Sunday, December 22, 2024

ನಗರಸಭೆ ನಿರ್ಲಕ್ಷ್ಯ : ಕಲುಷಿತ ನೀರಿಗೆ ಐದನೇ ಬಲಿ

ರಾಯಚೂರು : ನಗರಸಭೆಯ ನಿರ್ಲಕ್ಷ್ಯದಿಂದಾಗಿ ಪೂರೈಸಿದ ಕಲುಷಿತ ನೀರಿನ ಸೇವನೆಯಿಂದ ಕಲುಷಿತ ನೀರಿಗೆ ಐದನೇ ಬಲಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ವಾರ್ಡ್ ನಂಬರ್ 13 ರ ಯರಗೆರಾ ಕಾಲೋನಿ ನಿವಾಸಿ ಜನಕರಾಜ್ ( 48 ) ಮೃತ ದುರ್ದೈವಿಯಾಗಿದ್ದು, ವಾಂತಿ, ಭೇದಿಯಿಂದ ಬಳಲುತ್ತಿದ್ದ ಇವರನ್ನು ಒಂದು ವಾರದ ಹಿಂದೆ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

ಅದಲ್ಲದೇ, ಈಗಾಗಲೇ ನಗರದ ಮಲ್ಲಮ್ಮ ಮತ್ತು ಅಬ್ದುಲ್ ಗಫಾರ್​ ಸೇರಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ನೂರಾರು ಜನ ಹಾಗೂ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿನ ಸರಣಿ ಮುಂದುವರೆದಿದ್ದರೂ ಎಚ್ಚೆತ್ತುಕೊಳ್ಳದ ನಗರಸಭೆ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ. ಇದರಿಂದ ನಾಗರಿಕ ವೇದಿಕೆಯಿಂದ ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ.

RELATED ARTICLES

Related Articles

TRENDING ARTICLES