Thursday, January 23, 2025

ಡಾಲಿ ಪೋರಿಯ ಟ್ರೈಲರ್ ಝಲಕ್​ಗೆ ಕಿಚ್ಚ ಅಂದ್ರು ಅಬ್ಬಬ್ಬ

ಡಾಲಿ ಪೋರಿ ಅಮೃತಾ ಅಯ್ಯಂಗಾರ್​ಗೆ ಎಲ್ಲಿಲ್ಲದ ಡಿಮ್ಯಾಂಡ್. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಈಕೆಯ ಹೊಸ ಚಿತ್ರದ ಟ್ರೈಲರ್ ಟಾಕ್ ಆಫ್ ದಿ ಟೌನ್ ಆಗಿದೆ. ಟ್ರೈಲರ್ ನೋಡಿ ಫಿದಾ ಆಗಿರೋ ಕಿಚ್ಚ ಸುದೀಪ್, ಅಬ್ಬಬ್ಬ..! ಅಂತ ಬಾಯ್ಮೇಲೆ ಬೆರಳಿಟ್ಟಿದ್ದಾರೆ. ಇಷ್ಟಕ್ಕೂ ಏನದ್ರ ಇನ್​ಸೈಡ್ ಸ್ಟೋರಿ ಅಂತೀರಾ..?

ಡಾಲಿ ಪೋರಿಯ ಟ್ರೈಲರ್ ಝಲಕ್​ಗೆ ಕಿಚ್ಚ ಅಂದ್ರು ಅಬ್ಬಬ್ಬ

ಇದು ಅಮೃತಾ ಅಯ್ಯಂಗಾರ್​ ನಟನೆಯ ನಯಾ ಪ್ರಾಜೆಕ್ಟ್

ಇದು ರೀಸೆಂಟ್ ಆಗಿ ರಿಲೀಸ್ ಆಗಿರೋ ಕನ್ನಡ ಚಿತ್ರದ ಟ್ರೈಲರ್ ಝಲಕ್. ಇದನ್ನ ನೋಡಿದ್ರೆ ನೀವು ಮಿಸ್ ಇಲ್ಲದೆ ಅಬ್ಬಬ್ಬ ಅಂತೀರಾ. ಯಾಕಂದ್ರೆ ಚಿತ್ರದ ಟೈಟಲ್​ನೇ ಅಬ್ಬಬ್ಬ ಅಂತ ಇಟ್ಟಿದ್ದಾರೆ ನಿರ್ದೇಶಕ ಕೆಎಂ ಚೈತನ್ಯ. ಹೌದು.. ಪಕ್ಕಾ ಕಾಮಿಡಿ ಎಂಟರ್​ಟೈನರ್ ಜಾನರ್​ನ ಈ ಸಿನಿಮಾ ಸಣ್ಣದೊಂದು ಟ್ರೈಲರ್​ನಿಂದಲೇ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ. ಸಿನಿಮಾ ನೋಡೋ ಕಾತುರ ಹೆಚ್ಚಿಸಿದೆ.

ಲಿಖಿತ್ ಶೆಟ್ಟಿ ಹಾಗೂ ಡಾಲಿ ಹುಡ್ಗಿ ಅಮೃತಾ ಅಯ್ಯಂಗಾರ್ ಜೋಡಿಯ ಈ ಸಿನಿಮಾ ಪಕ್ಕಾ ಯೂತ್​ಫುಲ್ ಕಾಮಿಡಿ ಸಿನಿಮಾ. ಕಾಲೇಜು ಡೇಸ್, ಹಾಸ್ಟೆಲ್ ಹುಡ್ಗರು ಹೀಗೆ ಹೆಂಗೆಳೆಯರಿಗೆ ಕನೆಕ್ಟ್ ಆಗೋ ಸ್ಟೋರಿಲೈನ್ ಇರೋ ಚಿತ್ರವಿದು. ಹಾಸ್ಟೆಲ್ ವಾರ್ಡನ್ ಆಗಿ ಶರತ್ ಲೋಹಿತಾಶ್ವ ಗಮನ ಸೆಳೆಯುತ್ತಾರೆ.

ಹ್ಯಾಪಿಡೇಸ್, ಜಾಲಿಡೇಸ್, ಜೋಶ್ ಸಿನಿಮಾಗಳನ್ನ ನೆನಪಿಸೋ ಈ ಚಿತ್ರದಲ್ಲಿ ವಿಜಯ್ ಚೆಂಡೂರು ಅವ್ರ ಹಾಸ್ಯದ ರಸದೌತಣವಿದೆ. ರೌಡಿ ಗೋಪಾಲ್ ರೆಡ್ಡಿಯಾಗಿ ಅವಿನಾಶ್ ಕಮಾಲ್ ಮಾಡಿದ್ದು, ಅವ್ರ ಮಗಳ ರೋಲ್​ನಲ್ಲಿ ಅಮೃತಾ ಅಯ್ಯಂಗಾರ್ ಕಾಣಸಿಗಲಿದ್ದಾರೆ.

ಮಿರಾಮರ್ ಫಿಲಂಸ್ ಬ್ಯಾನರ್​ನಡಿ ಆನ್ ಅಗಸ್ಟೈನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿರೋ ಈ ಸಿನಿಮಾಗೆ ಆದಿನಗಳು, ಆಟಗಾರ, ಅಮ್ಮ ಐ ಲವ್ ಯೂ ಖ್ಯಾತಿಯ ಕೆಎಂ ಚೈತನ್ಯ ಅವ್ರು ಌಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇದು ಚೈತನ್ಯ ಅವ್ರ 9ನೇ ಕಾಣಿಕೆ. ಸದಾ ಹೊಸ ಹೊಸ ಜಾನರ್​ಗಳನ್ನ ಟ್ರೈ ಮಾಡೋ ಡೈರೆಕ್ಟರ್, ಈ ಬಾರಿ ಕಾಮಿಡಿ ಜಾನರ್​ಗೆ ಕೈ ಹಾಕಿ ಸೈ ಅನಿಸಿಕೊಂಡಿದ್ದಾರೆ. ಅದೂ ಕಿಚ್ಚನಂತಹ ಅಭಿನಯ ಚಕ್ರವರ್ತಿಯಿಂದ ಶಹಬ್ಬಾಶ್ ಅನಿಸಿಕೊಳ್ಳೋದು ತಮಾಷೆಯ ಮಾತಲ್ಲ.

ಯೆಸ್.. ಆಲ್ ಇಂಡಿಯಾ ಕಟೌಟ್, ಬಾದ್​ಷಾ ಕಿಚ್ಚ ಸುದೀಪ್, ಅಬ್ಬಬ್ಬ ಟ್ರೈಲರ್​ನ ಲಾಂಚ್ ಮಾಡೋ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಸೇರಿದಂತೆ ಚಿತ್ರದಲ್ಲಿರೋ ಎಲ್ಲಾ ಕಲಾವಿದರ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ. ಕಿಚ್ಚನ ಮೆಚ್ಚುಗೆಗೆ ದಿಲ್​ಖುಷ್ ಆಗಿರೋ ಟೀಂ, ಅಬ್ಬಬ್ಬ ಇದಕ್ಕಿಂತ ಬಿಗ್ ಕಾಂಪ್ಲಿಮೆಂಟ್ ಮತ್ತೇನು ಬೇಕು ಅಂತಿದೆ.

ದೀಪಕ್ ಅಲೆಕ್ಸಾಂಡರ್ ಸಂಗೀತ, ಕೆಜಿಎಫ್ ಚಿತ್ರಕ್ಕೆ ಕೆಲಸ ಮಾಡಿದ್ದ ಪಿ ಹರಿದಾಸ್ ಸಂಕಲನ, ಮನೋಹರ್ ಜೋಶಿ ಸಿನಿಮಾಟೋಗ್ರಫಿ ಈ ಅಬ್ಬಬ್ಬ ಚಿತ್ರಕ್ಕಿದೆ. ಒಟ್ಟಾರೆ ಕಾಮಿಡಿ ಜಾನರ್ ಸಿನಿಮಾಗಳು ಬಂದು ಬಹಳ ದಿನಗಳೇ ಆಗಿತ್ತು. ಬಹುಶಃ ಈ ಸಿನಿಮಾದಿಂದ ಪ್ರೇಕ್ಷಕಪ್ರಭು ಮನಸಾರೆ ನಗಲಿದ್ದಾನೆ. ಜುಲೈ 1ಕ್ಕೆ ಆ ನಗುವಿನ ಭಾಗ್ಯವನ್ನು ರಾಜ್ಯದ ಎಲ್ಲಾ ಥಿಯೇಟರ್​ಗಳಲ್ಲಿ ಕಲ್ಪಿಸಿಕೊಡ್ತಿರೋದು ಮಾತ್ರ ಕೆಆರ್​ಜಿ ಸಂಸ್ಥೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES