ತಂತ್ರಜ್ಞಾನ ಬೆಳೆದಂತೆ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ ಹಾವಳಿ ಜೋರಾಗಿ, ಇಂದಿನ ಜನರೇಷನ್ ಮಕ್ಕಳು ಪುಸ್ತಕ, ಸಾಹಿತ್ಯದ ಮಜಲುಗಳನ್ನ ಸವಿಯೋದ್ರಿಂದ ವಂಚಿತರಾಗ್ತಿದ್ದಾರೆ. ಯೆಸ್.. ಹಾದಿ ತಪ್ತಿರೋ ಯಂಗ್ ಜನರೇಷನ್ನ ಸರಿದಾರಿಗೆ ತರೋಕೆ ವೀರಲೋಕ ಬುಕ್ಸ್ ಪುಸ್ತಕೋದ್ಯಮ ಶುರುವಿಟ್ಟಿದೆ. ಆ ಕನಸಿಗೆ ಕಿಚ್ಚ ಸುದೀಪ್, ರಮೇಶ್ ಅರವಿಂದ್ ರೆಕ್ಕೆ ಕಟ್ಟಿದ್ದಾರೆ.
ಪುಸ್ತಕೋದ್ಯಮಕ್ಕೆ ಸುದೀಪ್, ರಮೇಶ್ ಕಟ್ಟೇಬಿಟ್ರು ರೆಕ್ಕೆ
ಸ್ವಿಗ್ಗಿ, ಝೊಮ್ಯಾಟೋ ರೀತಿ ಇದ್ದಲ್ಲಿಗೆ ಬರಲಿವೆ ಬುಕ್ಸ್..!
ಓದುಗ ಲೋಕದಲ್ಲಿ ವೀರಲೋಕ ಬುಕ್ಸ್ ಹೊಸ ಕ್ರಾಂತಿ
ಹೋಟೆಲ್, ಮಾಲ್ ಸೇರಿದಂತೆ ಸಾವಿರ ಕಡೆ ಬುಕ್ಸ್..!
ದೇಶ ಸುತ್ತಬೇಕು, ಕೋಶ ಓದಬೇಕು ಅನ್ನೋ ಮಾತಿದೆ. ಅಮ್ಮನ ಹೊಟ್ಟೆಯಲ್ಲಿದ್ದಾಗಲಿಂದ ಸಾಯೋವರೆಗೂ ಕಲಿತರೂ ಕಲಿಯೋದು ಸಾಕಷ್ಟಿರಲಿದೆ. ಯಾರೂ ಸರ್ವಜ್ಞರಾಗಲು ಸಾಧ್ಯವಿಲ್ಲ. ಆದ್ರೆ ಇಂದಿನ ಜನರೇಷನ್ ಈ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ನ ಜೀವನದ ಅವಿಭಾಜ್ಯ ಅಂಗಗಳಾಗಿ ಮಾಡಿಕೊಂಡುಬಿಟ್ಟಿದೆ. ಮೊಬೈಲ್, ಟಿವಿ, ಲ್ಯಾಪ್ಟಾಪ್ ಇಷ್ಟಿದ್ರೆ ಊಟ, ತಿಂಡಿ, ಕಾಫಿ ಏನೂ ಬೇಡ ಅನ್ನುವಂತಾಗಿದೆ.
ಕಥೆ, ಕವನ, ಕಾದಂಬರಿ, ಇತಿಹಾಸ ಹೀಗೆ ಸಾಕಷ್ಟು ವಿಚಾರಗಳನ್ನ ಪುಸ್ತಕಗಳನ್ನ ಓದೋ ಮೂಲಕ ಅರಿಯೋದು ಸಾಕಷ್ಟಿರಲಿದೆ. ಪ್ರತೀ ದಿನ ಒಂದಷ್ಟು ಓದಿದಾಗ ಮಾತ್ರ ಅದು ಸಾಧ್ಯವಾಗಲಿದೆ. ಆ ಓದುವ ಹವ್ಯಾಸ ಎಲ್ಲರಲ್ಲೂ ಮೂಡಬೇಕು. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು ಅನ್ನೋ ಉದ್ದೇಶದಿಂದ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ರ ಅಭಿಮಾನಿ, ಅನುಯಾಯಿ ಆಗಿರೋ ವೀರಕಪುತ್ರ ಶ್ರೀನಿವಾಸ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದೇ ವೀರಲೋಕ ಬುಕ್ಸ್.
ವೀರಲೋಕ ಬುಕ್ಸ್ ಪುಸ್ತಕೋದ್ಯಮದಲ್ಲಿ ಹೊಸ ಕ್ರಾಂತಿ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ. ರಮೇಶ್ ಅರವಿಂದ್ರಂತಹ ಸ್ಫೂರ್ತಿಯ ಚಿಲುಮೆ ಹಾಗೂ ಕಿಚ್ಚ ಸುದೀಪ್ರಂತಹ ಸೂಪರ್ ಸ್ಟಾರ್ಗಳ ವರ್ಚಸ್ಸು ಇದಕ್ಕಾಗಿ ಬಳಸಿಕೊಂಡಿದ್ದಾರೆ ಶ್ರೀನಿವಾಸ್. ಹೋಟೆಲ್, ಮಾಲ್, ಕಾಫಿ ಶಾಪ್ ಸೇರಿದಂತೆ ಸುಮಾರು ಸಾವಿರಕ್ಕೂ ಅಧಿಕ ಕಡೆ ಪುಸ್ತಕಗಳು ಲಭ್ಯವಾಗೋ ರೀತಿ ವೀರಲೋಕ ಬುಕ್ಸ್ನ ಲಾಂಚ್ ಮಾಡಿದ್ದಾರೆ. ರಮೇಶ್ ಅರವಿಂದ್ ಅವ್ರು ಇದ್ರ ರಾಯಭಾರಿ ಆದ್ರೆ, ಕಿಚ್ಚ ಸುದೀಪ್ ಆಪ್ತ ಗೆಳೆಯರೂ, ಸಮಾಜಮುಖಿ ಕಾರ್ಯಗಳನ್ನ ಮಾಡೋ ಜನಪರ ಸ್ನೇಹಿಯೂ ಆದ ವೀರಕಪುತ್ರ ಶ್ರೀನಿವಾಸ್ಗೆ ಹತ್ತು ಪುಸ್ತಕಗಳನ್ನ ಲಾಂಚ್ ಮಾಡಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಇನ್ನು ಇವ್ರ ಕಾರ್ಯವನ್ನು ಶ್ಲಾಘಿಸಿರೋ ಖ್ಯಾತ ಸಿನಿಮಾ ಪತ್ರಕರ್ತ ಕಮ್ ಬರಹಗಾರ ಜೋಗಿ, ಗಣೇಶ್ ಕಾಸರಗೋಡು, ಸಾಹಿತಿ ಕುಂ ವೀರಭದ್ರಪ್ಪ ಇಂತಹ ಅದ್ಭುತ ಕಾರ್ಯಕ್ಕೆ ತಮ್ಮ ಬೆಂಬಲ ಸದಾ ಇರಲಿದೆ ಎಂದಿದ್ದಾರೆ. ಅಲ್ಲದೆ, ಕಾಲ್ ಸೆಂಟರ್ ರೀತಿಯೂ ಈ ವೀರಲೋಕ ಬುಕ್ಸ್ ಕಾರ್ಯ ನಿರ್ವಹಿಸಲಿದೆ. ಕರೆ ಮಾಡಿದವ್ರಿಗೆ ಅವಶ್ಯಕತೆಗೆ ತಕ್ಕಷ್ಟು ಪುಸ್ತಕಗಳನ್ನ ಮನೆಗೆ ಡೆಲಿವರಿ ನೀಡಲಿದೆ. ಅದು ರೆಂಟ್ ಬೇಸ್ ಅಥ್ವಾ ಖರೀದಿ ಎರಡಕ್ಕೂ ಸೇವೆ ಸಲ್ಲಿಸಲಿದೆ. ಆನ್ಲೈನ್ ಮೂಲಕವೂ ಓದುಗರಿಗೆ ಈ ಅವಕಾಶ ಕಲ್ಪಿಸ್ತಿರೋದು ನಿಜಕ್ಕೂ ಅರ್ಥಪೂರ್ಣ ಹಾಗೂ ಅಭೂತಪೂರ್ವ ಹೆಜ್ಜೆಯೇ ಸರಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