Sunday, December 22, 2024

ಜೆಡಿಎಸ್ ಗೆ ಮತ ಹಾಕಿದ್ದೇನೆ, ಮುಂದೇನಾಗುತ್ತೋ ನೋಡೋಣ: ಶಾಸಕ ಶಿವಲಿಂಗೇಗೌಡ

ಬೆಂಗಳೂರು: ಜೆಡಿಎಸ್ ನ ಬಂಡಾಯ ಶಾಸಕ ಎಂದು ಗುರುತಿಸಿಕೊಂಡಿರುವ ಅರಸೀಕೆರೆಯ ಶಾಸಕ ಕೆ ಎಲ್ ಶಿವಲಿಂಗೇಗೌಡ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ಪರವೇ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ.

ಇವತ್ತಿನ ಮಟ್ಟಿಗೆ ನಾನು ಜೆಡಿಎಸ್​​ನಲ್ಲಿದ್ದೇನೆ, ಜೆಡಿಎಸ್​​ಗೇ ವೋಟ್ ಹಾಕಿದ್ದೇನೆ. ಹಿಂದೇನಾಗಿತ್ತು.. ಮುಂದೇನಾಗುತ್ತೋ ಮುಂದೆ ನೋಡೋಣ, ಅರಸೀಕೆರೆ ಜನ ಹೇಳಿದಂತೆ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ.ಜೆಡಿಎಸ್ ವರಿಷ್ಠರ ಬಳಿ ಅಸಮಾಧಾನ ತೋಡಿಕೊಂಡಿದ್ದೇನೆ. ಪಕ್ಷದ ನಾಯಕರ ಜೊತೆ ಮತ್ತು ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಜೆಡಿಎಸ್ ನಿಂದ ಮೂರು ಬಾರಿ ಶಾಸಕನಾಗಿ ಅರಸೀಕೆರೆ ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಮುಂದೆ ಕ್ಷೇತ್ರದ ಜನತೆ ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇದು ಜೆಡಿಎಸ್ ಗೆ ಕೊನೆ ಮತವೇ ಎಂದು ಸುದ್ದಿಗಾರರು ಕೇಳಿದಾಗ, ಅದೇಕೆ ಹಾಗೆ ಕೇಳುತ್ತೀರಿ, ಇವತ್ತು ಜೆಡಿಎಸ್ ಗೆ ಮತ ಹಾಕಿದ್ದೇನೆ ಅಷ್ಟೇ, ಅಷ್ಟನ್ನೇ ಕೇಳಿ, ಮುಂದೆ ಏನಾಗುತ್ತೋ ನೋಡೋಣ ಎಂದರು.

RELATED ARTICLES

Related Articles

TRENDING ARTICLES