Saturday, January 11, 2025

ಜೆಡಿಎಸ್ ಗೆ ಪಾಠ ಕಲಿಸಲು ಹೊರಟ ಸಿದ್ದರಾಮಯ್ಯ

ಬೆಂಗಳೂರು : ಜೆಡಿಎಸ್ ಪ್ರತಿ ಸಲವೂ ಯೂಸ್ ಎಂಡ್ ಥ್ರೋ ಮಾಡಿತ್ತಿದೆ ಎಂದು ಜೆಡಿಎಸ್​​ಗೆ ಪಾಠ ಕಲಿಸಲು ಸಿದ್ದರಾಮಯ್ಯ ಹೊರಟಿದ್ದಾರೆ.

ಜೆಡಿಎಸ್ ಪ್ರತಿ ಸಲವೂ ಯೂಸ್ ಎಂಡ್ ಥ್ರೋ ಮಾಡಿತ್ತಿದೆ. ಇದ್ದರಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಾಗ್ತಿಲ್ಲ. ಈ ಭಾರಿ ನಮ್ಮ ಒಗ್ಗಟ್ಟನ್ನು ತೋರಿಸೋಣ. ಕೋಮುವಾದಿ ಬಿಜೆಪಿ ಸಂಘಕ್ಕೆ ಸಿದ್ದವಾಗಿರೋ ಜೆಡಿಎಸ್​​ನ ದೂರ ಇಡೋಣ ಎಂದರು.

ಅದಲ್ಲದೇ, ಅವಕಾಶವಾದಿ ರಾಜಕಾರಣಕ್ಕೆ ಜೆಡಿಎಸ್ ಬ್ರೇಕ್ ಹಾಕಲಿ. ಈ ಭಾರಿ ತಮ್ಮ ಒಗ್ಗಟ್ಟು ತೋರಿಸಲು ಡಿ‌ ಕೆ ಶಿ, ಸಿದ್ದರಾಮಯ್ಯ ಕರೆ ನೀಡಿದ್ದು, ಉಳಿದ 24 ಮತವನ್ನು ಮನ್ಸೂರ್ ಅಲಿ ಖಾನ್ ಗೆ ಚಲಾಯಿಸಿ, 46 ಮತವನ್ನು ಜೈರಾಮ್ ರಮೇಶ್​​ಗೆ ಹಾಕಿದ ಮತಗಳ ಎರಡನೇ ಪ್ರಾಶಸ್ತ್ಯ ದ ಮತವನ್ನು ಖಾನ್ ಗೆ ಹಾಕಿ‌ ಎಂದು ಸಿದ್ದರಾಮಯ್ಯ ಸೂಚನೆಯನ್ನು ನೀಡಿದ್ದಾರೆ. ಉಳಿದ ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಗೆ ಕೊಡುವ ಬಗ್ಗೆ ಬೆಳಿಗ್ಗೆ ತಿಳಿಸ್ತಿವಿ ಅಂದಿರೋ ಕೈ ನಾಯಕರು. ಹೀಗಾಗಿ ಮೈತ್ರಿ ‌ಮಾತೇ ಇಲ್ಲ ಎಂದು ಜೆಡಿಎಸ್​​ಗೆ ಸಂದೇಶ ರವಾನಿಸಲಾಗಿದೆ.

RELATED ARTICLES

Related Articles

TRENDING ARTICLES