Wednesday, January 22, 2025

ಮಾನವೀಯತೆ ಮೆರೆದ ಮಾಜಿ ಡಿಸಿಎಂ ಪರಮೇಶ್ವರ್

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಂದಿಹಳ್ಳಿ, ಕೋಡ್ಲಾಪುರ ಗ್ರಾಪಂ ವ್ಯಾಪಿಯಲ್ಲಿ ಕ್ಷೇತ್ರ ಪ್ರವಾಸ ಮುಗಿಸಿ ತುಮಕೂರಿಗೆ ತೆರಳುತಿದ್ದ ಶಾಸಕ, ಮಾಜಿ ಡಿಸಿಎಂ ಡಾ ಪರಮೇಶ್ವರ್ ಅಪಘಾತಗೊಂಡ ವ್ಯಕ್ತಿಯನ್ನ ಆಸ್ಪತ್ರಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಇನ್ನೂ ಮಧುಗಿರಿ- ಕೊರಟಗೆರೆ ಮಾರ್ಗದ ಕೆರೆಗಳ ಪಾಳ್ಯ ಸಮೀಪದ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಅಪಘಾತವಾಗಿದ್ದು ಅದೇ ಮಾರ್ಗದಲ್ಲಿ ಚಲಿಸುತಿದ್ದ ಡಾ ಜಿ ಪರಮೇಶ್ವರ್ ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳನ್ನು ತಮ್ಮ ಬೆಂಗಾವಲು ವಾಹನದಲ್ಲಿ ಮಧುಗಿರಿ ಸಾರ್ವಜಿಕ ಆಸ್ಪತ್ರೆಗೆ ರವಾನಿಸಿದ್ದಾರೆ, ಪ್ರಾಣ ಉಳಿಸಿ ಮಾನವೀಯತೆ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅಪಘಾತಗೊಂಡ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

RELATED ARTICLES

Related Articles

TRENDING ARTICLES