ಬೆಂಗಳೂರು: ನಾನು ಜೆಡಿಎಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಂಧಾನ ಸಭೆ ನಡೆದಿಲ್ಲ. ನಾನು ಯಾವತ್ತೂ ಕ್ರಾಸ್ ಮಾಡಿಲ್ಲ. ನಾಯಕರ ನಡುವೆ ಭಿನ್ನಾಬಿಪ್ರಾಯ ಇರಬಹುದು. ಆದರೆ, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾದವನು ನಾನು. ಆ ಪಕ್ಷಕ್ಕೆ ಮತ ಚಲಾಯಿಸುವುದು ನನ್ನ ಧರ್ಮ. ಅಲ್ಲದೇ ನಾನು ಜೆಡಿಎಸ್ ಗೆ ಮತಹಾಕದೆ ಹೋದರೆ ತಪ್ಪು ಹಾಗೂ ಮತದಾರರು ತಪ್ಪು ತಿಳಿದುಕೊಳ್ತಾರೆ. ಹಾಗಾಗಿ 1.25 ಲಕ್ಷ ಮತದಾರರ ಅಭಿಪ್ರಾಯವನ್ನು ಗೌರವಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದರು.
ಇನ್ನು ಇವತ್ತಿನ ರಾಜಕಾರಣ ನೋಡಿ ಬೇಸರವಾಗಿದೆ.ರಾಜ್ಯದ ಜನರು ಕೂಡ ಬೇಸತ್ತಿದ್ದಾರೆ. ಮುಂದೆ ನಿಲ್ಲಬೇಕಾ ಬೇಡ್ವಾ ಎಂಬ ಗೊಂದಲವಿದೆ.ಜನರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇನೆ. ನಾನು ಯಾವ ಪಕ್ಷಕ್ಕೂ ಭಾದ್ಯನಲ್ಲ ಎಂದು ಜೆಡಿಎಸ್ ಶಾಸಕ ಜಿಟಿಡಿ ಹೇಳಿದರು.