್​ ಗ್ಲಿಂಪ್ಸ್​​ ರಿಲೀಸ್​ ಆಗಿದ್ದು, ಎಲ್ಲಾ ಕಡೆ ಸಖತ್​ ಸೌಂಡ್​ ಮಾಡ್ತಿದೆ.

ದಿಲ್​ ಪಸಂದ್ ಚಿತ್ರದ ​​ ಫಸ್ಟ್​ ಲುಕ್​ ಪೋಸ್ಟರ್​ಗೆ ಫಿದಾ ಆಗಿದ್ದ ಅಭಿಮಾನಿಗಳಿಗೆ ಮತ್ತೊಂದು ಜಾಕ್​ಪಾಟ್​​ ಸಿಕ್ಕಿದೆ. ಮುದ್ದು ಮುದ್ದಾಗಿ ಹುಣ್ಣಿಮೆಯ ಬೆಳಕಿನ ನಡುವೆ, ಹಾಲಲ್ಲಿ ಅದ್ದಿದ ಹಾಗಿರೋ ನಟಿ ನಿಶ್ವಿಕಾ ಸಖತ್​ ಗ್ಲಾಮರ್​ ಆಗಿ ಕಾಣಿಸ್ತಿದ್ದಾರೆ. ದಿಲ್​ ಪಸಂದ್​ ಚಿತ್ರದ ಫಸ್ಟ್​​ ಗ್ಲಿಂಪ್ಸ್​​ನಲ್ಲಿ ಡಾರ್ಲಿಂಗ್​ ಕೃಷ್ಣ, ನಿಶ್ವಿಕಾ ಬೆಡ್​ ರೂಮ್​ ಫನ್ನಿ ಸೀನ್​ನಲ್ಲಿ ಒಂದಾಗಿದ್ದಾರೆ. ಇಬ್ಬರೂ ಕನ್ಫೂಸ್​ ಆಗಿದ್ದು ಅಳ್ತಿದ್ದಾರೆ.

ನಿಶ್ವಿಕಾ ಹಾಗೂ ಡಾರ್ಲಿಂಗ್​ ಕೃಷ್ಣ ಇಬ್ಬರೂ ಒಂದೇ ರೂಮ್​ನಲ್ಲಿ ಹೇಗೆ ಸಿಕ್ಕಿಹಾಕಿಕೊಂಡಿದ್ದೇವೆ ಅನ್ನೋ ಗೊಂದಲದಲ್ಲಿದ್ದಾರೆ. ಈ ನಡುವೆ ಜೊತೆ ಜೊತೆಯಲಿ ಸೀರಿಯಲ್​ ಖ್ಯಾತಿಯ ಮೇಘಾ ಶೆಟ್ಟಿ ಕಾಲ್​ ಮಾಡಿ ಮಾತನಾಡುವ ಸಂಭಾಷಣೆ ಸಖತ್​ ಕ್ಯಾಚಿಯಾಗಿದ್ದು, ಚಿತ್ರದ ಬಗ್ಗೆ ಸಖತ್​ ಕ್ಯೂರಿಯಾಸಿಟಿ ಮೂಡಿಸಿದೆ.

ದಿಲ್​ ಪಸಂದ್​ ಚಿತ್ರದಲ್ಲಿ ನಿಶ್ವಿಕಾ, ಮೇಘಾಶೆಟ್ಟಿ ಸೇರಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾ ನಾಣಿ ಮುಂತಾದವರ ತಾರಬಳಗವಿದೆ. ಈ ಚಿತ್ರವನ್ನು ರಶ್ಮಿ ಫಿಲಂಸ್​ ಮೂಲಕ ಸುಮಂತ್​ ಕ್ರಾಂತಿ ಅವರು ನಿರ್ಮಾಣ ಮಾಡ್ತಿದ್ದಾರೆ. ಶಿವ ತೇಜಸ್​ ಆ್ಯಕ್ಷನ್​​ ಕಟ್​ ಹೇಳ್ತಿದ್ದು, ಅರ್ಜುನ್​ ಜನ್ಯಾ ಸಂಗೀತ ಚಿತ್ರಕ್ಕಿದೆ. ಶೇಖರ್​ ಚಂದ್ರ ಕ್ಯಾಮೆರಾ ಕಣ್ಣು ಚಿತ್ರಕ್ಕೆ ಪ್ಲಸ್​ ಆಗಲಿದೆ. ಸಿಂಗಲ್​ ಗ್ಲಿಂಪ್ಸ್​ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ಕ್ರೇಜ್​ ಹುಟ್ಟಿಸಿರೋ ದಿಲ್​ ಪಸಂದ್​​ ಸದ್ಯದಲ್ಲೇ ತೆರೆಗೆ ಬರಲಿದೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ , ಪವರ್​ ಟಿವಿ

RELATED ARTICLES

Related Articles

TRENDING ARTICLES