Wednesday, January 22, 2025

ರಾಜ್ಯಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭ

ಬೆಂಗಳೂರು : ರಾಜ್ಯಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಲಿದ್ದು, ಬೆಳಗ್ಗೆ ೯ ರಿಂದ ಮತದಾನ ಆರಂಭಗೊಳ್ಳಲಿದೆ.

ನಗರದಲ್ಲಿಂದು ಬೆಳಗ್ಗೆ 09:00 ರಿಂದ ಮತದಾನ ಆರಂಭಗೊಳ್ಳಲಿದ್ದು, ಸಂಜೆ 04:00 ಕ್ಕೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಹಾಗೆನೇ ಸಂಜೆ 05:00 ರಿಂದ ಮತ ಎಣಿಕೆ ಶುರುವಾಗಲಿದ್ದು, ವಿಧಾನಸೌಧದ 106 ಕೊಠಡಿಯಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಲಾಗಿದ್ದು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ನೇತೃತ್ವದಲ್ಲಿ ಸಕಲ ಸಿದ್ದತೆಯನ್ನು ಮಾಡಲಾಗಿದೆ.

ಅದಲ್ಲದೇ, ರಾಜ್ಯಸಭೆ ಚುನಾವಣಾಧಿಕಾರಿಯಾಗಿರುವ ವಿಶಾಲಾಕ್ಷಿ. ವಿಧಾನಸಭೆಯ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು. ನಾಮಕರಣ ಸದಸ್ಯರಿಗೆ ಮತದಾನದ ಹಕ್ಕಿಲ್ಲ. ಪರಿಷತ್ ಸದಸ್ಯರಿಗೂ ಮತದಾನ ಪವರ್ ಇಲ್ಲ. ಮತದಾನದ ಕೊಠಡಿಯಲ್ಲಿ ಏಜೆಂಟರಿಗೆ ಅವಕಾಶ. ಮೂರು ಪಕ್ಷಗಳಿಂದ ಒಬ್ಬೊಬ್ಬರು ಏಜೆಂಟರಾಗಿರ್ತಾರೆ. ಮತಪತ್ರವನ್ನ ತೋರಿಸಿಯೇ ಮತದಾನ ಮಾಡಬೇಕು. ಮತ ಯಾರಿಗೆ ಹಾಕ್ತಿದ್ದೇವೆ ಅನ್ನೋದು ಗೊತ್ತಾಗಲಿದೆ. ಹೀಗಾಗಿ ಅಡ್ಡಮತದಾನ ಯಾರು ಮಾಡಿದ್ರು ತಿಳಿಯಲಿದೆ. ಅವರ ಪಕ್ಷ ಬಿಟ್ಟು ಬೇರೆಯವರಿಗೆ ಹಾಕಿದರೆ ತಿಳಿಯಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES