Saturday, July 6, 2024

ರಾಜ್ಯಸಭೆ ಟಿಕೆಟ್​​ಗೆ 50 ಕೋಟಿ ಬೇಕು : ವಾಟಾಳ್ ನಾಗರಾಜ್

ಚಾಮರಾಜನಗರ: ಎಲೆಕ್ಷನ್ ಈಗ ಟೆಂಡರ್ ಆಗಿದೆ, ರಾಜ್ಯಸಭೆ ಟಿಕೆಟ್​​ಗೆ 50 ಕೋಟಿ ಬೇಕು ಎಂದು ಚಾಮರಾಜನಗರದಲ್ಲಿ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ರಾಜಕೀಯ ಚುನಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಷನ್ ಈಗ ವ್ಯಾಪಾರ ಆಗಿದೆ, ಟೆಂಡರ್ ಕರೆದು ಹರಾಜು ಕೂಗೋದು ಒಂದು ಮಾತ್ರ ಆಗುತ್ತಿಲ್ಲ. ಸರ್ಕಾರದ ಖಜಾನೆಗೆ ಹಣವೂ ಹರಿದು ಬರಲಿದ್ದು ಡಿಸಿ ಕಚೇರಿಯಲ್ಲಿ ಎಂಎಲ್ಎ, ಎಂಎಲ್ಸಿ ಸ್ಥಾನಗಳನ್ನು ಹರಾಜು ಹಾಕಿದರೇ ಒಳಿತು ರಾಜ್ಯಸಭೆಗಂತೂ ಚಿಂತಕರು, ಜ್ಞಾನಿಗಳು ಹೋಗಲು ಮಿನಿಮಮ್ 50 ಕೋಟಿ ರೂ. ಬೇಕು ಎಂದರು.

ಇನ್ನು ನಿರ್ಮಲಾ ಸೀತರಾಮನ್ ಅವರಿಗೆ ಕರ್ನಾಟಕದ ದೀಕ್ಷೆ ಕೊಡಲಾಗಿದೆ. ‌ಲೆಹರ್ ಸಿಂಗ್ ಯಾರು, ಆತನ ಹಿನ್ನೆಲೆ ಏನು ಗೊತ್ತಿಲ್ಲ. ಇತ್ತೀಚಿಗೆ ರಾಜ್ಯಸಭೆಗೆ ಮೇಧಾವಿಗಳು, ಕಲಾವಿದರು, ಚಿಂತಕರು ಹೋಗಲಾಗುತ್ತಿಲ್ಲ. ನಾನು ಹಿಂದೆ 60-70 ರ ದಶಕದ ಚುನಾವಣೆಗಳಲ್ಲಿ ನಿಂತಾಗ‌ ಜನರು ಅಭ್ಯರ್ಥಿಗಳಿಗೆ ತಾಂಬೂಲ‌ ಕೊಟ್ಟು ಕೈಲಾದಷ್ಟು ಹಣವನ್ನು ಕೊಡುತ್ತಿದ್ದರು. ಪಕ್ಷದ ಕಾರ್ಯಕರ್ತರು, ಮತದಾರರಿಗೆ ಉಪ್ಪಿಟ್ಟು ಕೊಡಲಾಗುತ್ತಿತ್ತು. ಈಗ ಉಪ್ಪಿಟ್ಟಿಗೆಲ್ಲಾ ಬೆಲೆಯೇ ಇಲ್ಲಾ, ಉಪ್ಪಿಟ್ಟು ಈಗ ಬರೀ ಉಪ್ಪುಪ್ಪಾಗಿದೆ ಎಂದು ಕಿಡಿಕಾರಿದರು.

ಪ್ರಜ್ಞಾವಂತ ಪದವೀಧರರು ನನಗೆ ಮತ ಕೊಟ್ಟು ಮೇಲ್ಮನೆಗೆ ಕಳುಹಿಸಬೇಕಿತ್ತು. ನಾನು ಸೋತರೇ ನನಗೇನು ಬೇಸರವಿಲ್ಲ, ಜನರಿಗೇ ನಷ್ಟ, ಜನಪರವಾಗಿ ಹೋರಾಟ ಮಾಡುವ ವ್ಯಕ್ತಿಗೆ ಮಣೆ ಹಾಕದಿದ್ದರೇ ಅವರಿಗೇ ನಷ್ಟ ಎಂದು ವಾಟಾಳ್ ನಾಗರಾಜ್​​ ಹೇಳಿದರು.

RELATED ARTICLES

Related Articles

TRENDING ARTICLES