Sunday, January 19, 2025

ಜೀವ ರಕ್ಷಣೆಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ನವದಂಪತಿ

ವಿಜಯನಗರ : ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಯೊಂದು ಜೀವ ರಕ್ಷಣೆ ಬೇಡಿ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಯುವತಿಯ ಹೆಸರು ವಿ ಪಿ ಸೌಮ್ಯಾ. ಮೂಲತಃ ವಿಜಯನಗರ ಜಿಲ್ಲೆಯ ಹೊಸಪೇಟೆಯ 28ನೇ ವಾರ್ಡ್, ಚಪ್ಪರದಳ್ಳಿ ನಿವಾಸಿ. ಈ ಯುವತಿಯ ಬಳ್ಳಾರಿಯ ಕುಂಬಾರ ಓಣಿಯ ನಿವಾಸಿಯಾದ ಶರತ್ ಜೊತೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದಾಳೆ. ಇವರಿಬ್ಬರೂ ಬಳ್ಳಾರಿಯ ಖಾಸಿಗಿ ಕಾಲೇಜ್ ನಲ್ಲಿ ಎಂ ಬಿ ಎ ಪದವಿ ಮುಗಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಯಾಗಿ ತಿರುಗಿ ಇದೇ ತಿಂಗಳ ಮೂರರಂದು ಬಳ್ಳಾರಿಯ ವಸಬ್ ರಿಜಿಸ್ಟರ್ ಆಪೀಸ್ ನಲ್ಲಿ ಮದುವೆಯಾಗಿದ್ದಾರೆ.

ಆದ್ರೆ ಇವರಿಬ್ಬರ ಮದುವೆಗೆ ಜಾತಿ ಮತ್ತು ಅಂತಸ್ತು ಅಡ್ಡ ಬಂದಿದೆ. ಹೀಗಾಗಿ ಯುವತಿಯ ಮನೆಯಲ್ಲಿ ಇವರಿಬ್ಬರ ಮದುವೆಗೆ ವಿರೋದ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಯುವತಿಯ ಮನೆಯವರು ಹೊಸಪೇಟೆಯ  ಬಡಾವಣೆ ಪೋಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದಾರೆ. ಆದರೆ ಇಬ್ಬರು ಒಳ್ಳೆಯ ವಿದ್ಯಾವಂತರು ಮೇಲಾಗಿ ಇಬ್ಬರು ಮೇಜರ್ .

ಹೀಗಾಗಿ ನಾನು ಇಷ್ಟ ಪಟ್ಟ ಯುವಕನ ಜೊತೆಯಲ್ಲಿ ಬದಕುತ್ತೇನೆ ನಮನ್ನು ಬದುಕಲು ಬಿಡೊ ಎಂದು ಯುವತಿ ಕಣ್ಣೀರು ಹಾಕುತ್ತಾ ತಂದೆ ತಾಯಿಗಳಿಗೆ‌ ಮನವಿ ಮಾಡಿದ್ದಾಳೆ.

RELATED ARTICLES

Related Articles

TRENDING ARTICLES