Monday, December 23, 2024

ಇಂದಿನಿಂದ ಮಾಸ್ಕ್‌ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ಬಸ್ ಹಾಗೂ ರೈಲು ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಶಾಪಿಂಗ್ ಮಾಲ್‌ಗಳು, ರೆಸ್ಟೊರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯಾ, ಹೋಟೆಲ್‌ಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ಕೊರೋನಾ ಪ್ರಕರಣ ಮತ್ತಷ್ಟು ಹೆಚ್ಚಳವಾಗಿದ್ದು, 3.5 ತಿಂಗಳ ಬಳಿಕ 500+ ಕೇಸ್‌ ಜಾಸ್ತಿಯಾಗಿದೆ.

ಇನ್ನು, ಪರೀಕ್ಷೆ ಪಾಸಿಟಿವಿಟಿ ದರವೂ ತುಸು ಹೆಚ್ಚಳವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಸಾವಿರ ಗಡಿ ದಾಟಿದೆ. ಈ ಹಿಂದೆ ಫೆಬ್ರವರಿ 26 ರಂದು 516 ಕೊರೋನಾ ಪ್ರಕರಣಗಳು ವರದಿಗಳು ಕಂಡುಬಂದಿದ್ದು, ಸದ್ಯ ಮೂರೂವರೆ ತಿಂಗಳ ಬಳಿಕ (105 ದಿನ) ಮತ್ತೆ 500ರ ಗಡಿ ದಾಟಿವೆ.

RELATED ARTICLES

Related Articles

TRENDING ARTICLES