Sunday, December 22, 2024

ನಂದಿಬೆಟ್ಟದಲ್ಲಿ ಫುಲ್ ಟ್ರಾಫಿಕ್ ಜಾಮ್

ಚಿಕ್ಕಬಳ್ಳಾಪುರ: ಇಂದು ವೀಕೆಂಡ್ ಆಗಿರುವ ಕಾರಣ ಜನರು ನಂದಿ ಬೆಟ್ಟದ ಕಡೆ ಹೆಚ್ಚು ಆಗಮಿಸುತ್ತಾರೆ.

ಬೆಳಗ್ಗೆ ನಂದಿ ಹಿಲ್ಸ್ ವೀಕ್ಷಿಸುವುದೇ ಅದ್ಭುತ ಅನುಭವ. ಹೀಗೆ ಭಾನುವಾರ ಎಂಜಾಯ್ ಮಾಡಲು ಬಂದಿದ್ದ ಪ್ರವಾಸಿಗರು ಬೆಟ್ಟದ ಕೆಳಗೆ ಪರದಾಡುವಂತಾಗಿತ್ತು.. ನಂದಿಗಿರಿಧಾಮಕ್ಕೆ ನಿಗದಿತ ವಾಹನಗಳಿಗೆ ಮಾತ್ರ ಪ್ರವೇಶ ಇರುವ ಹಿನ್ನೆಲೆ ತಡವಾಗಿ ಬಂದ ಪ್ರವಾಸಿಗರು ಪ್ರವೇಶವಿಲ್ಲದೆ ಗೋಳಾಡಿದ್ರು. ನಂದಿಗಿರಿಧಾಮದ ಬಳಿ ಕೀಲೋ ಮೀಟರ್​ಗಟ್ಟಲೆ ವಾಹನ ನಿಂತಿದ್ವು. ಪ್ರವಾಸಿಗರು ಬೆಟ್ಡದ ಮೇಲೆ ಹೊಗಲಾಗದೆ ಕೆಳಗೂ ಬರಲಾಗದೆ ಮಕ್ಕಳು, ಮಹಿಳೆಯರು ಸೇರಿ ವೃದ್ಧರು ರಸ್ತೆ ಮಧ್ಯೆ ಪರದಾಡುವಂತಾಯ್ತು.

RELATED ARTICLES

Related Articles

TRENDING ARTICLES