Thursday, January 23, 2025

ಪ್ರತಾಪ್ ಸಿಂಹ, ರಾಮದಾಸ್ ಮಧ್ಯೆ ಜಟಾಪಟಿ

ಮೈಸೂರು: ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ ನಡೆಯುತ್ತಿದೆ. ಮೈಲೇಜ್​​ಗಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಶಾಸಕ ರಾಮದಾಸ್ ನಡುವೆ ಜಟಾಪಟಿ ಉಂಟಾಗಿದೆ.

ಮೈಸೂರಿನ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಬಗ್ಗೆ ಮಾಹಿತಿ ನೀಡುವ ವೇಳೆ ಬಿಜೆಪಿ ನಾಯಕರ ಪೈಪೋಟಿ ಉಂಟಾಗಿದೆ. ಯೋಗಪಟುಗಳು ಭಾಗಿಯಾಗುವ ಸಂಖ್ಯೆ ವಿಚಾರದಲ್ಲಿ ಗೊಂದಲವಾಗಿದ್ದು, ಕಾರ್ಯಕ್ರಮದಲ್ಲಿ 7-8 ಸಾವಿರ ಜನ ಭಾಗಿ ಆಗುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಇನ್ನು ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎಸ್.ಎ.ರಾಮದಾಸ್ ಈಗಾಗಲೇ 13 ಸಾವಿರ ಜನ ನೋಂದಣಿ ಆಗಿದೆ ಎಂದರು. ನಾನು ಮಾತಾಡ್ತಿದ್ದೀನಿ ರಾಮದಾಸ್ ಸುಮ್ಮನಿರಬೇಕು ಎಂದು ಶಾಸಕ ರಾಮದಾಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಸಿಡಿಮಿಡಿಗೊಂಡರು.

RELATED ARTICLES

Related Articles

TRENDING ARTICLES