Friday, November 22, 2024

ಕಡಲತೀರಕ್ಕೆ ಮೀನುಗಾರರಿಂದ ವಿಶೇಷ ಪೂಜೆ

ಕಾರವಾರ : ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಕಡಲತೀರದಲ್ಲಿ ಸಾಗರ ದಿನಾಚರಣೆಯ ಅಂಗವಾಗಿ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿ ಹಾಲನ್ನು ಸಮುದ್ರಕ್ಕೆ ಅರ್ಪಣೆ ಮಾಡುವ ಮೂಲಕ ನಮಿಸಿದರು.

ಸಾಗರಗಳ ಪಾತ್ರವನ್ನು ತಿಳಿಸಲು ವಿಶ್ವಸಂಸ್ಥೆ ವಿಶ್ವ ಸಾಗರ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಕಳೆದ ಹಲವು ವರ್ಷಗಳಿಂದ ತಮ್ಮ ಬದುಕಿಗೆ ಆಸರೆಯಾದ ಕಡಲಿಗೆ ಮೀನುಗಾರರು ಗೌರವ ನೀಡುತ್ತಿದ್ದು, 2 ವರ್ಷದಿಂದ ಸಮುದ್ರ ದಿನಾಚರಣೆಯ ದಿನ ಮೀನುಗಾರರು ಸಮುದ್ರ ತೀರದಲ್ಲಿ ಶಿವಲಿಂಗ ನಿರ್ಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ಅದೇ ರೀತಿ ಮೀನುಗಾರೆಲ್ಲರೂ ಒಗ್ಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಸಮುದ್ರದಲ್ಲಿ ಮಹಿಳೆಯರು ಕುಂಕುಮ ಅರಿಶಿಣ ಸಮರ್ಪಿಸಿ ಹಾಲನ್ನು ಸಮುದ್ರಕ್ಕೆ ಅರ್ಪಿಸುವ ಮೂಲಕ ಮುಂದಿನ ದಿನದಲ್ಲಿ ವೃತ್ತಿಯಾದ ಮೀನುಗಾರಿಕೆಯಲ್ಲಿ ಹೆಚ್ಚಿನ ಸಂಪತ್ತು ಲಭಿಸಲಿ ಕಡಲಿನಿಂದ ಬರುವ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ರು.

RELATED ARTICLES

Related Articles

TRENDING ARTICLES