Monday, January 20, 2025

ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಕಾಂಗ್ರೆಸ್ಸೇ ಮಾಡಿಕೊಳ್ಳುತ್ತಿದೆ: ಕುಪೇಂದ್ರ ರೆಡ್ಡಿ‌

ಬೆಂಗಳೂರು: ಕಾಂಗ್ರೆಸ್ ಮುಕ್ತ ಕರ್ನಾಟಕ ವನ್ನು ಕಾಂಗ್ರೆಸ್ಸೆ ಮಾಡಿಕೊಳ್ಳುತ್ತಿದೆ ಎಂದು ಜೆಡಿಎಸ್‌ ಮುಖಂಡ ಕುಪೇಂದ್ರ ರೆಡ್ಡಿ‌ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಿನೇಷನ್ ಮುಂಚೆ ಎಲ್ಲಾ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿದ್ದೆ. ಆದ್ರೆ ಸಿದ್ದರಾಮಯ್ಯ ಭೇಟಿಯಾಗಬೇಕಿತ್ತು. ಆದ್ರೆ ಅವ್ರು ಹಾಸನಕ್ಕೆ ಹೋಗಿದ್ತು. ಸೋಮವಾರ ಮಧ್ಯಾನ್ಹ ಸಿದ್ದರಾಮಯ್ಯ ಟೈಮ್ ಕೊಟ್ಟಿದ್ರು. ಆದ್ರೆ ಅಂದು ಬೆಳಿಗ್ಗೆನೇ‌ ಕಾಂಗ್ರೆಸ್ ‌ಕ್ಯಾಂಡಿಡೇಟ್ ಹಾಕಿದ್ರು. ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಬಿಜೆಪಿ‌ ಜೊತೆ ಸರ್ಕಾರ ಮಾಡಿದ್ರೆ 5 ವರ್ಷ ಇರುತ್ತಿತ್ತು. ಆದ್ರೆ ನಾವು ಸೆಕ್ಯುಲರ್ ಹೀಗಾಗಿ ಬಿಜೆಪಿ ಜೊತೆ ಹೋಗಿಲ್ಲ. ಪಾರ್ಟಿ ಅಧ್ಯಕ್ಷರೇ ಪಾರ್ಟಿ ಎಜೆಂಟ್ ಆಗಿ‌ ಕುಳಿತುಕೊಳ್ತಾರೆ ಎಂದರು.

ಅದಲ್ಲದೇ, ಇದು ರಿಜನಲ್ ಪಾರ್ಟಿಗಳ ಸೆಕ್ಯೂಲರಿಸಮ್ ತುಳಿಯುವ ಪ್ರಯತ್ನ ನಿಮಗೆ 20,10,5 ಸೀಟ್ ಕಡಿಮೆ ಬಂತು ಅಂದುಕೊಳ್ಳಿ ಆದ್ರೆ ನೀವು ಬಿಜೆಪಿ ‌ಬಳಿ ಹೋಗುತ್ತಿರಾ? ನಿಮಗೆ ನಾವೇ ಗತಿ ಇದನ್ನು ನೆನಪಿಟ್ಟುಕೊಳ್ಳಿ. ಬಿಜೆಪಿ ನಿಮಗೆ ಯಾವೊತ್ತಿಗೂ ಆಗಲ್ಲ ಇದನ್ನ ನೆನಪಿಟ್ಟುಕೊಳ್ಳಿ. ನಾನು ಸೋಲೊದಲ್ಲ ನನ್ನೊಬ್ಬನಿಂದ ಪಾರ್ಲಿಮೆಂಟ್ ‌ನಡೆಯಲ್ಲ. ರಾಜಕೀಯದಿಂದ ದುಡ್ಡುಮಾಡಬೇಕು ಅಂತಿಲ್ಲ. ದುಡ್ಡನ್ನ ದೇವರು‌ಕೊಟ್ಟಿದ್ದಾನೆ. ಆದ್ರೆ ಜನರ ಸೇವೆಗೆ ರಾಜಕೀಯಕ್ಕೆ ಬಂದಿದ್ದೆನೆ. 90 ವರ್ಷದ ವೃದ್ದರಿಗೆ(ದೇವೇಗೌಡರು) ನೋವು ಕೊಡುವ ಕೆಲಸ ಮಾಡಬೇಡಿ. ನಿಮ್ಮ ಅಣ್ಣತಮ್ಮಂದಿರನ್ನ ತುಳಿಯುವ ಕೆಲಸ ಮಾಡಬೇಡಿ ಎಂದು ಭಾವುಕರಾಗಿ ಮಾತನಾಡಿದರು.

RELATED ARTICLES

Related Articles

TRENDING ARTICLES