Sunday, December 22, 2024

ಇನ್ನಷ್ಟು ಹೈಟೆಕ್‌ ಆಯ್ತು ಕೆಂಪೇಗೌಡ ಏರ್‌ಪೋರ್ಟ್‌

ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯ ವಿನೂತನ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ದೃಷ್ಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ ಲಾಂಝ್​​ನ್ನು ನಿರ್ಮಿಸಿದೆ. ಇದರಿಂದ ದೇಶಿಯ & ವಿದೇಶಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಸಿಗಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿ 14ವರ್ಷ ಕಳೆದಿವೆ. ಹಲವು ದಾಖಲೆಗಳೊಂದಿಗೆ ವಿಶ್ವದಲ್ಲೇ ಪ್ರಯಾಣಿಕ ಸ್ನೇಹಿ ಎಂಬ ಹೆಗ್ಗಳಿಕೆಯನ್ನ ಪಡೆದಿದೆ. ಇದರ ನಡುವೆ ಇದೀಗ ವಿಶ್ವದಲ್ಲೆ ಹೊಸ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ ಮಾಡುವ ಮೂಲಕ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಲಿದೆ. ದೇಶಿ ಮತ್ತು ವಿದೇಶಿ ಪ್ರಯಾಣಿಕರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಹೊಸ ಹೊಸ ಪ್ರಯೋಗಗಳನ್ನು ಪ್ರಾರಂಭ ಮಾಡ್ತಾ ಇದೆ. ಇದೀಗ ಪ್ರಯಾಣಿಕರಿಗೆ ಹೊಸ ರೀತಿಯ ಅತ್ಯಧುನಿಕ ಲಾಂಝ್​ಗಳನ್ನು ಆರಂಭ ಮಾಡಿದೆ.

ಹೌದು ‘ನಮ್ಮ ರಾಜ್ಯ ನಮ್ಮ ಹೆಮ್ಮ’ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದೀಗ ಕೆಐಎನಲ್ಲಿ ದೇಶಿಯ & ವಿದೇಶಿ ಪ್ರಯಾಣಿಕರಿಗಾಗಿ ಎರಡು ಭಿನ್ನ-ವಿಭಿನ್ನ ಐಶಾರಾಮಿಯ ಎರಡು ಹೊಸ ಲಾಂಝ್ ಗಳನ್ನ ಅನಾವರಣ‌ ಮಾಡಿದೆ.‌ ವಿಶ್ವದಲ್ಲೇ ಅತ್ಯುತ್ತಮ ಲಾಂಝ್ ಇದಾಗಿದ್ದು ಐಷಾರಾಮಿ ಸೌಲಭ್ಯ ಈ ಲಾಂಝ್ ಗಳಲ್ಲಿವೆ‌. ಬೆಂಗಳೂರಿನ ಟ್ರಂಕ್ ಡಯಲ್ ನಂಬರ್ 080 ಹೆಸರನ್ನೇ ಈ ಲಾಂಝ್ ಗೆ ಇಡಲಾಗಿದ್ದು. ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಎರಡು ಹೊಚ್ಚ ಹೊಸ ಲಾಂಝ್ ಗಳಲ್ಲಿ ಅತ್ಯಾಕರ್ಷಕ ವಿಶ್ರಾಂತಿ ಧಾಮಗಳು, ಸೆಲಬ್ರೆಟಿ ಷೆಫ್ ಅಭಿಜಿತ್ ಸಹಾ ನೇತೃತ್ವದಲ್ಲಿ ತಯಾರಾಗೋ ತರಹೇವಾರಿ ರಾಸಾಯನಿಕ ಮುಕ್ತ ಊಟ. ತಿಂಡಿ ತಿನಿಸಿಗಳ ಜೊತೆಗೆ ಗ್ರಂಥಾಲಯವಿದೆ.

ಒಟ್ಟಾರೆ ಹೀಗೆ ಹತ್ತು ಹಲವು ಸೌಲಭ್ಯ ನೀಡುವ ಮೂಲಕ ವಿಶ್ವದಲ್ಲೇ ಯಾವುದೇ ವಿಮಾನ ನಿಲ್ದಾಣದಲ್ಲೂ ಇರದಂತಹ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲಾ ಕಡೆ ಹಸಿರುಮಯ ಮಾಡುವ ಮೂಲಕ ಉದ್ಯಾನಗರಿ ಬೆಂಗಳೂರಿನ ಕೀರ್ತಿ ಪತಾಕೆ ಹೆಚ್ಚಾಗಲಿದೆ.

ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ

RELATED ARTICLES

Related Articles

TRENDING ARTICLES