Saturday, January 18, 2025

ಡಾನ್ ಜಯರಾಜ್ ರಿಲೀಸ್​ಗೆ ಮುಹೂರ್ತ ಫಿಕ್ಸ್..!

ಬೆಂಗಳೂರು ಅಂಡರ್​ವರ್ಲ್ಡ್​ ಡಾನ್ ಜಯರಾಜ್​ನ ಎದೆಷ್ಟೋ ಮಂದಿ ನೋಡಿಲ್ಲ. ಆದ್ರೆ ಅವ್ರ ಬಗ್ಗೆ ಕಥೆಗಳ ರೂಪದಲ್ಲಿ ಕೇಳಿರ್ತೀರಾ ಅಥ್ವಾ ಅವ್ರ ಕ್ರೈಂ ದುನಿಯಾ ಬಗ್ಗೆ ಓದಿರ್ತೀರಾ. ಇದೀಗ ಅದೇ ಜಯರಾಜ್ ರಿಲೀಸ್ ಆಗ್ತಿದ್ದಾರೆ. ಅರೇ.. ಅವ್ರು ಸತ್ತು ತುಂಬಾ ದಿನಗಳಾಯ್ತಲ್ಲಾ ಅಂತ ಹುಬ್ಬೆರಿಸೋಕೂ ಮುನ್ನ ಈ ಇಂಟರೆಸ್ಟಿಂಗ್ ಸ್ಟೋರಿ ಒಮ್ಮೆ ನೋಡಿ.

ಡಾನ್ ಜಯರಾಜ್ ರಿಲೀಸ್​ಗೆ ಮುಹೂರ್ತ ಫಿಕ್ಸ್..!

ದೀಪಾವಳಿಗೆ ಹೈ ಅಲರ್ಟ್​.. ಜಯರಾಜ್ ಕಮಿಂಗ್

ಎರಡು ಭಾಗಗಳಲ್ಲಿ ಹೆಡ್​ಬುಷ್ ಆನ್​​ಸ್ಕ್ರೀನ್ ಅಬ್ಬರ

ಅಕ್ಟೋಬರ್ 21ಕ್ಕೆ ಟಗರು ಡಾಲಿ- ಚಿಟ್ಟೆ ಮೆಗಾ ಮಿಂಚು

ಸ್ಯಾಂಡಲ್​ವುಡ್​ನ ಮೋಸ್ಟ್ ವರ್ಸಟೈಲ್ ಹಾಗೂ ಡಿಮ್ಯಾಂಡಿಂಗ್ ನಟ ಅಂದ್ರೆ ಡಾಲಿ ಧನಂಜಯ. ಸದಾ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ಎಂಟರ್​ಟೈನ್ ಮಾಡೋ ಇವ್ರು, ಸದ್ಯ ಡಾನ್ ಜಯರಾಜ್​ನ ಕರೆತರುತ್ತಿದ್ದಾರೆ. ಅರೇ ಅವ್ರು ಸತ್ತು ಬಹಳ ವರ್ಷಗಳೇ ಆಯ್ತಲ್ಲಾ ಈಗ ಹೇಗೆ ಸಾಧ್ಯ ಅಂತ ಜಾಸ್ತಿ ತಲೆ ಕೆಡಿಸಿಕೋಬೇಡಿ. ಕಾರಣ ಡಾನ್ ಜಯರಾಜ್ ಅವತಾರದಲ್ಲಿ ತಾವೇ ಬಿಗ್ ಸ್ಕ್ರೀನ್​ಗೆ ಎಂಟ್ರಿ ಕೊಡಲಿದ್ದಾರೆ ಡಾಲಿ.

ನೈಜ ಘಟನೆಗಳನ್ನ ಆಧರಿಸಿ, ಅಗ್ನಿ ಶ್ರೀಧರ್ ಕಥೆ ಬರೆದು ಶೂನ್ಯ ಡೈರೆಕ್ಟ್ ಮಾಡಿರೋ ಹೆಡ್​ ಬುಷ್ ಸಿನಿಮಾ, ಬೆಂಗಳೂರಿನ ಮೊದಲ ಅಂಡರ್​​ವರ್ಲ್ಡ್​ ಡಾನ್ ಎಂ.ಪಿ. ಜಯರಾಜ್ ಕುರಿತ ಕಥಾನಕ ಹೊಂದಿದೆ. ಡಾನ್ ಪಾತ್ರದಲ್ಲಿ ಧನಂಜಯ ಮಿಂಚಲಿದ್ದು, ಈಗಾಗ್ಲೇ ರಿಲೀಸ್ ಆಗಿರೋ ಟೀಸರ್ ಹಾಗೂ ಪೋಸ್ಟರ್​ಗಳು ಸಂಚಲನ ಮೂಡಿಸಿವೆ. ಡಾಲಿ ಆ ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡಿದ್ದು, ಹೇರ್ ಸ್ಟೈಲ್ ಕೂಡ ಬದಲಾಯಿಸದೆ ಬೆಂಕಿ ಚೆಂಡಿನಂತೆ ಕಾಣಸಿಗಲಿದ್ದಾರೆ.

ಬಡವ ರಾಸ್ಕಲ್ ಬಳಿಕ ಡಾಲಿ ಸ್ವತಃ ತಾವೇ ಈ ಸಿನಿಮಾನ ನಿರ್ಮಾಣಕ್ಕೆ ಮುಂದಾಗಿದ್ದು, ತ್ರಿವಿಕ್ರಮ ಖ್ಯಾತಿಯ ನಿರ್ಮಾಪಕ ರಾಮ್ಕೋ ಸೋಮಣ್ಣ ಕೂಡ ಸಾಥ್ ನೀಡಿದ್ದಾರೆ. ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಪಾಯಲ್ ರಜಪೂತ್ ಸೇರಿದಂತೆ ದೊಡ್ಡ ತಾರಾಗಣವಿರೋ ಈ ಚಿತ್ರ ರಕ್ತಸಿಕ್ತ ಭಯಾನಕ ಕಥೆಯನ್ನ ಬಿಚ್ಚಿಡಲಿದೆ.

ಯೆಸ್.. ಹೆಡ್​ ಬುಷ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆಪ್ಪಳಿಸಲಿದ್ದು, ಸದ್ಯ ಮೊದಲ ಭಾಗ ಅಕ್ಟೋಬರ್ 21ಕ್ಕೆ ರಿಲೀಸ್ ಆಗಲಿದೆ. ಈ ಭಾಗದಲ್ಲಿ ಡಾನ್ ಎಂ.ಪಿ ಜಯರಾಜ್ ಬಾಲ್ಯ ಹಾಗೂ ಯೌವ್ವನದ ಜೀವನ ಇರಲಿದೆಯಂತೆ. ಅಲ್ಲದೆ, ಆತ ಯಾವ ಕಾರಣಕ್ಕಾಗಿ ಭೂಗತಲೋಕಕ್ಕೆ ಕಾಲಿಡ್ತಾರೆ ಅನ್ನೋದಕ್ಕೂ ಉತ್ತರ ಸಿಗಲಿದೆಯಂತೆ.

ಕೊತ್ವಾಲ್ ರಾಮಚಂದ್ರ ರೋಲ್​ನಲ್ಲಿ ವಸಿಷ್ಠ ಸಿಂಹ ಬಣ್ಣ ಹಚ್ಚಿದ್ದು, ಟಗರು ಚಿತ್ರದ ಡಾಲಿ- ಚಿಟ್ಟೆ ಕಾಂಬೋ ಇಲ್ಲಿಯೂ ಮುಂದುವರೆಯಲಿದೆ. ಇವರಿಬ್ಬರ ಜುಗಲ್ಬಂದಿ ಌಕ್ಷನ್ ಹಾಗೂ ಮಾಸ್ ಪ್ರಿಯರಿಗೆ ಮಸ್ತ್ ಮಜಾ ಕೊಡಲಿದೆ. ಒಟ್ಟಾರೆ ಡಾಲಿಯ ಮತ್ತೊಂದು ಡ್ರೀಮ್ ಪ್ರಾಜೆಕ್ಟ್ ಇದಾಗಿದ್ದು, ಈ ಬಾರಿಯ ದೀಪಾವಳಿಗೆ ಹೈ ಅಲರ್ಟ್​ ಘೋಷಿಸೋ ಮೂಲಕ ಡಾನ್ ಜಯರಾಜ್ ಅಪರಾವತಾರದಲ್ಲಿ ಬರ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES