Saturday, April 20, 2024

ಕಾಂಗ್ರಸ್​​ ಡಿಕ್ಷನರಿಯಲ್ಲಿ ರಾಷ್ಟ್ರೀಯತೆ ಇಲ್ಲ : ಅಶ್ವಥ್ ನಾರಾಯಣ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರು ಇಡಿ ವಿಚಾರದಲ್ಲಿ ಅನುಭವ ಇರೋರು ಅವರು ಪ್ರತಿಭಟನೆ ಮಾಡ್ತಿದಾರೆ. ಇವತ್ತು ಇಡಿ ಕಡೆ ಹೋಗೋ ಪ್ರತಿಭಟನೆ ಇನ್ನೊಂದು ದಿನ ತಿಹಾರ್ ಜೈಲಿನ ಕಡೆ ಹೋಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​ ಸಚಿವ ಅಶ್ವಥ್ ನಾರಾಯಣ ಕಾಲೆಳೆದಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನವರು ಈ ದಿನ ಪ್ರತಿಭಟನೆ ಮಾಡ್ತಿದ್ದಾರೆ. ಪಕ್ಷದ ವರಿಷ್ಠರು, ನಾಯಕರು, ಕಾರ್ಯಕರ್ತರು ದೇಶದ ನಾನಾ ಕಡೆ ಇಡಿ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ ಇದರ ಹಿನ್ನೆಲೆ ಏನು? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೈ ಬದಲಾವಣೆ ಆಗಿರುವ ಬಗ್ಗೆ ಇಡಿ ತ‌ನಿಖೆ ಮಾಡಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ್ತಿತರರಿಗೆ ಇಡಿ‌ ನೊಟೀಸ್ ಕೊಟ್ಟಿದೆ. ಇಡಿ ಎದುರು ಇವರು ಹಾಜರಾಗಬೇಕು ಎಂದರು.

ಇನ್ನು 1937 ರಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಹುಟ್ಟುತ್ತೆ ಆ ಪತ್ರಿಕೆ ಹೆಸರು ನ್ಯಾಷನಲ್ ಹೆರಾಲ್ಡ್. ಬಳಿಕ 2008 ರಲ್ಲಿ ಈ ಪತ್ರಿಕೆ ಮುಚ್ಚಿಹೋಗುತ್ತದೆ. 2010 ರಲ್ಲಿ ಯಂಗ್ ಇಂಡಿಯಾ ಸ್ಥಾಪನೆ ಮಾಡಿ ಅದರ ಮೂಲಕ ನ್ಯಾಷನಲ್ ಹೆರಾಲ್ಡ್ ಖರೀದಿ ಮಾಡಲಾಗುತ್ತದೆ. ಕೇವಲ 50 ಲಕ್ಷ ರೂಗೆ ಯಂಗ್ ಇಂಡಿಯಾಗೆ ನ್ಯಾಷನಲ್ ಹೆರಾಲ್ಡ್ ಮಾರಾಟ ಮಾಡಲಾಗುತ್ತದೆ. ಇದರಲ್ಲಿ 74% ಸೋನಿಯಾ, ರಾಹುಲ್ ಶೇಕಡುದಾರರು. ಎರಡು ಸಾವಿರ ಕೋಟಿ ಮೌಲ್ಯದ ಪತ್ರಿಕೆ ಕೇವಲ 50 ಪಕ್ಷಕ್ಕೆ ಮಾರಾಟ ಆಗುತ್ತದೇ ಇದರ ಸತ್ಯ ಏನಿರಬಹುದು ಎಂದು ಕಿಡಿಕಾರಿದರು.

ಅಷ್ಟೇಅಲ್ಲದೇ ಈ 50 ಲಕ್ಷ ಕಾಂಗ್ರೆಸ್​​ನ ಹಣ ಆಗಿರುತ್ತದೆ. ಇದನ್ನು ಸುಬ್ರಹ್ಮಣ್ಯ ಸ್ವಾಮಿ ಪ್ರಶ್ನಿಸಿ ಕೋರ್ಟ್ ಗೆ ಹೋಗ್ತಾರೆ. ಆಗ 2011 ರಲ್ಲಿ ಕೋರ್ಟ್ ಇಡಿ ತನಿಖೆಗೆ ಆದೇಶ ಮಾಡುತ್ತದೆ. ಆ ಸಂದರ್ಭದಲ್ಲಿ ಯಾವ ಸರ್ಕಾರ ಇತ್ತು? ಅಧಿಕಾರ ದುರ್ಬಳಕೆ ಅನ್ನೋ‌ ಆರೋಪಕ್ಕೆ ಅರ್ಥ ಇಲ್ಲ. ಅವರ ಸರ್ಕಾರ ಇದ್ದಾಗಲೇ ಇಡಿ ತನಿಖೆಗೆ ವಹಿಸಲಾಗಿತ್ತು. ಈಗ ಇವರು ಬಿಜೆಪಿ ಮೇಲೆ ಅಧಿಕಾರ ದುರ್ಬಳಕೆ ಆರೋಪ ಮಾಡ್ತಿರೋದು ಸತ್ಯಕ್ಕೆ ದೂರದ ಮಾತು. ಹೆರಾಲ್ಡ್ ಹಣ ಲಪಟಾಯಿಸಲು ಸಂಚು ಮಾಡಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಸ್ಪಷ್ಟತೆ ಇಲ್ಲದೇ, ಕಾನೂನಿಗೆ ಗೌರವ ಇಲ್ಲದವರು ಬೇರೆ ಜವಾಬ್ದಾರಿ ಹೇಗೆ ನಿಭಾಯಿಸ್ತಾರೆ. ಕಾಂಗ್ರೆಸ್​​ನವರ ಡಿಕ್ಷನರಿಯಲ್ಲೇ ಭ್ರಷ್ಟಾಚಾರ, ಅರಾಜಕತ ಇದೆ. ಅವರ ಡಿಕ್ಷನರಿಯಲ್ಲಿ ರಾಷ್ಟ್ರೀಯತೆ ಇಲ್ಲ. ಅವರ್ಯಾರೂ ಕಾನೂನಿಗಿಂತ ದೊಡ್ಡವರಲ್ಲ. ದೇಶವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಪಕ್ಷ ಕಾಂಗ್ರೆಸ್ ಎಂದು ಗುಡುಗಿದರು.

ಇನ್ನು ಇಡಿ ವಿಚಾರಣೆಯನ್ನು ಅವರು ಎದುರಿಸಲಿ. ಏನು ಸತ್ಯ ಇದೆ ಹೇಳಲಿಅವರ ಪ್ರತಿಭಟನೆ ಸರಿಯಲ್ಲ. ಇಡಿ ವಿರುದ್ಧವೂ ಮಸಿ ಬಳೀತಿದ್ದಾರೆ. ಈ ಪ್ರತಿಭಟನೆ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ತಪ್ಪು ಮಾಡಿ ಈಗ ರಕ್ಷಣೆ ಪಡೆಯಲು ಮುಂದಾಗಿದ್ದಾರೆ ಈ ಪ್ರತಿಭಟನೆ, ಬೆದರಿಕೆಗಳಿಗೆ ಬೆಲೆ ಇಲ್ಲ, ಮಾನ್ಯತೆ ಕೂಡ ಇಲ್ಲ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES