ಬಾಲಿವುಡ್ ಭಾಯಿಜಾನ್ನ ಮುಗಿಸಲು ಗ್ಯಾಂಗ್ಸ್ಟರ್ ಒಬ್ರು ಮಹಾ ಸಂಚು ರೂಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೊಲೆ ಬೆದರಿಕೆ ಪತ್ರ ಕೂಡ ಬಂದಿದ್ದು, ಸಲ್ಲೂ ನಿವಾಸದ ಮುಂದಿರೋ ಕಟ್ಟಡದಲ್ಲಿ ಶಾರ್ಪ್ ಶೂಟರ್ ಇದ್ರು ಅನ್ನೋದು ಸದ್ಯ ಬ್ರೇಕಿಂಗ್ ಹಾಗೂ ಶಾಕಿಂಗ್ ನ್ಯೂಸ್ ಆಗಿ ಮಾರ್ಪಟ್ಟಿದೆ. ಇಷ್ಟಕ್ಕೂ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿರೋದಾದ್ರು ಯಾರು..? ಯಾವ ಕಾರಣಕ್ಕಾಗಿ ಅನ್ನೋದ್ರ ಇನ್ಸೈಡ್ ಸ್ಟೋರಿ ಇಲ್ಲಿದೆ.
ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್.. ವಿಷ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ
ಜೂ- 6ಕ್ಕೆ ಕೊಲೆ ಬೆದರಿಕೆ.. ಮನೆ ಮುಂದೆ ಶಾರ್ಪ್ ಶೂಟರ್
ಇಷ್ಟಕ್ಕೂ ಯಾರೀ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್..?
ಸಲ್ಮಾನ್ನ ಕೊಲ್ಲೋದಾಗಿ ಸ್ಟೇಟ್ಮೆಂಟ್ ನೀಡಿದ್ಯಾಕೆ..?!
ಯೆಸ್ ವೀಕ್ಷಕರೇ.. ನೀವು ಕೇಳ್ತಿರೋದು ನಿಜಾನೇ. ಜೂನ್ 6ರಂದು ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅವ್ರ ತಂದೆ ಸಲೀಂ ಖಾನ್ಗೆ ಜೀವ ಬೆದರಿಕೆ ಪತ್ರವೊಂದು ಬಂದಿದೆ. ಇದು ಬರೀ ಸಲ್ಲೂ ಫ್ಯಾಮಿಲಿಗಷ್ಟೇ ಅಲ್ಲ ಮುಂಬೈ ಪೊಲೀಸರಿಗೂ ತಲೆನೋವಾಗಿ ಕಾಡ್ತಿದೆ.
ಪತ್ರ ಕಳಿಸಿದ ಭೂಪನ್ಯಾರು ಅನ್ನೋದನ್ನ ಪೊಲೀಸರು ಇನ್ನೂ ತನಿಖೆ ನಡೆಸ್ತಾ ಇದ್ದಂತೆ, ಮುಂಬೈನಲ್ಲಿ ಸಲ್ಲು ತಂಗಿರೋ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ಶಾರ್ಪ್ ಶೂಟರ್ ಇದ್ರು ಅನ್ನೋ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಇದು ಅವ್ರ ಅಭಿಮಾನಿ ಬಳಗಕ್ಕೆ ಟೆನ್ಷನ್ ಕೊಟ್ಟಿದ್ದು, ಪೊಲೀಸರು ಈ ವಿಚಾರ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಆಪ್ತ ವಿಕ್ರಮ್ ಬ್ರಾರ್ ಅಂತ ಗುರುತಿಸಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಎಲ್ರಿಗೂ ಗೊತ್ತೇಯಿದೆ. ಆ ಪ್ರಕರಣದಲ್ಲಿ ಶಂಕಿತ ಆರೋಪಿ ಆಗಿರೋ ವ್ಯಕ್ತಿಯೇ ಈ ಲಾರೆನ್ಸ್ ಬಿಷ್ಣೋಯ್. ಸುಮಾರು 24ಕ್ಕೂ ಅಧಿಕ ಕ್ರಿಮಿನಲ್ ಕೇಸ್ಗಳು ಈತನ ಮೇಲೆ ದಾಖಲಾಗಿದ್ದು, ಸಲ್ಮಾನ್ ಖಾನ್ರನ್ನ ತಾನೇ ಕೊಲ್ಲೋದಾಗಿ ಓಪನ್ ಸ್ಟೇಟ್ಮೆಂಟ್ ನೀಡಿ, ಎಲ್ಲರ ಹುಬ್ಬೇರಿಸಿದ್ದ.
1998ರ ರಾಜಸ್ತಾನದ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಲೂ ಆರೋಪಿ ಅನ್ನೋದು ದೃಢಪಟ್ಟ ನಂತ್ರ, ಸಲ್ಮಾನ್ ಖಾನ್ನ ಕೊಲ್ಲೋದಾಗಿ ಪ್ರತಿಜ್ಞೆ ಮಾಡಿದ್ದ ಲಾರೆನ್ಸ್ ಬಿಷ್ಣೋಯ್. ಪೊಲೀಸರು, ಕೋರ್ಟು, ಕಚೇರಿ ಇವೆಲ್ಲವೂ ಸಲ್ಮಾನ್ ಖಾನ್ರನ್ನ ಬಿಟ್ರೂ ಸಹ, ಈ ವಿಚಾರ ಗ್ಯಾಂಗ್ಸ್ಟರ್ ಬಿಷ್ಣೋಯ್ ಬಿಡೋ ಹಾಗೆ ಕಾಣ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಸದ್ಯ ಸಲ್ಮಾನ್ ಖಾನ್ರ ತಂದೆ ಸಲೀಂ ಖಾನ್, ಹೊರಗೆ ವಾಕಿಂಗ್ ಹೋಗಿದ್ದಾಗ ಅವ್ರಿಗೆ ಪತ್ರವೊಂದು ತಲುಪಿದ್ದು, ‘ಮೂಸೆವಾಲಾ ರೀತಿಯಲ್ಲೇ ನಿಮಗೂ ಮಾಡುತ್ತೇವೆ’ ಅಂತ ಆ ಪತ್ರದಲ್ಲಿ ಬರೆದು, ಕೊನೆಯಲ್ಲಿ ‘ಎಲ್ಬಿ’ ಅಂತ ಬರೆಯಲಾಗಿತ್ತಂತೆ. ಎಲ್ಬಿ ಅಂದ್ರೆ ಲಾರೆನ್ಸ್ ಬಿಷ್ಣೋಯ್ ಇರಬಹುದು ಅಂತ ಪೊಲೀಸರು ಶಂಕಿಸಿದ್ದು, ಸದ್ಯ ಬಿಷ್ಣೋಯ್ ಹಾಗೂ ಆತನ ಗ್ಯಾಂಗ್ನ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಸಲ್ಲೂ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ಬರ್ತಾ ಇರ್ತಾರೆ. ಅಲ್ಲದೆ, ಸಲ್ಮಾನ್ ಖಾನ್ ಅದೆಷ್ಟೋ ಬಾರಿ ಶೂಟಿಂಗ್ ಸೆಟ್ಗೆ ಶ್ರೀಸಾಮಾನ್ಯನಂತೆ ಸೈಕಲ್ ಮೂಲಕವೇ ಸೇರಿಕೊಳ್ತಾರೆ. ಹೀಗಿರುವಾಗ ಸಲ್ಲೂನ ಸಾಯಿಸೋದು ಶಾರ್ಪ್ ಶೂಟರ್ಗೆ ಕಷ್ಟವಾಗಲಾರದು. ಆದ್ರೆ ಇಷ್ಟೆಲ್ಲಾ ನಡೆದ ಮೇಲೆ ಮುಂಬೈ ಪೊಲೀಸರು ಸಲ್ಮಾನ್ ಖಾನ್ಗೆ ಹೆಚ್ಚಿನ ಭದ್ರತೆ ನೀಡಿದ್ದಾರೆ. ಭಾಯಿಜಾನ್ ಕೂಡ ಅಕ್ಷರಶಃ ನಡುಗಿದ್ದಾರೆ.
ಮಾಡಿದ ಪಾಪಗಳನ್ನು ತೊಳೆದುಕೊಳ್ಳಲು ಬೀಯಿಂಗ್ ಹ್ಯೂಮನ್ ಹೆಸ್ರಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡ್ತಿದ್ದಾರೆ ಸಲ್ಮಾನ್ ಖಾನ್. ದುಡಿದ ಒಂದಷ್ಟು ಹಣವನ್ನು ದಾನ, ಧರ್ಮದ ಮೂಲಕ ಅಸಹಾಯಕರಿಗೆ ನೆರವಾಗ್ತಿದ್ದಾರೆ. ಆದ್ರೂ ಸಹ ಒಂದಷ್ಟು ಮಂದಿ ಸಲ್ಲೂನ ಮುಗಿಸಲು ಸ್ಕೆಚ್ ಹಾಕಿದ್ದಾರೆ. ಎಷ್ಟು ಕೋಟಿ ದುಡ್ಡಿದ್ರೆ ಏನು ಪ್ರಯೋಜನ, ಜೀವವನ್ನ ಅಂಗೈಯಲ್ಲಿ ಇಟ್ಕೊಂಡು ಓಡಾಡೋ ಅಂತಹ ಪರಿಸ್ಥಿತಿಯಲ್ಲಿದ್ದಾರೆ ಸಲ್ಲೂ. ಇದು ಮುಂದೆ ಯಾವ್ಯಾವ ರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