Thursday, January 23, 2025

ಸಾಂಸ್ಕೃತಿಕ ನಗರಿಯ ರಸ್ತೆಗಳಿಗೆ ಕಾಮಗಾರಿ ಯೋಗ

ಮೈಸೂರು: ಜೂನ್ 21ಕ್ಕೆ ಅಂತರಾಷ್ಟ್ರೀಯ ಯೋಗ ದಿನ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿಯ ರಸ್ತೆಗಳಿಗೆ ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ರಸ್ತೆಗಳಿಗೆ ಕಾಮಗಾರಿಯನ್ನು ಮಾಡುತ್ತಿದ್ದಾರೆ.

ಗಲ್ಲಿ, ಹೆದ್ದಾರಿವರೆಗೂ ಹೊಂಡಗಳಿದ್ದ ರಸ್ತೆಗಳಿಗೆ ಕಾಮಗಾರಿ ಭಾಗ್ಯ ಒದಗಿದ್ದು, ನಿದ್ದೆಯಲ್ಲಿದ್ದ ಪಾಲಿಕೆ ಈಗ ಎಚ್ಚೆತ್ತು ಮೈಕೊಡವಿ ಡಾಂಬಾರು ಕಾರ್ಯ ಮಾಡಿದ್ದಾರೆ. ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ನಗರದ ರಸ್ತೆಗಳಿಗೆ ಹೊಸ ರೂಪ ನೀಡುತ್ತಿದ್ದಾರೆ.

ಅದಲ್ಲದೇ, ಡಾಂಬರು ಕಾಣದ ರಸ್ತೆ, ಈಗ ವಾಹನ ಚಾಲಕರಿಗೆ ಖುಷಿ ನೀಡುತ್ತಿದೆ. ದಸರಾಗೆ ಸಿದ್ದವಾದ ಹಾಗೆ ಸಿದ್ಧವಾಗ್ತಿದೆ ಮಲ್ಲಿಗೆ ನಗರಿ. ಕಳಪೆ ಕಾಮಗಾಳಿ ಹಾಗೂ ಅಧಿಕಾರಿಗಳ ನಡೆಗೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮೋದಿ ಬಂದು ಹೋಗೋ ರಸ್ತೆಗಳಿಗಷ್ಟೆ ಕಾಮಗಾರಿ ಭಾಗ್ಯ ಅನ್ನೋದು ಸ್ಥಳೀಯರು ಆರೋಪಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES