Wednesday, January 22, 2025

ಸಿಲಿಕಾನ್‌ ಸಿಟಿಯಲ್ಲಿ ಅಕ್ರಮ ಕಟ್ಟಡಗಳ ಕಾರುಬಾರು

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಅಕ್ರಮ ಕಟ್ಟಡಗಳ ಸರ್ವೆಯಲ್ಲಿ ಮಗ್ನರಾಗಿರುವ ಬಿಬಿಎಂಪಿ ನಗರ ಬೆಳೆಯುತ್ತಿದ್ದಂತೆ ಅಕ್ರಮ ಕಟ್ಟಡಗಳ ಸಂಖ್ಯೆಯೂ ಹೆಚ್ಚಾಗ್ತಿದೆ.

ನಗರದಲ್ಲಿ, ಕಳೆದೆಂಟು ವರುಷದಿಂದ ಸರ್ವೆಯಲ್ಲಿ ಕಾಲ‌ ಕಳೆಯುತ್ತಿರುವ ಪಾಲಿಕೆಯಲ್ಲಿ ನಗರ ಬೆಳೆಯುತ್ತಿದ್ದಂತೆ ಅಕ್ರಮ ಕಟ್ಟಡಗಳ ಸಂಖ್ಯೆಯೂ ಹೆಚ್ಚಾಗ್ತಿದೆ. ಕಳೆದ ನಾಲ್ಕು ವರುಷಗಳಿಂದ ಸರ್ವೆ ಮಾಡದೇ ಕಾಲಾಹರಣ ಮಾಡಿದ್ದು, ಕೊರೊನಾ ಹೆಸರೇಳಿ ಸರ್ವೆ ಮಾಡದೇ ರಾಜಕಾರಣಿಗಳು, ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಸುಮ್ಮನಿದ್ದ ಬಿಬಿಎಂಪಿಗೆ ಹೈಕೋರ್ಟ್​ ಶಾಕ್​ ನೀಡಿದೆ.

ಅದಲ್ಲದೇ, ಅಕ್ರಮ ಕಟ್ಟಡ ತೆರವುಗೊಳಿಸಲು ನೂರು ವರ್ಷ ಬೇಕೇ? ಹಾಗಾದ್ರೆ ಬೆಂಗಳೂರಿನಲ್ಲಿ ಎಷ್ಟು ಅಕ್ರಮ, ಅನಧಿಕೃತ ಕಟ್ಟಡಗಳಿವೆ? ಬಿಬಿಎಂಪಿ ಸರ್ವೆ ಎಲ್ಲಿಯವರೆಗೆ ಬಂತು? ನಗರದಲ್ಲಿ ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ಅಕ್ರಮ ಕಟ್ಟಡಗಳಿದ್ದು, ಅಕ್ರಮ ಕಟ್ಟಡಗಳನ್ನು ಎರಡು ರೀತಿ ಬಿಬಿಎಂಪಿ ವರ್ಗೀಕರಣ ಮಾಡಿದೆ.

ಇನ್ನು, 2016ರಿಂದ ಇಲ್ಲಿಯವರೆಗೂ ಬಿಬಿಎಂಪಿ ಸರ್ವೆ ಹೆಸರಿನಲ್ಲಿ ಕಾಲ‌ ಕಳೆಯುತ್ತಿದೆ. 1,81,236 ಅನಧಿಕೃತ ಕಟ್ಟಡ ಗುರುತಿಸಿರುವ ಬಿಬಿಎಂಪಿ 36,759 ಪ್ಲಾನ್ ಡೀವಿಯೇಶನ್ ಕಟ್ಟಡಗಳ ಗುರುತು, ಇವುಗಳ ಪೈಕಿ 16,086 ಬಿಬಿಎಂಪಿ ಸರ್ವೇ ಮಾಡಿದೆ. ಉಳಿದ 20,673 ಕಟ್ಟಡಗಳ‌ ಸರ್ವೇ ಇದುವರೆಗೂ ಮಾಡಿಲ್ಲ. ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ್ದೇವೆ. ಸರ್ವೆ ಕಾರ್ಯ ಇನ್ನೂ ಅರ್ಧದಷ್ಟು ಆಗಬೇಕಿದೆ. ಸರ್ವೆ ಕಾರ್ಯ ನಂತರ ಬಿಬಿಎಂಪಿ ಕ್ರಮಕೈಗೊಳ್ಳುತ್ತದೆ.

RELATED ARTICLES

Related Articles

TRENDING ARTICLES