ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಲಾಗಿದೆ.
ಕೇರಳ ಹೈಕೋರ್ಟ್ P.S ಸರಿತ್ ಹಾಗೂ ಸ್ವಪ್ನ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಸಿಎಂ ಪಿಣರಾಯಿ ವಿಜಯನ್ ಅವರ ಈ ಪ್ರಕರಣದಲ್ಲಿ ತಮ್ಮ ಪಾಲುದಾರಿಕೆ ಬಗ್ಗೆ ಏಕೆ ಬಹಿರಂಗಪಡಿಸುತ್ತಿಲ್ಲ, ನಮ್ಮನ್ನು ಏಕೆ ಸಿಕ್ಕಿಸುತ್ತಿದ್ದಾರೆ ಎಂದು ಸ್ವಪ್ನ ಪ್ರಶ್ನಿಸಿದ್ದರು. ಈ ನಡುವೆ ಸ್ವಪ್ನ, ಸರಿತ್ ವಿರುದ್ಧ ಮಾಜಿ ಸಚಿವ ಕೆಟಿ ಜಲೀಲ್ ದೂರು ನೀಡಿದ್ದು, ಪ್ರಕರಣ ಮತ್ತೊಂದು ಮಗ್ಗಲಿಗೆ ತಿರುಗಿದೆ.
ಸಿಎಂ ವಿಜಯನ್ ಆಪ್ತ ಶಾಜಿ ಕಿರಣ್ ಎಂಬಾತ ನನ್ನ ಕಚೇರಿಗೆ ಬಂದು ಬೆದರಿಕೆ ಹಾಕಿದ್ದರಿಂದ ನಾನು ಹೇಳಿಕೆ ನೀಡಬೇಕಾಯಿತು. ನನ್ನ ಕುಟುಂಬದ ರಕ್ಷಣೆ ನನಗೆ ಮುಖ್ಯವಾಗಿತ್ತು ಎಂದು ಸ್ವಪ್ನ ಮಾಧ್ಯಮಗಳ ಮುಂದೆ ಹೇಳಿದ್ದರು.