Monday, January 6, 2025

ಹೆಚ್​ಡಿಕೆಗೆ ಓಪನ್ ಚಾಲೆಂಜ್ ಹಾಕಿದ ಗುಬ್ಬಿ ಶ್ರೀನಿವಾಸ್ ಬೆಂಬಲಿಗರು

ತುಮಕೂರು: ಎಲ್ಲೋ ಕುತ್ಕಂಡು ಮಾತಾಡೋದಲ್ಲ ತಾಕತ್ ಇದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೊರ್ಸಿ ಎಂದು ಫೇಸ್ಬುಕ್​ನಲ್ಲಿ ನೇರವಾಗಿ ಕುಮಾರಸ್ವಾಮಿಗೆ ಶ್ರೀನಿವಾಸ್ ಬೆಂಬಲಿಗರು ಓಪನ್ ಚಾಲೆಂಜ್ ಮಾಡಿದ್ದಾರೆ.

ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ, ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಎಲ್ಲೋ ಕುತ್ಕಂಡು ಮಾತಾಡೋದಲ್ಲ ತಾಕತ್ ಇದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೊರ್ಸಿ, ಫೇಸ್ಬುಕ್​ನಲ್ಲಿ ನೇರವಾಗಿ ಕುಮಾರಸ್ವಾಮಿಗೆ ಓಪನ್ ಚಾಲೆಂಜ್ ಹಾಕಿದ ಶ್ರೀನಿವಾಸ್ ಬೆಂಬಲಿಗರು, ನಾವು ಗುಬ್ಬಿ ವಾಸಣ್ಞನ‌ ಹುಡುಗರು, ಕಾರ್ಯಕರ್ತರು, ನೀವು ಎಷ್ಟೇ ಹೇಳಿದ್ರು ಶಕ್ತಿಯುತವಾಗಿ ವಾಸಣ್ಣ ಬೆಳಿತಾರೆ. ಬೆಳಸ್ತಿವಿ.ನೀವಾಗಿ ನೀವೇ ನಮ್ಮ‌ ವಾಸಣ್ಣನನ್ನ ಸ್ಟೇಟ್ ಲೀಡರ್ ಮಾಡಿದಿರಿ. ಅವರಿಗೆ ನಿಮ್ಮ ಆಶಿರ್ವಾದ ಇರುತ್ತೆ ಎಂದಿದ್ದಾರೆ.

ಇನ್ನು ಅವರನ್ನ‌ ನಾವು ಕೈಹಿಡಿದು ಉನ್ನತ ಸ್ಥಾನಗಳಿಗೆ ಕರ್ಕೊಂಡು ಹೊಗ್ತಿವಿ‌. ಯಾರು ಏನೇ ಹೇಳಿದ್ರು ನಾವು ಯಾವತ್ತು ವಾಸಣ್ಣನನ್ನ ಬಿಟ್ಟು ಕೊಡಲ್ಲ. ಇಂತಹ ರಾಜಕಾರಣಕ್ಕೆ ನಾವು ಬಗ್ಗೋರಲ್ಲ. ಗುಬ್ಬಿ ಜನ, ಯಾವತ್ತು ವಾಸಣ್ಣನನ್ನ ಕೈಬಿಟ್ಟಿಲ್ಲ. ಬಿಡೋದು ಇಲ್ಲ. ನಿಮ್ಮಂತ ಎಷ್ಟೇ ಕುಮಾರಸ್ವಾಮಿ ಗಳು ಬಂದ್ರು ಅಷ್ಟೇ ಯಾವನ್ ಬಂದ್ರು ಅಷ್ಟೇ ವಾಸಣ್ಣ, ವಾಸಣ್ಣನೇ ಅವರಿಗ್ಯಾರು ಸರಿಸಾಟಿ ಇಲ್ಲ. ನಿಮಗೆ ತಾಕತ್ ಅನ್ನೋದು ಇದ್ರೆ ಡೈರೆಕ್ಟ್ ಆಗಿ ಗುಬ್ಬಿಗೆ ಬಂದು ಎಲೆಕ್ಷನ್ ಗೆ ನಿಂತ್ಕೊಳಿ ಗೆಲ್ಲಿ. ಅವಾಗ ನಿಮ್ಮ ಜೆಡಿಎಸ್ ಶಕ್ತಿ ಏನು ಅನ್ನೋದನ್ನ ತೊರ್ಸಿ. ಅದನ್ನ ಬಿಟ್ಟು ಕೈಲಾಗದವರು ಅದೇನೋ ಬಿಟ್ಕೊಂಡ್ರಲ್ಲ. ಹಂಗೆ ಎಲ್ಲೋ ಕುತ್ಕಂಡು ಮಾತಾಡೋದಲ್ಲ. ಬನ್ನಿ ಕ್ಷೇತ್ರಕ್ಕೆ ವಾಸಣ್ಣನ ಬಗ್ಗೆ ಕೇಳಿ ಮಾಜಿ ಸಿಎಂ‌ ನೀವು ಆ ಘನತೆಗಾದ್ರು ನೀವು ರಾಜಕೀಯ ‌ಮಾಡಿ ಎಂದರು.

ಅದಲ್ಲದೇ, ನಾವು‌ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತಿವಿ ಇದು ನಿಮಗೆ ಎಚ್ಚರಿಕೆ‌ ಕೊಡ್ತಿದಿವಿ‌. ಕುಮಾರಸ್ವಾಮಿ ಅವರೇ ನಿಮ್ಮ‌ ಹತ್ರ ಇರೋ ಕಾರ್ಯಕರ್ತರು ದುಡ್ಡು ಕೊಟ್ರೆ ಬರ್ಬಹುದು. ಅದೇ ವಾಸಣ್ಣನ ಹತ್ರ ಇರೋ ಕಾರ್ಯಕರ್ತರು. ವಾಸಣ್ಣ ಒಂದೇ ಒಂದು ಕರೆ ಕೊಟ್ರೆ ಇಡೀ ತುಮಕೂರೇ ಅವರ ಹಿಂದೆ ಇರುತ್ತೆ. ನೀವು ಯಾವುದೇ ಕಾರಣಕ್ಕೂ ತಪ್ಪು ತಿಳ್ಕೋಬೇಡಿ ಅವರನ್ನ‌ ಮುಗಿಸ್ಬೇಕು ಅಂತ ರಾಜಕೀಯದಿಂದ ತುಳಿಬೇಕು ಅಂದ್ರೆ ನಿಮಗಿಂತ ಒಂದು ಸ್ಥಾನದಲ್ಲಿ ಎತ್ತರದಲ್ಲಿ ಇರ್ತಾರೆ. ಇಂತಹ ತಪ್ಪು ಕಲ್ಪನೆಗೆ ಹೋಗ್ಬೇಡಿ ಕನಸಲ್ಲು ಅನ್ಕೋಬೇಡಿ. ಅವರಿಗೆ ಸಾವಿರಾರು ಜನ‌‌ ಅಭಿಮಾನಿಗಳು ಇದಾರೆ. 20 ವರ್ಷದಿಂದ ನಿಮ್ಮ ಪಕ್ಷದ ಚಿಹ್ನೆ ಬಳಸಿ ನಿಮ್ಮ‌ಹೆಸರು ಬಳಸಿಕೊಂಡು ವಾಸಣ್ಣ ಗೆದ್ದಿಲ್ಲ. ನಾವು ಜಾತಿಯನ್ನ‌ ಮರೆತು ಜಾತ್ಯಾತೀತವಾಗಿ ವಾಸಣ್ಣನಿಗೆ ಸಪೋರ್ಟ್ ಮಾಡ್ತಿರೋದು ಎಂದು ಹೇಳಿದರು.

ಇನ್ನು, ನಾವು ಯಾವತ್ತು ಕುಮಾರಸ್ವಾಮಿ, ದೇವೆಗೌಡರನ್ನ ನೋಡಿ ಪಕ್ಷಕ್ಕೆ ಬಂದಿಲ್ಲ. ವಾಸಣ್ಣ ಎಂಬ ಶಕ್ತಿಗೋಸ್ಕರ ನಾವು ಅಷ್ಟೇ ಜೆಡಿಎಸ್​​ನಲ್ಲಿ ಇದಿದ್ದು.ವಾಸಣ್ಣ ಕಾಂಗ್ರೆಸ್, ಬಿಜೆಪಿ ಹಾಗೂ ಯಾವ್ದೆ ಪಕ್ಷಕ್ಕೆ ಹೋಗ್ಲಿ ಅವರು ಎಲ್ಲಿ ಇರ್ತಾರೆ ಅವರಿಗೆ ಬೆನ್ನೇಲುಬಾಗಿ ‌ವಿಜಯಶಾಲಿಯನ್ನಾಗಿ ಮಾಡೇಮಾಡ್ತಿವಿ. ಫೇಸ್ಬುಕ್ ನಲ್ಲಿ ಹೆಚ್​ಡಿ ಕುಮಾರಸ್ವಾಮಿಗೆ ಗುಬ್ಬಿ ಶ್ರೀನಿವಾಸ್ ಬೆಂಬಲಿಗರು ಓಪನ್ ಚಾಲೆಂಜ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES