Monday, December 23, 2024

ಕೊರೋನಾ 4ನೇ ಅಲೆ ಆತಂಕ…ತಜ್ಞರಿಂದ ಎಚ್ಚರಿಕೆ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಜನರನ್ನ ಬಿಟ್ಟುಬಿಡದೆ ಕಾಡ್ತಿರೋ ಈ ಕೊರೋನಾ ವೈರಸ್ ಹಲವಾರು ರೂಪಾಂತರದಲ್ಲಿ ಬಂದು ಜನರ ಜೀವನ ಕಿತ್ತುಕೊಂಡಿದೆ. ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಹೀಗಿರುವಾಗ ಈ ವೈರಸ್​​​ನ‌ ಹೊಸ ಹೊಸ ತಳಿಗಳು ಪತ್ತೆಯಾಗುತ್ತಿವೆ. ಇವು 4ನೇ ಅಲೆಗೆ ಕಾರಣ ಆಗಬಹುದು ಅಂತ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲ ಕಳೆದ ಒಂದು ವಾರದಿಂದ ಕೋವಿಡ್ ಕೇಸ್ ಸಂಖ್ಯೆ ಜಾಸ್ತಿಯಾಗಿರುವ ಹಿನ್ನೆಲೆ ಸರ್ಕಾರ ಮತ್ತೆ ಇಂದಿನಿಂದ ಮಾಸ್ಕ್ ಕಡ್ಡಾಯ ಮಾಡಿದೆ. ಈ ಕ್ರಮಗಳನ್ನು ಜಾರಿಗೊಳಿಸಲು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯಲು ತಿಳಿಸಿದೆ.

ಇನ್ನು, ಶಾಪಿಂಗ್ ಮಾಲ್‌ಗಳು, ರೆಸ್ಟೊರೆಂಟ್‌ಗಳು, ಪಬ್‌ಗಳು, ಕೆಫೆಟೇರಿಯಾ, ಹೋಟೆಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಚೇರಿಗಳು, ಕಾರ್ಖಾನೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಅಲ್ಲ ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ.

ILI & SARI ಲಕ್ಷಣಗಳನ್ನು ಹೊಂದಿದವರು, ಹೈರಿಸ್ಕ್‌ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡಿಸುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ತಿಳಿಸಲಾಗಿದೆ.

ಒಟ್ಟಿನಲ್ಲಿ ಕೊರೋನಾ ಹೋದ ಪಿಶಾಚಿ ಅಂದ್ರೆ ಗಾಳಿಲೀ ಬಂದೆ ಗವಾಕ್ಷಿ ಅನ್ನೋ ಹಾಗೆ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಹೀಗಾಗಿ ಜನ ಮತ್ತೆ ಮಾಸ್ಕ್ ಧರಿಸುವ ಅಗತ್ಯ ಇದೆ. 3ನೇ ಅಲೆಯಂತೆ ಯಶಸ್ವಿಯಾಗಿ 4ನೇ ಅಲೆ ಎದುರಿಸಲು ಪಾಲಿಕೆ ಜೊತೆಗೆ ಜನರೂ ಸಜ್ಜಾಗಬೇಕಿದೆ.

RELATED ARTICLES

Related Articles

TRENDING ARTICLES