Saturday, November 23, 2024

ಕೈ-ದಳ‌ ಸಮರದಲ್ಲಿ ಬಿಜೆಪಿಗೆ ಭರ್ಜರಿ ಲಾಭ

ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೊನೆಯವರೆಗೂ ಪಟ್ಟು ಸಡಿಲಿಸಲೇ ಇಲ್ಲ. ಗೆಲ್ಲೋ ವಿಶ್ವಾಸದಲ್ಲಿದ್ದ ಜೆಡಿಎಸ್‌ಗೆ ಡಬಲ್ ಶಾಕ್ ಸಿಕ್ಕಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ದಕ್ಕಿದ್ದೇನು? ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದು ಏನನ್ನು.?

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೈರಾಮ್ ರಮೇಶ್ ಅವರನ್ನು ಗೆಲ್ಲಿಸಲು ಮಾತ್ರ ಸಾಧ್ಯವಾದ್ರೂ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳುತ್ತಿಲ್ಲ.ಯಾಕೆಂದರೆ ಕೈ ಪಡೆ ಗೆಲ್ಲಲು‌ ಹೊರಟಿರೋದು ಕೇವಲ ಒಂದು ರಾಜ್ಯಸಭೆ ಸ್ಥಾನವನ್ನಲ್ಲ. ಜನರ ಮನಸು ಗೆಲ್ಲಲು ಕಾಂಗ್ರೆಸ್ ಮುಂದಾಗಿತ್ತು.‌ ಅಲ್ಪಸಂಖ್ಯಾತರನ್ನು ಯೂಸ್ ಅಂಡ್‌ ಥ್ರೋ ಮಾಡುತ್ತಾ, ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿ ಸಂಘ ಮಾಡುತ್ತಾ ಅಧಿಕಾರ ಪಡೆಯುತ್ತಿರೋ ಜೆಡಿಎಸ್ ಬದ್ದತೆ ಪ್ರಶ್ನೆ ಮಾಡೋದು ಕಾಂಗ್ರೆಸ್‌ಗೆ ಬೇಕಿತ್ತು. ಹಾಗೇ ತಮ್ಮ ಶಾಸಕರ ಸಂಘಟಿತ ಬಲ ಮತ್ತು ಜೆಡಿಎಸ್ ಒಳಗಿನ ಒಡಕನ್ನು ಹೊರಗೆಳೆಯಲು ಕಾಂಗ್ರೆಸ್ ನಿರ್ಧರಿಸಿತ್ತು. ಹೀಗಾಗಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದು ಇನ್ನೊಂದು ಸ್ಥಾನ ಸೋತರೂ ತಲೆ‌ಕಡಿಸಿಕೊಂಡಿಲ್ಲ. ಹಾಗೇ ಕಾಂಗ್ರೆಸ್ ಟೆಕನ್ ಪಾರ್ ಗ್ರಾಂಟೆಡ್ ಅಲ್ಲ ಯಾಕೆಂದರೆ ಕುಮಾರಸ್ವಾಮಿ ಸಿಎಂ ಆಗುವಾಗ ಕಾಂಗ್ರೆಸ್ ಸಹಾಯ ಬೇಕಿತ್ತು. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗಲು ಕಾಂಗ್ರೆಸ್ ಸಹಾಯ ಮಾಡಿತ್ತು.ಕಷ್ಟಕಾಲಕ್ಕೆ ಆಗುತ್ತಿದ್ದ ಕಾಂಗ್ರೆಸ್ ಮೇಲೆ ಎಚ್ ಡಿ‌ಕೆ ತೀವ್ರವಾದ ವಾಗ್ದಾಳಿ ನಡೆಸುತ್ತಿದ್ರು.ಅದ್ರಲ್ಲೂ ಸಿದ್ದರಾಮಯ್ಯ ಮೇಲೆ ಮತ್ತಷ್ಟು ಕೋಪ ಹೊರಗೆ ಹಾಕ್ತಿದ್ರು. ಹೀಗಾಗಿ ಕಾಂಗ್ರೆಸ್ ಒಂದು ಸ್ಥಾನ ಸೋತರೂ ಜೆಡಿಎಸ್ ಗೆ ಉತ್ತಮ ಸಂದೇಶ ರವಾನಿಸಿದೆ.

ಜೆಡಿಎಸ್ ಗೆ ಕೃಪೆ ತೋರದ ಶ್ರೀನಿವಾಸ್ : 

ಕುದುರೇ ವ್ಯಾಪಾರದ ಭಯದಿಂದ ಜೆಡಿಎಸ್ ಶಾಸಕರನ್ನ ರೆಸಾರ್ಟ್ ನಲ್ಲಿ ಇಟ್ಟು ಕುಮಾರಸ್ವಾಮಿ ಪ್ರತಿತಂತ್ರ ಹಣೆದ್ರು. ಶತಾಯಗತಾಯ ಕುಪೇಂದ್ರ ರೆಡ್ಡಿ ಗೆಲ್ಲಲೇ ಬೇಕು ಅಂತ ದಳಪತಿಗಳು ಪಣತೊಟ್ಟಿದ್ರು. ಆದ್ರೆ ಇದ್ಯಾವುದು ವರ್ಕ್ ಔಟ್ ಆಗಿಲ್ಲ. ಅಡ್ಡಮತದಾನದ ಶಂಕೆ ಕುಮಾರಸ್ವಾಮಿ ಗೆ ಮೊದಲಿನಿಂದಲೂ ಇತ್ತೂ ಆದ್ರೆ ಎಷ್ಟು ಜನರು ಪಕ್ಷಕ್ಕೆ ದ್ರೋಹ ಬಗೆಯುತ್ತಾರೆ ಅನ್ನೋದು ಗೊತ್ತಿರಲಿಲ್ಲ. ಹೀಗಾಗಿ ರೆಸಾರ್ಟ್ ನಿಂದ ಮತದಾನಕ್ಕೆ ನೇರವಾಗಿ ಬಂದ್ರು. ಜೆಡಿಎಸ್ ಅಭ್ಯರ್ಥಿ ಪರ 30 ಜನ ಶಾಸಕರು ಮತದಾನ ಮಾಡಿದ್ರು.ಆದ್ರೆ ಕೋಲಾರದ ಶಾಸಕ ಶ್ರೀನಿವಾಸ್ ಗೌಡ ವಿಪ್ ಅನ್ನು ಉಲ್ಲಂಘಿಸಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ರು. ಮತದಾನದ ಬಳಿಕ ಸಿದ್ದರಾಮಯ್ಯ ಕಚೇರಿಗೆ ಹೋಗಿ ಮಾತುಕಥೆ ನಡೆಸಿ ದಳಪತಿಗೆ ಶಾಕ್ ನೀಡಿದ್ರು.ಹಾಗೇ ಐ ಲವ್ ಕಾಂಗ್ರೆಸ್ ಅನ್ನೊದ್ರ ಮೂಲಕ ಕುಮಾರಸ್ವಾಮಿ ಗೆ ಬಿಗ್ ಶಾಕ್ ನೀಡಿದ್ರು. ಹಾಗೇ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಕೂಡ ಯಾರಿಗೂ‌ ಮತ ಹಾಕದೇ ಖಾಲಿ ಪೇಪರ್ ಬಿಟ್ಟಿದ್ದಾರೆ ಅಂತ ಕುಮಾರಸ್ವಾಮಿ ಕಿಡಿಕಾರಿದ್ರು‌‌. ಹಾಗೇ ಪಕ್ಷಕ್ಕೆ ದ್ರೋಹ ಬಗೆದ ಶಾಸಕರ ವಿರುದ್ದ ಕಿಡಿ ಕಾರಿದ್ರು.

ಇತ್ತ ಸಿದ್ದರಾಮಯ್ಯ ಅವ್ರೆ ಮುಂದೆ ನಿಂತು ಬಿಜೆಪಿಯನ್ನು ಗೆಲ್ಲಿಸಿ ಕೊಟ್ರು ಅಂತ ಹಚ್ಡಿಕೆ ಕಿಡಿಕಾರಿದ್ದಾರೆ. ಅತ್ತ ವಿಪ್ ಉಲ್ಲಂಘಿಸಿದ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ದಳ ನಾಯಕರು ಮಾತುಕಥೆ ನಡೆಸುತ್ತಿದ್ದಾರೆ. ಒಂದು ಸ್ತಾನ ಗೆದ್ದು ಇನ್ನೋಂದು ಸ್ಥಾನ ಗೆದ್ರೂ ಕಾಂಗ್ರೆಸ್ ನಾಯಕರು ಜೆಡಿಎಸ್ ಗೆ ಪಾಠ ಕಲಿಸಿದ್ದೇವೆ ಮಂದಹಾಸ ತೋರಿದ್ದಾರೆ.

ಕ್ಯಾಮರಮ್ಯಾನ್ ಜಯರಾಮ್ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ

RELATED ARTICLES

Related Articles

TRENDING ARTICLES