Sunday, January 19, 2025

Exclusive News: ಪೃಥ್ವಿರಾಜ್ ಸುಕುಮಾರನ್​ನ ಕನ್ನಡಕ್ಕೆ ತಂದ ಹೊಂಬಾಳೆ

ಒಂದು ಬಿಗ್ ಸಕ್ಸಸ್ ಹತ್ತಾರು ಹೊಚ್ಚ ಹೊಸ ಹೆಜ್ಜೆಗಳಿಗೆ ಸಾಕ್ಷಿ ಆಗುತ್ತೆ. ಕೆಜಿಎಫ್-2 ಸೂಪರ್ ಹಿಟ್ ಆಗಿರೋದು ಹೊಂಬಾಳೆ ಫಿಲಂಸ್​ನ ಸಿನಿಮೋತ್ಸಾಹವನ್ನು ಹತ್ತು ಪಟ್ಟು ಹೆಚ್ಚಿಸಿದೆ. ಈಗಾಗಲೇ ಐದೈದು ನ್ಯೂ ಪ್ರಾಜೆಕ್ಟ್ಸ್ ಅವ್ರ ಕೈಯಲ್ಲಿದ್ರೂ, ಮತ್ತೊಂದು ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ವೆಂಚರ್​ಗೆ ನಾಂದಿ ಹಾಡಿದೆ ಹೊಂಬಾಳೆ.

ಹೈಲೆಟ್ಸ್​​​ ಪಾಯಿಂಟ್ಸ್​:​​

ಸ್ವ್ಯಾಗ್ ಸ್ವಿಂಗ್ ಎಂದ ಹೊಂಬಾಳೆ.. KGF-3 ಕಮಿಂಗ್..?
ಚಾಪ್ಟರ್-3ನಲ್ಲಿ ರಾಕಿಭಾಯ್ ಜೊತೆ ಡಾರ್ಲಿಂಗ್ ನಟನೆ..?
ಸಂಚಲನ ಮೂಡಿಸಿದ ರಮಿಕಾ ಸೇನ್- ರಾಕಿ ಪೋಸ್ಟರ್..!        

ಅಬ್ಬಬ್ಬಾ..! ಕನ್ನಡ ತೇರಿನ ವೈಭವ ಜೋರು ಅಂದ್ರೆ ಇದೇ ಅಲ್ಲವೇ..? ಇಡೀ ಭಾರತೀಯ ಚಿತ್ರರಂಗ ಸೌತ್ ದುನಿಯಾ, ಅದ್ರಲ್ಲೂ ಕನ್ನಡ ಫಿಲ್ಮ್ಸ್ ಬಗ್ಗೆ ಮಾತನಾಡೋ ಹಾಗಾಗಿದೆ. ಕಾರಣ ಹೊಂಬಾಳೆ ಫಿಲಂಸ್ ಅನ್ನೋ ಸ್ಯಾಂಡಲ್​ವುಡ್ ಕಳಸ. ಅದರ ಜೊತೆಗಿರೋ ಮಾಸ್ಟರ್​ಮೈಂಡ್ ಟೆಕ್ನಿಷಿಯನ್ಸ್ ಹಾಗೂ ಮಾನ್​ಸ್ಟರ್ ಌಕ್ಟರ್ಸ್​.

2014-15ರಲ್ಲಿ ಪ್ರೊಡಕ್ಷನ್ ಆರಂಭಿಸಿದ ಹೊಂಬಾಳೆ, ಆರಂಭದ ದಿನಗಳಲ್ಲಿ ಸೋಲಿನ ಕಹಿ ಅನುಭವಿಸಿತಾದ್ರೂ, ಕಳೆದೋದನ್ನ ಅಲ್ಲಿಯೇ ಹುಡುಕೋ ಪ್ರಯತ್ನ ಮಾಡಿ ಕೊನೆಗೂ ಗೆದ್ದು ಬೀಗಿತು. ಅದಕ್ಕೆ ಅವ್ರ ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್ ತುಂಬಾ ಇದೆ. ರಾಜಕುಮಾರ, ಕೆಜಿಎಫ್ ಸಿನಿಮಾಗಳಿಂದ ಟ್ರೆಂಡ್​ಗೆ ಬಂದ್ರು. ಸದ್ಯ ಬ್ರ್ಯಾಂಡ್ ಆಗಿ ಬ್ಯಾಂಡ್ ಬಜಾಯಿಸ್ತಿದ್ದಾರೆ ವಿಜಯ್ ಕಿರಗಂದೂರು.

