Wednesday, November 6, 2024

ಈದ್ಗಾ ಮೈದಾನ ವಿವಾದ : ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಹಸ್ತಕ್ಷೇಪ

ಬೆಂಗಳೂರು: ಈದ್ಗಾ ವಿವಾದದ ಕಿಚ್ಚು ಹೆಚ್ಚಾಗ್ತಿದೆ. ಮೈದಾನದ ವಿಚಾರವಾಗಿ ಯಾವ್ದೇ ಅಹಿತಕರ ಘಟನೆಗಳು ನಡೆಯದಂತೆ ಬಿಬಿಎಂಪಿ ಅನುಮತಿ ಪಡೆದು ಪೊಲೀಸರು ಇವತ್ತು ಸಿಸಿಟಿವಿ ಅಳವಡಿಕೆಗೆ ಮುಂದಾಗಿದ್ರು.

ಈ ವೇಳೆ ಸ್ಥಳೀಯರು ಇದಕ್ಕೆ ವಿರೋಧಿಸಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು. ಸಿಸಿಟಿವಿ ವಯರ್ ಮುಚ್ಚೋಕೆ ತೋಡಿದ್ದ ಗುಂಡಿಗಳನ್ನ ಮುಚ್ಚದಂತೆ ಪಟ್ಟು ಹಿಡಿದ್ರು. ಇಷ್ಟು ದಿನ ಇಲ್ಲದ ಭದ್ರತೆ ಈಗ್ಯಾಕೆ. ಕೇಬಲ್ ಮುಚ್ಚೋಕೆ ಅವಕಾಶ ಕೊಡಲ್ಲ ಅಂತ ಸ್ಥಳೀಯರು ಜೆಸಿಗೆ ಅಡ್ಡ ಬಂದು ಹೈಡ್ರಾಮಾವೇ ನಡೆಸಿದ್ರು. ಈ ವೇಳೆ ಚಾಮರಾಜಪೇಟೆಯ ಇನ್ಸ್ಪೆಕ್ಟರ್ ಹಾಗೂ ವಲಯರ ಎಸಿಪಿ ಸ್ಥಳೀಯರನ್ನ ವನವೊಲಿಸಿ, ಮೈದಾನದಿಂದ ಚದುರಿಸಿದ್ರು. ಆದ್ರೆ ಇದಕ್ಕೆ ಕಾಂಪೌಂಡ್ ನಿರ್ಮಾಣ ಮಾಡ್ತಾರೆ ಅಂತ ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ಅಂತ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಅಸಮಾಧಾನ ಹೊರ ಹಾಕಿದ್ರು.

ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಪೊಲೀಸರು ಹಾಗೂ ಸ್ಥಳೀಯ ರ ಜೊತೆ ಸಂದಾನದ ಮಾತುಕತೆ ನಡೆಸಿ. ಅಂಡರ್ ಗ್ರೌಂಡ್ ಕೇಬಲ್ ಅನ್ನ ತೆಗೆದು ಸ್ಥಳೀಯರ ಮನವಿಯಂತೆ ಪ್ರತ್ಯೇಕ ಕಂಬದ ಮೇಲೆ ಕೇಬಲ್ ಅಳವಡಿಸುವಂತೆ ಭರವಸೆ ನೀಡಿದ್ರು.

RELATED ARTICLES

Related Articles

TRENDING ARTICLES