ಮೈಸೂರು: ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನವಾಗಿದೆ.
ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಆನೆ, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜದಿಂದಾಗಿ ನಿಧನವಾಗಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ. ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿದೆ.
ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕಾಣ ಸಿಗುತ್ತಿದ್ದ ಆನೆ, ಮಿಸ್ಟರ್ ಕಬಿನಿ ಖ್ಯಾತಿಯ ಭೋಗೇಶ್ವರ ಗಂಡಾನೆ ತನ್ನ ಉದ್ದನೆಯ ದಂತಗಳಿಂದಲೇ ಸಾಕಷ್ಟು ಪ್ರಖ್ಯಾತಿ ಗಳಿಸಿತ್ತು. ಅಲ್ಲದೆ, ವನ್ಯಜೀವಿ ಪ್ರಿಯರ ನೆಚ್ಚಿನ ಅನೆಯಾಗಿತ್ತು. ಸಫಾರಿ ವೇಳೆಯೂ ಆಗಾಗ ಕಾಣಿಸಿಕೊಳ್ಳುತ್ತಿದ್ದ ಆನೆ, ಬಂಡೀಪುರ ವ್ಯಾಪ್ತಿಯ ಗುಂಡ್ರೆ ವಲಯದ ಅರಣ್ಯದಲ್ಲಿ ಶನಿವಾರ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅರಣ್ಯ ಇಲಾಖೆಯವರು ಅಂತ್ಯಕ್ರಿಯೆ ಮಾಡಿದ್ದಾರೆ.