ಕನ್ನಡ ಸಿನಿಮಾ ಕೂಡ ಯಾವ ಬಾಲಿವುಡ್, ಹಾಲಿವುಡ್ ಚಿತ್ರಕ್ಕೂ ಕಮ್ಮಿ ಇಲ್ಲ. 1500 ಕೋಟಿ ಬ್ಯುಸಿನೆಸ್ ಮಾಡುತ್ತೆ ಅನ್ನೋದನ್ನ ತೋರಿಸಿಕೊಟ್ರು. ಇಡೀ ಇಂಡಿಯಾ ಬಾಯ್ಮೇಲೆ ಬೆರಳಿಡುವಂತೆ ಮಾಡಿತು ಹೊಂಬಾಳೆ. ಪ್ರಶಾಂತ್ ನೀಲ್, ಯಶ್, ಪ್ರಭಾಸ್​ರಂತಹ ರಾಕೆಟ್ಸ್​​ನ ಇಟ್ಕೊಂಡು ನಿರೀಕ್ಷೆಗೂ ಮೀರಿದ ಸಕ್ಸಸ್​​ನ ಪಡೀತಿದೆ. ಚಾಪ್ಟರ್-2 ನಂತರ ಚಾಪ್ಟರ್ ಮೂರರದ್ದೇ ಟಾಕ್. ಸದ್ಯ ಸ್ವ್ಯಾಗ್ ಪಂಚ್ ಸ್ವಿಂಗ್ ಅನ್ನೋ ಪೋಸ್ಟರ್​ನಿಂದ ಕ್ಯೂರಿಯಾಸಿಟಿ ಮೂಡಿಸಿತ್ತು ಹೊಂಬಾಳೆ ಫಿಲಂಸ್.

ಇದನ್ನ ಕಂಡು ರಾಕಿಭಾಯ್ ಸ್ವ್ಯಾಗ್ ಮತ್ತೆ ಸ್ವಿಂಗ್ ಆಗಲಿದೆ ಅಂತ ಎಲ್ರೂ ಭಾವಿಸಿದ್ರು. ಅದಕ್ಕೆ ಪೂರಕವಾಗಿ ಪ್ರಧಾನಿ ರಮಿಕಾ ಸೇನ್ ರವೀನಾ ಟಂಡನ್​ನ ಹಗ್ಗದಿಂದ ಕಟ್ಟಿಹಾಕಿ, ಅವರ ತಲೆಗೆ ಗನ್ ತೋರಿಸ್ತಿರೋ ಯಶ್​ರ ಫೋಟೋ ಒಂದು ಸಖತ್ ವೈರಲ್ ಆಗ್ತಿದೆ. ಇದನ್ನೆಲ್ಲಾ ನೋಡಿದ್ರೆ ಕೆಜಿಎಫ್-3 ಅನೌನ್ಸ್ ಮಾಡೋದು ಪಕ್ಕಾ ಅಂದುಕೊಂಡಿದ್ರು. ಮತ್ತಷ್ಟು ಪುಷ್ಠಿ ನೀಡುವಂತೆ ಈ ಬಾರಿ ಕೆಜಿಎಫ್ ಫ್ರಾಂಚೈಸ್​​ನಲ್ಲಿ ರಾಕಿಭಾಯ್ ಯಶ್ ಜೊತೆ ಡಾರ್ಲಿಂಗ್ ಪ್ರಭಾಸ್ ಕೂಡ ಇರಲಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗೆ ಇವ್ರೆಲ್ಲಾ ಕೆಜಿಎಫ್-2ನ ಫಿಫ್ಟಿ ಡೇಸ್ ಫಂಕ್ಷನ್​ನಲ್ಲಿ ಒಟ್ಟಿಗೆ ಸೇರಿದ್ರು. ಆದ್ರೆ ಮ್ಯಾಟರ್ ಇದಲ್ಲ. ಬೇರೇನೇ ಇದೆ. ಮಲಯಾಳಂನ ಸೂಪರ್ ಸ್ಟಾರ್ ಒಬ್ರು ಈ ಚಿತ್ರದ ಮೂಲಕ ಕನ್ನಡಕ್ಕೆ ಬರ್ತಿದ್ದಾರೆ.

ಪೃಥ್ವಿರಾಜ್ ಸುಕುಮಾರನ್​ನ ಕನ್ನಡಕ್ಕೆ ತಂದ ಹೊಂಬಾಳೆ
ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ನಿರ್ದೇಶನ & ಅಭಿನಯ

ಕೆಜಿಎಫ್ 2 ಟ್ರೈಲರ್ ಲಾಂಚ್​ಗೆ ಬಂದಿದ್ದ ಈ ಹ್ಯಾಂಡ್ಸಮ್ ಹೀರೋ ಬೇರಾರೂ ಅಲ್ಲ, ಪಕ್ಕದ ಮಲಯಾಳಂನ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್. ನಟನೆ ಜೊತೆ, ನಿರ್ದೇಶನ, ನಿರ್ಮಾಣ ಹಾಗೂ ಗಾಯನ ಹೀಗೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ಗುರ್ತಿಸಿಕೊಂಡಿರೋ ಪೃಥ್ವಿರಾಜ್, ಸದ್ಯ ಜನ ಗಣ ಮನ ಚಿತ್ರದಿಂದ ಸಂಚಲನ ಮೂಡಿಸಿದ್ದಾರೆ.

ಅಂದು ಕೆಜಿಎಫ್ ಸಿನಿಮಾನ ಕೇರಳಾ ರಾಜ್ಯಕ್ಕೆ ಪ್ರೆಸೆಂಟ್ ಮಾಡಿ, ಡಿಸ್ಟ್ರಿಬ್ಯೂಟ್ ಮಾಡಿದ್ದ ಇದೇ ಪೃಥ್ವಿರಾಜ್ ಇದೀಗ ಹೊಂಬಾಳೆ ಫಿಲಂಸ್​ನಡಿ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಲಿದ್ದು, ಇಲ್ಲಿ ಅವ್ರು ನಟಿಸೋದ್ರ ಜೊತೆ ಅದಕ್ಕೆ ಌಕ್ಷನ್ ಕಟ್ ಕೂಡ ಹೇಳ್ತಿರೋದು ಇಂಟರೆಸ್ಟಿಂಗ್.

ಸದಾ ಟ್ಯಾಲೆಂಟ್ ಹಂಟ್​​ನಲ್ಲಿರೋ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು, ಈ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಕಲ್ಪಿಸಿದ್ದ ಇವ್ರು, ಇದೀಗ ಪರಭಾಷಾ ಸ್ಟಾರ್ಸ್​ನ ಕನ್ನಡ ಬ್ಯಾನರ್​ನತ್ತ ಕರೆದು ತರ್ತಿದ್ದಾರೆ. ಇದು ನಿಜಕ್ಕೂ ಅದ್ಭುತ ಬೆಳವಣಿಗೆ. ಅವರ ಎಲ್ಲಾ ಕನಸುಗಳು ನನಸಾಗಲಿ, ಮತ್ತಷ್ಟು ಜೋರಾಗಿ ನಮ್ಮ ಕನ್ನಡದ ಕಂಪು ವಿಶ್ವಕ್ಕೆ ಹರಡಲಿ ಅನ್ನೋದೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES