Wednesday, January 22, 2025

ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಕೊಪ್ಪಳ: ಮನುಷ್ಯತ್ವ ,ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಳೆದು ಹೋಗಿದ್ದ ಬರೋಬ್ಬರಿ ಒಂದು ಲಕ್ಷ ಚಿನ್ನದ ಸರವನ್ನು ವಾಪಸ್ ನೀಡಿ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾನೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ದಿಂದ ಗಜೇಂದ್ರಗಡ ಪಟ್ಟಣಕ್ಕೆ ಬಸ್​​ನಲ್ಲಿ ಹೋಗುವಾಗ ಗಂಗವ್ವ ವಡ್ಡರ್ ಎನ್ನುವರು ಚಿನ್ನದ ಸರ್ ಕಳೆದುಕೊಂಡಿದ್ದರು.

ಕಳೆದುಕೊಂದ ಚಿನ್ನದ ಸರವು ಅದೇ ಬಸ್​ನ ನಿರ್ವಾಹಕ ಯಮನೂರಪ್ಪಗೆ ಸಿಕ್ಕಿದ್ದು, ಆತ ಚಿನ್ನದ ಸರವನ್ನು ಕೊಪ್ಪಳ ಜಿಲ್ಲೆ ಕುಕನೂರ ನಿವಾಸಿ ಗಂಗವ್ವ ವಡ್ಡರ್​ಗೆ ಸಂರ್ಪಕಿಸಿ ಸರವನ್ನು ವಾಪಸ್ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾನೆ.

ಇನ್ನು ನಿರ್ವಾಹಕರ ಪ್ರಾಮಾಣಿಕತೆಗೆ ಮಹಿಳೆ ಕೃತಜ್ಞತೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES