Thursday, December 19, 2024

ಜೆಡಿಎಸ್​​ಗೆ ನನ್ನ ನಿಲುವು ಟೀಕಿಸಲು ಹಕ್ಕಿಲ್ಲ : ಶಾಸಕ ಕೆ ಶ್ರೀನಿವಾಸಗೌಡ

ಕೋಲಾರ: ಪಕ್ಷದಿಂದ ಉಚ್ಛಾಟಿಸಿದ ನನ್ನ ನಿಲುವು ಬಗ್ಗೆ ಟೀಕಿಸಲು ಜೆಡಿಎಸ್​​ನವರಿಗೆ ಹಕ್ಕಿಲ್ಲ ಎಂದು ಜೆಡಿಎಸ್ ಶಾಸಕ ಕೆ ಶ್ರೀನಿವಾಸಗೌಡ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ಉತ್ತರಿಸಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ. ನಾನು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದು. ನನ್ನನ್ನ ಪಕ್ಷದಿಂದ ಉಚ್ಛಾಟಿಸಿರುವುದಾಗಿ ಪ್ರಜ್ವಲ್ ರೇವಣ್ಣ ಏಳು ತಿಂಗಳ ಹಿಂದೆಯೇ ಹೇಳಿದ್ದಾರೆ. ಹೀಗಾಗಿ ಅವರಿಗೆ ನನ್ನ ನಿಲುವು ಬಗ್ಗೆ ಟೀಕಿಸಲು ಜೆಡಿಎಸ್​​ನವರಿಗೆ ಹಕ್ಕಿಲ್ಲ ಎಂದು ಹೇಳಿದರು.

ಇನ್ನು ನನ್ನ ಮನೆ ಎದುರು ಪ್ರತಿಭಟನೆ ನಡೆಸಿದವರಿಗೆ ಒಳ್ಳೆಯದಾಗಲಿ. ನಾನು ಯಾವುದೇ ಪಕ್ಷಕ್ಕೆ ಸೇರಲು ಸ್ವತಂತ್ರವಾಗಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಏನೇನು ಇರಲಿಲ್ಲ. ಕುಮಾರಸ್ವಾಮಿ ನಡತೆಗಳು, ಡಿಕ್ಟೇಟರ್ ಷಿಪ್ ನ್ಯಾಯಯುತವಾಗಿಲ್ಲ. ನನ್ನ ಹಿರಿತನಕ್ಕೆ ಜೆಡಿಎಸ್ ಗೌರವ ಕೊಡದಿರುವುದು ಬೇಸರ ತಂದಿದೆ. ಕಾಂಗ್ರೆಸ್​​ನಲ್ಲಿ ಟಿಕೆಟ್ ಕೊಟ್ಟರೆ ಕೋಲಾರದಲ್ಲಿ ಸ್ಪರ್ಧಿಸುವೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಾನು ಅವರನ್ನೇ ಬೆಂಬಲಿಸುವೆ ಎಂದರು.

RELATED ARTICLES

Related Articles

TRENDING ARTICLES