Tuesday, December 24, 2024

ಯೋಗಾ ಯೋಗ್ಯತೆ ಇದ್ದವರು ಏನ್ಬೇಕಾದ್ರೂ ಆಗ್ಬೋದು : ಬಿ ಸಿ ಪಾಟೀಲ್​​

ದಾವಣಗೆರೆ : ಹೋರಾಟ ಮಾಡಿ ಸಾರ್ವಜನಿಕರ ಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​​ ಹೇಳಿದರು.

ನೂಪುರ್ ಶರ್ಮ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಹೇಳಿಕೆ ಕೊಟ್ಟು 15 ದಿನಗಳ ನಂತರ ಪ್ಲಾನ್ ಮಾಡಿ ಸಂಚು ಮಾಡಿ ಹೋರಾಟಗಳನ್ನು ಮಾಡಿದ್ದಾರೆ. ಯಾರೇ ತಪ್ಪು ಮಾಡಿದರೂ ಅದರ ಬಗ್ಗೆ ವಿವರಣೆ ಕೇಳಬಹುದು. ಅದರಿಂದ ಹೋರಾಟ ಮಾಡಿ ಸಾರ್ವಜನಿಕರ ಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಇನ್ನು ವಿಜಯೇಂದ್ರ ಮುಖ್ಯ ಮಂತ್ರಿ ಆಗ್ತಾರೆ ಅನ್ನೋ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ ಹಣೆ ಬರಹದಲ್ಲಿ ಏನಿದಿಯೋ ಗೊತ್ತಿಲ್ಲ. ಯೋಗಾ ಯೋಗ್ಯತೆ ಇದ್ದವರು ಏನ್​ ಬೇಕಾದರೂ ಆಗಬಹುದು. ಅದೃಷ್ಟ ಇದ್ದವರು ಯಾರು ಬೇಕಾದ್ರೂ ಮುಖ್ಯಮಂತ್ರಿ ಆಗಬಹುದು. ನಾಳೆ ಶಾಸಕ ಎಸ್ ರವೀಂದ್ರನಾಥ್ ಅಣ್ಣ ಅವರು ಕೂಡ ಮುಖ್ಯಮಂತ್ರಿ ಆಗಬಹುದು ಎಂದು ಪಕ್ಕದಲ್ಲಿದ್ದ ಅವರ ಹೆಸರನ್ನು ಹೇಳಿದರು. ಜನಕಮಾಂಡ್, ಹೈಕಮಾಂಡ್ ಆಶೀರ್ವಾದ ಇದ್ರೆ ಸಿಎಂ ಆಗಬಹುದು ಎಂದು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES