Friday, January 10, 2025

ಶಿವಣ್ಣ -ಡಾಲಿ ಜುಗಲ್ಬಂದಿ.. ಬೈರಾಗಿ ಬ್ಯುಸಿನೆಸ್ ಗೊತ್ತಾ..?

ಟಗರು ಚಿತ್ರದ ನಂತ್ರ ಶಿವಣ್ಣ, ಡಾಲಿ ಧನಂಜಯ​ ಮತ್ತೆ ಮುಖಾಮುಖಿಯಾಗ್ತಿರೋದು ನಿಮಗೆಲ್ಲಾ ಗೊತ್ತೆ ಇದೆ. ಇಬ್ರು ಎದುರು ಬದುರಾಗೋ ರೋಚಕ ದೃಶ್ಯಗಳನ್ನು ಕಣ್ತುಂಬಿಕೊಳ್ಳೋಕೆ ಪ್ರೇಕ್ಷಕರು ಕಾತರದಿಂದ ಕಾಯ್ತಾ ಇದ್ದಾರೆ.  ಡಾ.ಶಿವಣ್ಣ ಅವ್ರ 123 ನೇ ಅದ್ಧೂರಿ ಸಿನಿಮಾ ಇದಕ್ಕೆ ಸಾಕ್ಷಿಯಾಗ್ತಿದೆ. ಯೆಸ್​​​.. ಈ ಚಿತ್ರದ ಸಮ್ತಿಂಗ್​ ಸ್ಪೆಷಾಲಿಟಿಗಳ ಬಗ್ಗೆ ಶಿವಣ್ಣ ರಿವೀಲ್​ ಮಾಡಿದ್ದಾರೆ.

ಶಿವಣ್ಣ – ಡಾಲಿ ಜುಗಲ್ಬಂದಿ.. ಬೈರಾಗಿ ಬ್ಯುಸಿನೆಸ್ ಗೊತ್ತಾ..?

ಬೈರಾಗಿ ಮಾಮೂಲಿ ಚಿತ್ರವಲ್ಲ.. ಸೈಲೆಂಟ್​​ ವೈಲೆಂಟ್​​ ಲುಕ್

ಮೂರು ವಿಭಿನ್ನ ಶೇಡ್​​ಗಳಲ್ಲಿ ಶಿವಣ್ಣನ ಉಗ್ರ ಅವತಾರ

ದಿಯಾ ಖ್ಯಾತಿಯ ಪೃಥ್ವಿ ಅಂಬರ್​​ನ​​ ಮೆಚ್ಚಿದ ಜೋಗಿ..!

ಶಿವಣ್ಣ ಅವರಿಗೆ ವಯಸ್ಸು 60 ಅಂದ್ರೆ ಯಾರ್​ ನಂಬ್ತಾರೆ ಹೇಳಿ. ಅಷ್ಟೆ ಅಲ್ಲಾ, 123 ನೇ ಸಿನಿಮಾ ಬೈರಾಗಿ ಕೂಡ ಸದ್ಯದಲ್ಲೇ ಸಿಲ್ವರ್​ ಸ್ಕ್ರೀನ್​ ಮೇಲೆ ರಾರಾಜಿಸಲಿದೆ. ಶಿವಣ್ಣ ಅವರದ್ದು ಈಗ್ಲೂ ಕೂಡ ಅದೇ ಗತ್ತು, ಗಾಂಭೀರ್ಯ, ಎನರ್ಜಿ. ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡಿ ಮುಗಿಸೋ ಭಜರಂಗಿಗೆ ಆಯಾಸ ಅನ್ನೋದೆ ಇಲ್ಲ. ಇದೀಗ ಬೈರಾಗಿ ಸಿನಿಮಾ ಕೂಡ ಎಲ್ಲಾ ಕೆಲಸ ಮುಗಿಸಿದ್ದು ಜುಲೈ 1ಕ್ಕೆ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ.

ಬೈರಾಗಿ ಸಿನಿಮಾದ ಎಕ್ಸ್​​ಕ್ಲ್ಯೂಸಿವ್​​ ಅಪ್​ಡೇಟ್​​ಗಳು ಕೂಡ ಸಖತ್​ ಥ್ರಿಲ್ಲಿಂಗ್​ ಆಗಿವೆ. ಚಿತ್ರದ ಟೀಸರ್​​, ಸಾಂಗ್ಸ್​​​, ಪೋಸ್ಟರ್​ಗಳಿಗೆ ಪ್ರೇಕ್ಷಕ ಸಿಕ್ಕಾಪಟ್ಟೆ ಫಿದಾ ಆಗಿದ್ದಾನೆ. ಇನ್ನೇನಿದ್ರು. ರಿಲೀಸ್ ದಿನ ಶಿವಣ್ಣನ ಘರ್ಜನೆಯನ್ನು  ಬೆಳ್ಳಿ ತೆರೆಯ ಮೇಲೆ ನೋಡಿ ಎಂಜಾಯ್​ ಮಾಡೋಕೆ ಕೂತೂಹಲದಿಂದ ಕಾಯ್ತಿದ್ದಾರೆ ಚಿತ್ರಪ್ರೇಮಿಗಳು. ಖುದ್ದಾಗಿ ಶಿವಣ್ಣ ಬೈರಾಗಿ ಚಿತ್ರದ ಪಾತ್ರಗಳ ಬಗ್ಗೆ ಮಾತನಾಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆಗಳು ಡಬಲ್​ ಆಗಿವೆ. ಬೈರಾಗಿ ಮಾಮೂಲಿ ಚಿತ್ರವಲ್ಲ ಎಂದಿದ್ದಾರೆ ಶಿವಣ್ಣ.

