Saturday, May 18, 2024

ನೂಪುರ್‌ ಶರ್ಮಾ ವಿವಾದಾತ್ಮಕ ಹೇಳಿಕೆ: ದೆಹಲಿ ಸೇರಿ 5 ರಾಜ್ಯಗಳಲ್ಲಿ ಮುಸ್ಲಿಮರ ಪ್ರತಿಭಟನೆ

ದೆಹಲಿ : ನೂಪುರ್‌ ಶರ್ಮಾ ವಿವಾದಾತ್ಮಕ ಹೇಳಿಕೆ ಕಿಚ್ಚು ಉತ್ತರ ಭಾರತ ಧಗಧಗಿಸಿದೆ. ನೂಪುರ್‌ ಬಂಧನಕ್ಕೆ ಒತ್ತಾಯಿಸಿ
ದೆಹಲಿ, ಮುಂಬಯಿ, ತೆಲಂಗಾಣ, ಕಾಶ್ಮೀರ, ಪಶ್ಚಿಮ ಬಂಗಾಳ , ಉತ್ತರ ಪ್ರದೇಶ ದಲ್ಲಿ ಮುಸ್ಲಿಮರು ರಸ್ತೆಗಿಳಿದು ಅಲ್ಲೋಲ ಕಲ್ಲೋ ಎಬ್ಬಿಸಿದ್ರು. ಪ್ರತಿಭಟನೆ ಹೆಸ್ರೇಳಿಕೊಂಡು ಹಿಂಸಾಚಾರಕ್ಕೆ ಮುಂದಾದ್ರು..

ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಆಕ್ರೋಶಕ್ಕೆ ಕಾರಣವಾಗಿದ್ದ ಈ ವಿವಾದ ಈಗ ಬೃಹತ್ ಪ್ರತಿಭಟನೆಯ ರೂಪದಲ್ಲಿ ಭುಗಿಲೆದ್ದಿದೆ. ದೆಹಲಿಯಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಶುಕ್ರವಾರದ ಪ್ರಾರ್ಥನೆ ನಂತರ ದೆಹಲಿಯ ಜಾಮಾ ಮಸೀದಿ ಹೊರೆಗೆ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಅವರ ಪ್ರಚೋದಕ ಹೇಳಿಕೆಗಳ ವಿರುದ್ಧ ಪ್ರತಿಭಟಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.

ಕಾನ್ಪುರ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಉತ್ತರ ಪ್ರದೇಶದಾದ್ಯಂತ ಪೊಲೀಸರು ಮತ್ತು ಆಡಳಿತವು ಕಟ್ಟೆಚ್ಚರ ವಹಿಸಿದೆ. ಕಾನ್ಪುರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಪ್ರಯಾಗರಾಜ್ ಜಿಲ್ಲೆಯ ಅಟಾಲಾ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟದ ವಿಡಿಯೋಗಳು ವೈರಲ್‌ ಆಗ್ತಿವೆ.

ಉತ್ತರ ಪ್ರದೇಶದ ಸಹರಾನ್ಪುರ, ಮೊರಾದಾಬಾದ್ ಮತ್ತು ಪ್ರಯಾಗ್ರಾಜ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಜನರು ಜಮಾಯಿಸಿದರು ಮತ್ತು ಬಿಜೆಪಿಯಿಂದ ಅಮಾನತುಗೊಂಡ ಇಬ್ಬರು ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು.. ಪ್ರಯಾಗರಾಜ್‌ನಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಈ ಕಲ್ಲು ತೂರಾಟ ನಡೆಸಿದ್ದಾರೆ.

ಇತ್ತ, ಇಡೀ ದೇಶಾದ್ಯಂತ ಕಿಚ್ಚು ಹರಡುವ ಸಾಧ್ಯತೆ ದಟ್ಟವಾಗಿದ್ದು, ಎಲ್ಲಾ ರಾಜ್ಯಗಳಿಗೂ ಅಲರ್ಟ

ಇನ್ನೂ ಇಂದಿನ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಚರ್ಚೆಗಳು ಆರಂಭವಾಗಿದೆ. ಹಾಗಾಗಿ ಇಂದಿನ ಪ್ರತಿಭಟನೆಗೆ ಜಾಮೀಯ ಮಸೀದಿ ವತಿಯಿಂದ ಯಾವುದೇ ಕರೆ ಕೊಟ್ಟಿಲ್ಲ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್‌ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಮಧ್ಯೆ, ಇಡೀ ದೇಶಾದ್ಯಂತ ದ್ವೇಷ ಹರಡುವಿಕೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ವಿವಾದಿತ ಅರ್ಚಕ ಯತಿ ನರಸಿಂಗಾನಂದ್ ಸೇರಿ 25 ಜನರ ವಿರುದ್ಧ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ.

ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ

RELATED ARTICLES

Related Articles

TRENDING ARTICLES