Thursday, January 23, 2025

ವಿಶ್ವ ಯೋಗ ದಿನಕ್ಕೆ ಮತ್ತೊಂದು ತಾಲೀಮು

ಮೈಸೂರು: ಜೂ. 21ರಂದು ವಿಶ್ವ ಯೋಗದಿನಕ್ಕೆ ಅರಮನೆ ನಗರಿ ಮೈಸೂರು ಸಕಲ ಸಿದ್ಧತೆ ನಡೆಸ್ತಾ ಇದೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ನಡೆಯುವ ವಿಶ್ವ ಯೋಗ ದಿನಕ್ಕೆ ಸಾಕ್ಷಿಯಾಗಲಿದ್ದಾರೆ.

ಅರಮನೆ ಅಂಗಳದಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪೂರ್ವಾಭ್ಯಾಸ, ಚಲನ ಕ್ರಿಯೆ, ಯೋಗ, ಪ್ರಾಣಾಯಾಮಗಳ ಅಭ್ಯಾಸವೂ ನಡೆಯುತ್ತಿದೆ. ಇನ್ನು ಪ್ರಧಾನಿಯೊಂದಿಗೆ ಯೋಗಾಭ್ಯಾಸ ಮಾಡಲು ಯೋಗಪಟುಗಳು ಉತ್ಸುಕರಾಗಿದ್ದಾರೆ. ಈ ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್‌.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೊರಾರ್ಜಿ ದೇಸಾಯಿ ವಿಭಾಗದ ನಿರ್ದೇಶಕ ಬಸವರೆಡ್ಡಿ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.

RELATED ARTICLES

Related Articles

TRENDING ARTICLES