ಟಗರು ಸಿನಿಮಾ ನಂತ್ರ, ಶಿವಣ್ಣ ಡಾಲಿ ಧನಂಜಯ ಮತ್ತೆ ಕೈ ಕೈ ಮಿಲಾಯಿಸೋಕೆ ಸಜ್ಜಾಗಿದ್ದಾರೆ. ಇವರಿಬ್ರ ಜುಗಲ್ಬಂದಿಯ ಮ್ಯಾಜಿಕ್​ ಕಮಾಲ್​ ನೋಡೋಕೆ ಪ್ರೇಕ್ಷಕರು ಸಖತ್​​ ಎಗ್ಸೈಟ್​ ಆಗಿದ್ದಾರೆ.  ಡಾಲಿ ಕ್ಯಾರೆಕ್ಟರ್​​ ಇಲ್ಲಿ ಡಿಫರೆಂಟ್​ ಅಗಿದೆ. ಸೈಲೆಂಟ್​ ಅಗಿರೋ ಪಾತ್ರ ಕೆಲವು ಸಲ ಮಿತಿ ಮೀರುತ್ತೆ. ನಮ್ ಇಬ್ರ ಪೇರ್​​ ಪಾಪ್ಯುಲರ್​ ಎನ್ನುತ್ತಾರೆ ಶಿವಣ್ಣ.

ಮೂರು  ವಿಬಿನ್ನ  ಶೇಡ್​ಗಳಲ್ಲಿ ಶಿವಣ್ಣ ಮಿಂಚಿದ್ದಾರೆ. ಸೈಲೆಂಟ್​​ ಅಂಡ್​ ವೈಲೆಂಟ್​​ ಹುಲಿಯಾಗಿ ಬೈರಾಗಿ ಗೆಟಪ್​​ ​ ರಗಡ್​ಆಗಿದೆ. ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ರೋಲ್​ ಸ್ಪೆಷಲ್​ ಆಗಿದೆ. ತ್ಯಾಗಿಯಾಗಿ, ಶಿವಣ್ಣನ ಜೊತೆ ಫ್ರೆಂಡ್ಶಿಪ್​​ ರೋಲ್​​ನಲ್ಲಿ ರೊಮ್ಯಾಂಟಿಕ್​ ಹೀರೋ ಪೃಥ್ವಿ ಕಾಣಿಸಿದ್ದಾರೆ. ಎಮೋಷನಲ್​​ ಜೊತೆ  ಕಾಮಿಡಿಯ ಎಳೆ ಇರೋ ಕಾಂಬೋ ಇದಂತೆ. ಜೊತೆಗೆ ನಾಯಕಿಯಾಗಿ ಅಂಜಲಿ ಪಾತ್ರದ ಬಗ್ಗೆಯೂ ಸೆಂಚೂರಿ ಸ್ಟಾರ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೈರಾಗಿ ಚಿತ್ರದ ಅನೂಪ್​ ಸೀಳೀನ್​ ಸಂಗೀತಕ್ಕೆ ಎಲ್ಲಾ ಕಡೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗ್ತಿದೆ. ರಿಧಮ್​ ಆಫ್​ ಶಿವಪ್ಪ ಹಾಡಿಗೆ ಎಲ್ರೂ ಕೂಡ ರೀಲ್ಸ್​ ಮಾಡಿ ಎಂಜಾಯ್​ ಮಾಡ್ತಿದ್ದಾರೆ. ಸಿನಿಮಾ ರಿಲೀಸ್​ಗೂ ಮುನ್ನ ಈ ರೀತಿ ಸಪೋರ್ಟ್​​ ಮಾಡೋದು ನೋಡಿದ್ರೆ ತುಂಬಾ ಖುಷಿ ಆಗ್ತಿದೆ, ರೀಲ್ಸ್​ ಕಂಟಿನ್ಯೂ ಮಾಡಿ ಎಂದ್ರು ಶಿವಣ್ಣ. ಜೊತೆಗೆ 8 ಕೋಟಿ ದಾಖಲೆ ಮೊತ್ತಕ್ಕೆ ಬೈರಾಗಿ ಸ್ಯಾಟಲೈಟ್ ರೈಟ್ಸ್​ ಮಾರಾಟವಾಗಿದ್ದು, ಸಿಕ್ಕಾಪಟ್ಟೆ ಖುಷಿಯಲ್ಲಿದೆ ಚಿತ್ರತಂಡ.

ವಿಜಯ್​ ಮಿಲ್ಟನ್​ ಆ್ಯಕ್ಷನ್​ ಕಟ್​​ ಹೇಳಿ, ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿರೋ ಈ ಚಿತ್ರದ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ದುಪ್ಪಟ್ಟಾಗಿವೆ. ವಯಸ್ಸು 60 ಆದ್ರೂ 16ರ ಚಿರಯುವಕನಂತೆ ಸಿನಿಮಾಗಳ ಮೇಲೆ ಸಿನಿಮಾ ಮಾಡ್ತಿರೋ ಶಿವಣ್ಣ ಅವ್ರ ಬೈರಾಗಿ ಚಿತ್ರಕ್ಕೆ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್​​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES