Monday, December 23, 2024

ಫೀಲ್ ಮೈ ಲವ್ ಹನಿ ಬನಿ ಎಂದ ಕ್ರೇಜಿತನಯ ತ್ರಿ‘ವಿಕ್ರಮ’

ಸ್ಯಾಂಡಲ್​​ವುಡ್​​ನಲ್ಲಿ ಹನಿ ಬನಿ ಫೀಲ್​ ಮೈ ಲವ್​ ಹಾಡಿನ ಗುಂಗು ಎಲ್ಲರಿಗೂ ಹುಚ್ಚು ಹಿಡಿಸ್ತಿದೆ. ತ್ರಿವಿಕ್ರಮ ಚಿತ್ರದ ಈ ಮ್ಯೂಸಿಕಲ್​ ಹಿಟ್​ಗೆ ಸಖತ್​ ಪಾಸಿಟಿವ್​ ರೆಸ್ಪಾನ್ಸ್​ ಸಿಕ್ತಿದೆ. ಈ ಕಲರ್​​ಫುಲ್​ ಸಾಂಗ್​​ನಲ್ಲಿ ಕ್ರೇಜಿಸ್ಟಾರ್​ ತನಯ ವಿಕ್ರಮ್​ ಬಿಂದಾಸ್​​ ಸ್ಟೆಪ್​ ಹಾಕಿದ್ದಾರೆ. ವಿಕ್ಕಿ ಕ್ರೇಜಿ ಡ್ಯಾನ್ಸ್​ ನೋಡಿ ನೆಕ್ಸ್ಟ್​​ ಸೂಪರ್​ ಸ್ಟಾರ್​ ಅಂತ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ಸ್ಯಾಂಡಲ್​​ವುಡ್​​ನಲ್ಲಿ ಹನಿ ಬನಿ ಫೀಲ್​ ಮೈ ಲವ್​ ಕಿಕ್

ತ್ರಿವಿಕ್ರಮ ಪರಾಕ್ರಮ.. ಅಗ್ರೆಸ್ಸೀವ್​ ಪ್ರಮೋಷನ್ಸ್​ ಶುರು

ಗನ್ ಹಿಡಿದು ಶೂಟ್​ ವಾರ್ನಿಂಗ್​ ಕೊಟ್ಟರು ವಿಕ್ರಮ್..!​​

ಸಿನಿ ತಾರೆಯರಿಂದ  ಹನಿ ಬನಿ ಸಾಂಗ್​​ಗೆ ಸಪೋರ್ಟ್​​

ಎಲ್ಲದಕ್ಕೂ ಲೈಫಲ್ಲಿ ಒಳ್ಳೆ ಟೈಮ್​ ಬರಬೇಕು ಅಂತಾರೆ. ಕ್ರೇಜಿಸ್ಟಾರ್​ ರವಿಚಂದ್ರನ್​​ ಅವರ ದ್ವಿತೀಯ ಪುತ್ರ ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿ ಕೊಡೋದು ಯಾವಾಗ ಅನ್ನೋ ಸಾವಿರಾರು ಪ್ರಶ್ನೆಗಳಿಗೆ ಒಳ್ಳೆ ಟೈಮ್​ ಅಂತೂ ಬಂದಾಗಿದೆ. ತ್ರಿವಿಕ್ರಮ ಚಿತ್ರದ ಮೂಲಕ ವಿಕ್ರಮ್​ ಪರಾಕ್ರಮ ನೋಡೋಕೆ ಚಿತ್ರರಸಿಕರು ತುದಿಗಾಲಲ್ಲಿ ಕಾಯ್ತಿದ್ದಾರೆ. ಸಾಂಗ್ಸ್​​, ಟ್ರೈಲರ್​ ಮೂಲಕ ಹಲ್​ಚಲ್​ ಎಬ್ಬಿಸಿರೋ ತ್ರಿವಿಕ್ರಮ ತಂಡದಿಂದ ಅಗ್ರೆಸ್ಸೀವ್​ ಪ್ರಮೋಷನ್ಸ್​ ಸ್ಟಾರ್ಟ್​​ ಆಗಿದೆ.

ಸಿನಿಮಾ ಸೆಟ್ಟೇರಿದ ದಿನದಿಂದ ಒಂದಿಲ್ಲೊಂದು ಹೈಪ್​ ಕ್ರಿಯೇಟ್​ ಮಾಡ್ತಿರೋ ತ್ರಿವಿಕ್ರಮ ಸಿನಿಮಾ, ಟೀಸರ್​​ ರಿಲೀಸ್ ಮಾಡಿ ಸೆನ್ಸೇಷನ್​ ಕ್ರಿಯೇಟ್ ಮಾಡಿತ್ತು. ಇದಾದ ನಂತ್ರ ಸೆಂಚೂರಿ ಸ್ಟಾರ್ ಶಿವಣ್ಣ ಕೂಡ ಸಿನಿಮಾ ಬೇಗ ರಿಲೀಸ್ ಮಾಡಿ, ಐ ಕಾಂಟ್​ ವೆಯ್ಟ್​ ಅಂದಿದ್ರು. ಕ್ರೇಜಿಸ್ಟಾರ್​ ಮಗನ ಸಿನಿಮಾ ನನ್ನ ಮಗನ ಸಿನಿಮಾ ಇದ್ದಂತೆ ಎಂದಿದ್ದ ಶಿವಣ್ಣ ಪ್ಲೀಜ್ ಮಮ್ಮಿ ಸಾಂಗ್​ ರಿಲೀಸ್​ ಮಾಡಿ ವಿಕ್ರಮ್​ ಜೊತೆ ಮಸ್ತ್​ ಸ್ಟೆಪ್ ಕೂಡ ಹಾಕಿದ್ರು.

ಲೇಟ್​ ಆದ್ರೂ ಲೆಟೆಸ್ಟ್​ ಆಗಿ ಜೂನ್​ 24ರಂದು ಬೆಳ್ಳಿ ತೆರೆಯ ಮೇಲೆ ರಾರಾಜಿಸೋಕೆ ತ್ರಿವಿಕ್ರಮ ಬರ್ತಿದ್ದಾನೆ. ಶೂಟಿಂಗ್​ಮುಗಿಸಿ ಕುಂಬಳಕಾಯಿ ಹೊಡೆದಿರೋ ಚಿತ್ರತಂಡ ಪ್ರಮೋಷನ್ಸ್​ ಕಾರ್ಯದಲ್ಲಿ ಬ್ಯುಸಿಯಾಗಿದೆ. ಅಗ್ರೆಸ್ಸೀವ್​ ಪ್ರಮೋಷನ್ಸ್​​ ಸ್ಟಾರ್ಟ್​ ಮಾಡದಿದ್ರೆ ಶೂಟ್​ ಮಾಡ್ತೀನಿ ಅಂತ ಕೈಯಲ್ಲಿ ಗನ್​ ಹಿಡಿದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ವಿಕ್ರಮ್.

ಈ ನಡುವೆ ಚಿತ್ರತಂಡದಿಂದ ಮತ್ತೊಂದು ಸಾಂಗ್​ ರಿಲೀಸ್ ಆಗಿದ್ದು, ಬೇಜಾನ್​ ಸೌಂಡ್​ ಮಾಡ್ತಿದೆ. ಎಲ್ಲೆಲ್ಲೂ ಹನಿ ಬನಿ ಸಾಂಗ್​​ ಗುಂಗು ಹಿಡಿಸಿದೆ. ಹಾಡಿನ ಲಿರಿಕ್ಸ್​​​, ಮ್ಯೂಸಿಕ್​​, ಟ್ಯೂನ್​ ಕೇಳಲು ಇಂಪ್ರೆಸ್ಸೀವ್ ಆಗಿದೆ. ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಜೊತೆ ವಿಕ್ಕಿ ಬಿಂದಾಸ್​​ ಸ್ಟೆಪ್ಸ್​ ಹಾಕಿದ್ದಾರೆ. ಇನ್ಮುಂದೆ ವಿಕ್ರಮ್​ನ ಹಿಡಿಯೋರೆ ಇಲ್ಲ. ವಿಕ್ಕಿ ಮಾಸ್​ ಹೀರೋ. ನೆಕ್ಸ್ಟ್​​ ಸೂಪರ್ ಸ್ಟಾರ್​ ಅಂತ ಕಮೆಂಟ್​ ಮಾಡ್ತಿದ್ದಾರೆ.

ಹನಿ ಬನಿ ಫೀಲ್​ ಮೈ ಲವ್​ ಹಾಡನ್ನು ಸ್ಯಾಂಡಲ್​ವುಡ್​ ಸಿನಿತಾರೆಯರೆಲ್ಲಾ ವರ್ಚುವಲ್​ ಆಗಿ ರಿಲೀಸ್ ಮಾಡಿದ್ದಾರೆ. ಪ್ರೇಮ್, ರಕ್ಷಿತಾ, ಸೃಜನ್​ ಲೋಕೇಶ್​​, ನವೀನ್​ ಸಜ್ಜು, ಮೇಘಾ ಶೆಟ್ಟಿ, ಚಂದನ್​ ಶೆಟ್ಟಿ, ಕಿರಿಕ್​ ಕೀರ್ತಿ ಸೇರಿದಂತೆ 18ಕ್ಕೂ ಅಧಿಕ ಸ್ಟಾರ್ಸ್ ಏಕಕಾಲಕ್ಕೆ ರಿಲೀಸ್​ ಮಾಡಿ ತ್ರಿವಿಕ್ರಮನಿಗೆ ಸಾಥ್​ ನೀಡಿದ್ದಾರೆ. ಈ ಹಾಡಿಗೆ ಚೇತನ್​ ಕುಮಾರ್ ಸಾಹಿತ್ಯ ಬರೆದಿದ್ದು, ಅರ್ಜುನ್​ ಜನ್ಯಾ ಮ್ಯೂಸಿಕ್ ಕಂಪೋಸ್​ ಮಾಡಿದ್ದಾರೆ. ಸಂಜಿತ್​ ಹೆಗಡೆ ಕಂಠದಲ್ಲಿ ಕೇಳಲು ಇಂಪಾಗಿದೆ. ರೋಜ್ ಖ್ಯಾತಿಯ​ ಸಹನಾ ಮೂರ್ತಿ ನಿರ್ದೇಶನ, ಸೋಮಣ್ಣ ನಿರ್ಮಾಣದಲ್ಲಿ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಒಟ್ಟಾರೆ ಸಿನಿರಸಿಕರ ಕುತೂಹಲಕ್ಕೆ ಕಾರಣವಾಗಿರೋ ತ್ರಿವಿಕ್ರಮನ ಭರಾಟೆ ನೋಡೋಕೆ ಕೌಂಟ್​ಡೌನ್ ಅಂತೂ ಶುರುವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES