Monday, December 23, 2024

ಪತ್ರ ಬರೆದು ಡಿಸೈನರ್ ಪ್ರತ್ಯುಶಾ ಆತ್ಮಹತ್ಯೆ

ಟಾಲಿವುಡ್ ಮತ್ತು ಬಾಲಿವುಡ್ ಟಾಪ್ ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡುವ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಮನೆಯ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಂಜಾರ ಹಿಲ್ಸ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದ ಪ್ರತ್ಯುಶಾ ಬಾತ್‌ರೂಮ್‌ನಲ್ಲಿ carbon monoxide cylinder ಪತ್ತೆಯಾಗಿದೆ. ಇದನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. DNA ವೆಬ್ ವರದಿ ಮಾಡಿರುವ ಪ್ರಕಾರ ಪ್ರತ್ಯುಶಾ ಮನೆಯಲ್ಲಿ ಪತ್ರ ಸಿಕ್ಕಿದೆ. ಒಂಟಿತನ & ಡಿಪ್ರೆಶನ್ ಕಾಡುತ್ತಿತ್ತು ಎಂದು ಬರೆದಿದ್ದಾರೆ ಎನ್ನಲಾಗಿದೆ.

ರವೀನಾ ಟಂಡನ್, ಕಾಜೋಲ್, ಕಾಜಲ್ ಅಗರ್ವಾಲ್, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ ಸೇರಿದಂತೆ ಹಲವರ ಜೊತೆ ಪ್ರತ್ಯುಶಾ ಕೆಲಸ ಮಾಡಿದ್ರು. ಇನ್ನು, ಪ್ರತ್ಯುಶಾ ಸಾವಿನ ಬಗ್ಗೆ ರಾಮ್​​ಚರಣ್ ಪತ್ನಿ ಉಪಾಸನ ಟ್ವೀಟ್ ಮಾಡಿದ್ದು, ನನ್ನ ಬೆಸ್ಟ್​ಫ್ರೆಂಡ್‌ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗಿರುವುದಕ್ಕೆ ಬೇಸರವಿದೆ, ಕೋಪವಿದೆ. ಆಕೆಗೆ ಎಲ್ಲಾ ಇತ್ತು ದೇಶದಲ್ಲಿರುವ ಬೆಸ್ಟ್‌ ಅವಳ ಬಳಿ ಇತ್ತು. ಆದರೆ ಡಿಪ್ರೆಶನ್ ಅವಳನ್ನು ನಿಂಗಿತ್ತು. ಆಕೆ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಉಪಾಸನ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES