Friday, November 22, 2024

PSI ಪರೀಕ್ಷಾ ಅಕ್ರಮ: ಬಂಧಿತರ ಸಂಖ್ಯೆ ಏರಿಕೆ

ಕಲಬುರಗಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ CID ಬಲೆಗೆ ದಿನಕ್ಕೊಂದು ತಿಮಿಂಗಿಲಗಳು ಬೀಳ್ತಿವೆ. ಅದ್ರಲ್ಲಿ ಕಲಬುರಗಿಯದ್ದೇ ಸಿಂಹ ಪಾಲು. ಇದೀಗ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಇಬ್ಬರು ಪರಮಾಪ್ತರನ್ನ ಸಿಐಡಿ ಟೀಮ್ ಖೆಡ್ಡಾಗೆ ಕೆಡವಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಇಡೀ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣ ದಿನೇ ದಿನೇ ಬಗೆದಷ್ಟು ಬಯಲಾಗ್ತಾನೆ ಇದೆ.. ಇಡೀ ಪ್ರಕರಣದ ಪ್ರಮುಖ ರೂವಾರಿ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಇಬ್ಬರು ಪರಮಾಪ್ತರಾದ ಕರಜಗಿ ಗ್ರಾಮದ ಮಹೇಧ್ ಹಿರೋಳ್ಳಿ ಮತ್ತು ಸೈಫನ್ ಜಮಾದರ್ ಎಂಬಾತರನ್ನ ಸಿಐಡಿ ಅಧಿಕಾರಿಗಳು ಬಂಧಿಸಿ ಸಿಐಡಿ ಕಚೇರಿಗೆ ಕರೆತಂದಿದ್ದಾರೆ. ಅಕ್ರಮವಾಗಿ ಪಿಎಸ್‌ಐ ಪರೀಕ್ಷೆ ಬರೆದು ಪಾಸಾಗಿದ್ದ ಇಸ್ಮಾಯಿಲ್ ಖಾದರ್ ಎಂಬಾತನಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳು ಮಹೇಶ್ ಹಿರೋಳ್ಳಿ ಮತ್ತು ಸೈಫನ್ ಜಮಾದರ್‌ನನ್ನ ಬಂಧಿಸಿದ್ದಾರೆ.

ಸದ್ಯ ಇಸ್ಮಾಯಿಲ್ ಖಾದರ್ ಸೇರಿದಂತೆ ಅಕ್ರಮದಲ್ಲಿ ಭಾಗಿಯಾದ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇದರ ಜೊತೆಗೆ ಐವರ ವಿರುದ್ಧ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಐವರ ಬಂಧನಕ್ಕೆ ಸಿಐಡಿ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ.

ಅದೆನೇ ಇರಲಿ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಬಂಧಿತರ ಸಂಖ್ಯೆ ಏರುತ್ತಲೆ ಇದ್ದು, ಪ್ರಕರಣದಲ್ಲಿ ಮತ್ತಷ್ಟು ದೊಡ್ಡ ದೊಡ್ಡ ಕುಳಗಳು ಸಿಐಡಿ ಲಾಕ್ ಆಗುವುದನ್ನ ತಳ್ಳಿ ಹಾಕುವಂತಿಲ್ಲ.

ಅನಿಲ್ ಸ್ವಾಮಿ, ಪವರ್ ಟಿವಿ, ಕಲ್ಬುರ್ಗಿ

RELATED ARTICLES

Related Articles

TRENDING ARTICLES